Advertisement
ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಎಂಆರ್‌ಎನ್ (ನಿರಾಣಿ) ಉದ್ಯಮ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿಕಬ್ಬು ನುರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
Related Articles
Advertisement
ಕಬ್ಬು ಬೆಳೆಯುವ ರೈತರಿಗೆ ನಿಶ್ಚಿತ ಮಾರುಕಟ್ಟೆ ಒದಗಿಸುವ ಮಹಾದಾಸೆಯಿಂದ ನಿರಾಣಿ ಸಮೂಹ ಈಭಾಗದಲ್ಲಿ ಎಂ.ಆರ್.ಎನ್, ಕೇದಾರನಾಥ ಹಾಗೂ ಬಾದಾಮಿ ಸಕ್ಕರೆ ಕಾರ್ಖಾನೆ ಆರಂಭಿಸಿದೆ. ಆ ಮೂಲಕ3ನೇ ಕಾರ್ಖಾನೆ ಈಗ ಕಾರ್ಯಾರಂಭ ಮಾಡಿದೆ. ಎಂದು ಹೇಳಿದರು.
48ಗಂಟೆಯಲ್ಲಿ ಬಿಲ್ ಪಾವತಿಗೆ ವ್ಯವಸ್ಥೆ: ರೈತರಿಗೆ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡುವ ಮೂಲಕ ರೈತನ ಶ್ರಮಕ್ಕೆ ತಕ್ಕ ಆದಾಯ ದೊರೆಯುವಂತೆಮಾಡುವುದು ನಿರಾಣಿ ಸಮೂಹದ ಮೊದಲ ಆದ್ಯತೆಯಾಗಿದೆ. ಈ ಹಂಗಾಮಿನಲ್ಲಿ ಎಂಆರ್‌ಎನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ರೈತರಿಗೆಜ.31 ರವರೆಗೆ ಹಾಗೂ ಕೇದಾರನಾಥ ಶುಗರ್ ಕಬ್ಬು ಪೂರೈಸುತ್ತಿರುವ ರೈತರಿಗೆ ಫೆ.7 ರವರೆಗಿನ ಬಿಲ್ಲುಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಅದರಂತೆ ಬಾದಾಮಿ ಶುಗರ್ಗೆ ಕಬ್ಬು ಕಳಿಸುವ ರೈತರಿಗೆ ಕಬ್ಬು ಪೂರೈಸಿದ 48 ಗಂಟೆಗಳಲ್ಲಿ ಬಿಲ್ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.
ಹಿರಿಯ ಮುಖಂಡ ಪಿ.ಆರ್. ಗೌಡರ ಮಾತನಾಡಿ, ಹಲವಾರು ಸ್ಥಗಿತಗೊಂಡ ಕಾರ್ಖಾನೆಗಳಿಗೆ ಮರುಜೀವ ನೀಡಿ ಯಶಸ್ವಿಯಾಗಿರುವ ಸಚಿವ ಮುರುಗೇಶ ನಿರಾಣಿಯ ಅವರ ಮಾರ್ಗದರ್ಶನದಲ್ಲಿ ಬಾದಾಮಿ ಶುಗರ್ ಇನ್ನು ಮುಂದೆ ನಿರಾಂತಕವಾಗಿ ಕಾರ್ಯ ನಿರ್ವಹಿಸಲಿದೆ. ಈ ಭಾಗದ ರೈತರ ಸೇವೆಯಕಾರ್ಯದಲ್ಲಿ ನಿರತವಾಗಲಿದೆ ಎಂದು ಹೇಳಿದರು. ಮುಖಂಡ ಮಧು ಯಡ್ರಾಮಿ ಮಾತನಾಡಿ,ಬಾದಾಮಿ ತಾಲೂಕಿನಲ್ಲಿ ನಿರಾಣಿ ಸಮೂಹ 3ಕಾರ್ಖಾನೆ ಪ್ರಾರಂಭಿಸಿರುವುದರಿಂದ ರೈತರಿಗೆ ಅನುಕೂಲವಾಗುವ ಜತೆಗೆ ಈ ಭಾಗದ ಯುವಕರಿಗೆ ಸ್ಥಳಿಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಇದು ಬಾದಾಮಿ ತಾಲೂಕಿನ ಆರ್ಥಿಕ ವಿಕಾಸಕ್ಕೆ ನಾಂದಿಯಾಗಲಿದೆ ಎಂದು ತಿಳಿಸಿದರು.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ ಪಾಟೀಲ ಮಾತನಾಡಿ ಕಾರ್ಮಿಕರು ಹಾಗೂ ಅಧಿಕಾರಿಗಳ ಅವಿರತ ಶ್ರಮದಿಂದ ಮುಚ್ಚಿದ ಕಾರ್ಖಾನೆಯನ್ನು ಕಡಿಮೆ ಅವಧಿಯಲ್ಲಿ ಪುನರಾರಂಭ ಮಾಡಲು ಸಹಕಾರಿಯಾಗಿದೆ. ಬಾದಾಮಿ ಭಾಗದ ರೈತರ ಪಾಲಿಗೆ ವರದಾನವಾಗಲಿರುವ ಕಾರ್ಖಾನೆಯಅಭಿವೃದ್ದಿಗೆ ಕೈಜೋಡಿಸಬೇಕು ಎಂದರು. ಬೀಳಗಿ ಬಿಜೆಪಿ ಘಟಕದ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಮುಖಂಡರಾದ ಮಹೆಂದ್ರ ಪಾಟೀಲ, ಮುಚಖಂಡಯ್ಯ ಹಂಗರಗಿ, ಆರ್.ವಿ. ವಟ್ನಾಳ ಮುಂತಾದವರು ಉಪಸ್ಥಿತರಿದ್ದರು.