ಶಶಿಧರ ವಸ್ತ್ರದ
ಬಾದಾಮಿ: ಪಟ್ಟಣದ ಆನಂದ ನಗರದಲ್ಲಿ ನಿರ್ಮಿಸಿರುವ ಸಮುದಾಯ ಭವನ ಉಪಯೋಗವಿಲ್ಲದೇ ಅನಾಥವಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸಮುದಾಯ ಭವನ ನಿರ್ಮಿಸಲಾಗಿದ್ದು, ಆದರೆ ಅದನ್ನು ಬಳಸದೇ ಹಾಗೆ ಬಿಡಲಾಗಿದೆ.
ಎಂ.ಕೆ. ಪಟ್ಟಣಶೆಟ್ಟಿ ಅವರು ಶಾಸಕರಾಗಿದ್ದ ಅವಧಿಯಲ್ಲಿ 2009-10ನೇ ಸಾಲಿನ ಪುರಸಭೆ ವತಿಯಿಂದ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯಡಿ 10.62 ಲಕ್ಷ ರೂ. ಅನುದಾನ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದೇ ಅನಾಥವಾಗಿದೆ.
ಕಾಂಪೌಂಡ್ ಇದೆ. ಗೇಟ್ ಇಲ್ಲ; ಪುರಸಭೆ ವತಿಯಿಂದ ಲಕ್ಷಾಂತರ ರೂ.ಅನುದಾನ ಖರ್ಚು ಮಾಡಿ ಸಮುದಾಯ ಭವನ ನಿರ್ಮಿಸಲಾಗಿದೆ. ಭವನಕ್ಕೆ ಸೂಕ್ತವಾದ ಕಾಂಪೌಂಡ್ ಇದೆಯಾದರೂ ಗೇಟ್ ಇಲ್ಲದಾಗಿದೆ. ಸಮುದಾಯ ಭವನದ ಆವರಣದಲ್ಲಿ ಕಸ ಕಡ್ಡಿ ಬೆಳೆದಿದೆ. ಹಂದಿಗಳು, ಆಡು, ಹಸುಗಳು ಆವರಣದಲ್ಲಿ ಬಂದು ಹೊಲಸು ಮಾಡುತ್ತಿವೆ. ಶೌಚಾಲಯ ಬಾಗಿಲು ಇಲ್ಲ;ಇಲ್ಲಿ ಅಗತ್ಯಕ್ಕೆ ತಕ್ಕಂತೆ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಶೌಚಾಲಯಕ್ಕೆ ಬಾಗಿಲು ಮುರಿದಿವೆ. ಸೂಕ್ತ ನಿರ್ವಹಣೆ ಇಲ್ಲದಾಗಿದೆ. ಪಟ್ಟಣದ ಮದ್ಯಭಾಗದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನವನ್ನು ಪುರಸಭೆಯವರು ಸೂಕ್ತ ನಿರ್ವಹಣೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕೆಂಬುದು ನಾಗರಿಕರು ಆಗ್ರಹವಾಗಿದೆ.
ಪುರಸಭೆಯವರು ನಿರ್ಮಿಸಿರುವ ಸಮುದಾಯ ಭವನ ಉಪಯೋಗ ಇಲ್ಲದಾಗಿದೆ. ಸಂಬಂಧಿಸಿದ ಅಧಿ ಕಾರಿಗಳು ಸೂಕ್ತ ನಿರ್ವಹಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ?
.
ಹೆಸರು ಹೇಳಲು ಇಚ್ಚಿಸದ
ಆನಂದ ನಗರ ನಿವಾಸಿ.
ಬಾದಾಮಿ ನಗರದ ಆನಂದ ನಗರದ ಸಮುದಾಯ ಭವನವನ್ನು ಪುರಸಭೆಯಿಂದ ಉಪಯೋಗ ಮಾಡಲಾಗುತ್ತಿದೆ. ಕಾಂಪೌಂಡ್ ಇದೆ. ಗೇಟ್ ಅಳವಡಿಸಲಾಗುವುದು. ಉಳಿದ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲಾಗುವುದು.
ಜ್ಯೋತಿ ಗಿರೀಶ, ಮುಖ್ಯ
ಅಧಿಕಾರಿಗಳು ಪುರಸಭೆ ಬಾದಾಮಿ