ಗೋಪೇಶ್ವರ: ಬದರೀನಾಥಕ್ಕೆ ಯಾತ್ರಾರ್ಥಿಗಳನ್ನು ಹೊತ್ತೂಯ್ಯುವಂಥ ಹೆಲಿಕಾಪ್ಟರ್‌ಗಳಿಗೆ ಶುಲ್ಕ ವಿಧಿಸಲು ಬದ್ರಿನಾಥ ನಗರ ಪಂಚಾಯತ್ ನಿರ್ಧರಿಸಿದೆ.
Advertisement
ಈ ವರ್ಷದಿಂದಲೇ ವಾಣಿಜ್ಯ ಹೆಲಿಕಾಪ್ಟರ್‌ಗಳು “ಪರಿಸರ ಅಭಿವೃದ್ಧಿ ಶುಲ್ಕ’ವನ್ನು ಪಾವತಿಸಬೇಕು ಎಂದು ಘೋಷಿಸಿದೆ. ಯಾತ್ರಿಗಳನ್ನು ಒಯ್ಯುವ ಕಾಪ್ಟರ್‌ಗಳಿಗೆ ಶುಲ್ಕ ವಿಧಿಸುತ್ತಿರುವುದು ಇದೇ ಮೊದಲು. ಬದ್ರಿನಾಥಕ್ಕೆ ಸಂಚರಿಸುವ ವಾಣಿಜ್ಯ ಹೆಲಿಕಾಪ್ಟರ್‌ಗಳು ಪ್ರತಿ ಟ್ರಿಪ್‌ಗೆ 1 ಸಾವಿರ ರೂ.ಗಳ ಪರಿಸರ ಅಭಿವೃದ್ಧಿ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಪಂಚಾಯತ್ ಹೇಳಿದೆ.