Advertisement
ಘಟಪ್ರಭಾ ಯೋಜನೆಯಡಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಬಾಗ, ರಾಮದುರ್ಗ, ಸವದತ್ತಿ, ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ ತಾಲೂಕುಗಳ ಒಟ್ಟಾರೆ 31,0823 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲು ಯೋಜಿಸಲಾಗಿದೆ. ಈ ಯೋಜನೆಯಡಿ ಬಲದಂಡೆ ಮುಖ್ಯ ಕಾಲುವೆಯ 199 ಕಿ.ಮೀ ಮತ್ತು ಎಡದಂಡೆ ಮುಖ್ಯ ಕಾಲುವೆಯ 109 ಕಿ.ಮೀ, ಬಲದಂಡೆ ಉಪಕಾಲುವೆ 88 ಕಿ.ಮೀ ಎಡದಂಡೆ ಉಪ ಕಾಲುವೆ 210 ಕಿ.ಮೀ ಮತ್ತು ಬಲದಂಡೆ ಹಂಚು ಕಾಲುವೆ 994 ಕಿ.ಮೀ ಹಾಗೂ ಎಡದಂಡೆ ಹಂಚು ಕಾಲುವೆ 494 ಕಿ.ಮೀ. ಒಳಗೊಂಡಿದೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವರದಿ ಆಧರಿಸಿ ಈ ಯೋಜನೆ ಕೈಗೊಳ್ಳಲಾಗಿದೆ.
ಕಲ್ಪಿಸುವಂತೆ ಒತ್ತಾಯಿಸುತ್ತಿರುವುದಾಗಿ ಸದರಿ ಯೋಜನೆಗೆ ಅವಶ್ಯವಿರುವ 3.64 ಟಿಎಂಸಿ ನೀರಿನ ಹಂಚಿಕೆ ಅವಶ್ಯವಿದೆ ಎಂದು ಅಂದಾಜಿಸಲಾಗಿದೆ.
Related Articles
Advertisement
ಘಟಪ್ರಭಾ ನದಿಯಿಂದ ಘಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ 149.700 ವರೆಗಿನ ಅಂತರವು ಸುಮಾರು 19.0 ಕಿ.ಮೀ ಇದ್ದು, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬರುತ್ತಿದ್ದು, ಈ ಸ್ಥಳದಿಂದ ನೀರನ್ನು ಎತ್ತಿ ಜಿಆಬಿಆರ್‌ಸಿಗೆ ಪೂರೈಸಲು ಉದ್ದೇಶಿಸಿದ್ದು, ಈ ರೀತಿ ಮೇಲೆತ್ತಿದ ನೀರಿನಿಂದ 14525.43 ಹೆಕ್ಟೇರ್‌ಗೆ ನೀರಾವರಿ ಒದಗಿಸಲು ಅಂದರೆ ಕಲಾದಗಿ ವಿತರಣಾ ಕಾಲುವೆಯಿಂದ ಮುಚಖಂಡಿ ವಿತರಣಾ ಕಾಲುವೆವರೆಗೆ ನೀರಾವರಿ ಮಾಡಲು ಉದ್ದೇಶಿಸಲಾಗಿದೆ.
ಬಾಗಲಕೋಟೆ ತಾಲೂಕಿನ ದೇವನಾಳ ಗ್ರಾಮದ ಬಳಿ ಅಂದಾಜು 25.0 ಕಿ.ಮೀನಷ್ಟು ದೂರದ ಹೆರಕಲ್ ಸೇತುವೆ ಕಮ್ ಬ್ಯಾರೇಜ್ ಮೇಲ್ಭಾಗದಲ್ಲಿ ಘಟಪ್ರಭಾ ನದಿಯಿಂದ ನೀರು ಎತ್ತಿ ಜಿಆಬಿರ್‌ಸಿ ಸರಪಳಿ 149+700ರಲ್ಲಿ ಡಿಸಾcರ್ಜ್ ಪಾಯಿಂಟ್‌ನಲ್ಲಿ ನೀರು ಹರಿಸಿ 14525.43 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಅನವಾಲ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗಿದೆ.
ರೈತರು, ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ರೈತರ ಹಿತದೃಷ್ಟಿಯಿಂದ ಬಾಧಿತ 24,570 ಹೆಕ್ಟೇರ್ ಅಚ್ಚುಕಟ್ಟಿನ ಪೈಕಿ ಸುಮಾರು 14,525.43ಹೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ (ಕಲಾದಗಿ ವಿತರಣಾ ಕಾಲುವೆಯಿಂದ ಮುಚಖಂಡಿ ವಿತರಣಾ ಕಾಲುವೆವರೆಗೆ) ನೀರಾವರಿ ಸೌಲಭ್ಯ ಕಲ್ಪಿಸಲು411.10 ಕೋಟಿ ರೂ. ಮೊತ್ತಕ್ಕೆ ಸರ್ಕಾರಕ್ಕೆ ಅನುಮೋದನೆ ನೀಡಿದ್ದು, ರೈತರ ಮೊಗದಲ್ಲಿ ಹರ್ಷ ತಂದಿದೆ.
ಜಿಲ್ಲೆಯ ಬರಡು ಭೂಮಿಗೆ ನೀರಾವರಿ ಕಲ್ಪಿಸುವ ಅನವಾಲ ಏತ ನೀರಾವರಿ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 411 ಕೋಟಿ ರೂ. ಮೊತ್ತದ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.ಗೋವಿಂದ ಕಾರಜೋಳ,
ಜಲ ಸಂಪನ್ಮೂಲ ಸಚಿವ