Advertisement
ಬಾಣಪದವು ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಜಿ.ಪಂ.ನಿಂದ ಕೊಳವೆ ಬಾವಿ ಮಂಜೂರಾಗಿದೆ. ತತ್‌ಕ್ಷಣವೇ ಕೊಳವೆ ಬಾವಿ ತೆರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಅಧ್ಯಕ್ಷ ಕೇಶವ ಗೌಡ ಕನ್ನಯ ತಿಳಿಸಿದರು. ಮೈಕೂಲಿ, ಕೆಲಂದೂರು ಹಾಗೂ ಮೀನಾವು ಪ್ರದೇಶದಲ್ಲಿ ನೀರಿನ ಸಮಸ್ಯೆ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಗ್ರಾ.ಪಂ. ವತಿಯಿಂದ ಕೊಳವೆಬಾವಿ ಕೊರೆಯುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಾಮಾನ್ಯ ಸಭೆಯ ಮೊದಲು ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ ವ್ಯಾಪ್ತಿಯ 8 ಸಮಿತಿಗಳ ಪಂಪ್ ಚಾಲಕರ ಸಭೆ ನಡೆಸಿ ಸಮಸ್ಯೆ ಮತ್ತು ಸಲಹೆ ಸೂಚನೆಗಳನ್ನು ಪಡೆಯಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಶಾರದಾ ಕೆ. ಉಪಸ್ಥಿತರಿದ್ದರು.
ಕುಡಿಯುವ ನೀರಿನ ಫಲಾನುಭವಿಗಳು ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು. ನೀರನ್ನು ಆವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸುವಂತೆ ತಿಳಿಸಲಾಯಿತು.
Related Articles
ನೀರು ಪೂರೈಕೆಯ ಎಂಟು ಸಮಿತಿಗಳಿಂದ ಸುಮಾರು 2 ಲಕ್ಷ ರೂ. ನೀರಿನ ಬಿಲ್ ಬಾಕಿ ಇದೆ. ಪಂಪ್ ಚಾಲಕರ ವೇತನ, ದುರಸ್ತಿ, ವಿದ್ಯುತ್ ಬಿಲ್ ಕಟ್ಟಲು ಪಂಚಾಯತಿ ಅನುದಾನವನ್ನು ವಿನಿಯೋಗ ಮಾಡಿದಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಈ ಬಗ್ಗೆ ಸಮಿತಿ ಅಧ್ಯಕ್ಷರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪಿಡಿಒ ವಸೀಮ್ ಗಂಧದ ಆದೇಶಿಸಿದರು.
Advertisement