Advertisement

ಪಡಿತರ ಅಂಗಡಿಯಲ್ಲಿ ಕಳಪೆ ಆಹಾರ: ಕ್ರಮಕ್ಕೆ ಮನವಿ

03:33 PM Sep 20, 2018 | Team Udayavani |

ಕೋಲಾರ: ಜಿಲ್ಲೆಯ ಕೆಜಿಎಫ್‌ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಮಹದೇವಪುರ ಡಿಪೋ ನಂ. 103
ಮಂಜುಳಮ್ಮ ಹೆಸರಿನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಗೆ ಕಳಪೆ ಆಹಾರ ಸಾಮಾಗ್ರಿ ವಿತರಿಸಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಕ್ರಿಯಾ ಸಮಿತಿ ಮತ್ತು ಮಹದೇವಪುರ, ವಡ್ಡರಹಳ್ಳಿ, ಮಿಂಡಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಡಿಪೋ ನಂ. 103 ಮಂಜುಳಮ್ಮ ಹೆಸರಿನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಏಜೆಂಟ್‌ ಹರೀಶ್‌ ಪಡಿತರ
ಚೀಟಿಗೆ ಕಳಪೆ ಸಾಮಾಗ್ರಿ ವಿತರಿಸಿಸುತ್ತಿದ್ದಾರೆ. ತಿಂಗಳು ಪೂರ್ತಿ ವಿತರಣೆ ಮಾಡಬೇಕೆಂದು ಆದೇಶವಿದ್ದರೂ ಸಹ
ಒಂದು ದಿನ ಮಾತ್ರ ವಿತರಿಸುತ್ತಿದ್ದಾರೆ. ಮನೆಗಳಲ್ಲಿ ಗ್ಯಾಸ್‌ ಇದೆ ಎಂದು ಹೇಳಿ ಮೊದಲೇ ಪಟ್ಟಿ ಮಾಡಿಕೊಂಡು ಸೀಮೆಎಣ್ಣೆ ಹಾಕದೇ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಕ್ಕಿ ವಿತರಣೆ ಮಾಡುವ ಮೊದಲು ಥಂಬ್‌ ತೆಗೆದುಕೊಂಡು ನಾಳೆ ಅಕ್ಕಿ ವಿತರಣೆ ಮಾಡುವುದಾಗಿ ತಿಳಿಸಿತ್ತಾರೆ. ಅ ದಿನ ಹೋಗದೆ ಮಾರನೇ ದಿನ ಹೋದ ಪಡಿತರ ಚೀಟಿದಾರರಿಗೆ ಅಕ್ಕಿ ಇಲ್ಲ ಎನ್ನುತ್ತಾರೆ. ಇದರಿಂದ ಸುತ್ತಮ್ಮುತ್ತಲಿನ ಮೂರು ಹಳ್ಳಿಗಳ ಬಡವರಿಗೆ ತುಂಬಾ ಅನಾನುಕೂಲವಾಗಿದೆ. ಈ ಸುತ್ತಮುತ್ತಲಿನ ಗ್ರಾಮಸ್ಥರು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು, ಥಂಬ್‌ ಕೊಡಲು ಒಂದು ದಿನದ ಕೂಲಿ ನಷ್ಟವಾಗುತ್ತದೆ. ಅಂಗಡಿಗೆ ಹೋದರೆ 2 ದಿನದ ಕೂಲಿ ನಷ್ಟವಾಗುತ್ತದೆ. 110 ರೂ. ತೆಗೆದುಕೊಂಡು ಕಳಪೆ ಆಹಾರ ಸಾಮಾಗ್ರಿ ವಿತರಿಸುತ್ತಿದ್ದಾರೆ ಎಂದು ದೂರಿದರು.

ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸಾರ್ವಜನಿ ಕರಿಗೆ ಅನಕೂಲ ಮಾಡಿಕೊಡಬೇಕು.
ವಡ್ಡರಹಳ್ಳಿ ಗ್ರಾಮದಲ್ಲಿ 160 ಕಾರ್ಡು ದಾರರಿದ್ದು, ಪಕ್ಕದ ಹಳ್ಳಿಯನ್ನು ಸೇರಿಸಿ ವಡ್ಡರಹಳ್ಳಿ ಗ್ರಾಮದಲ್ಲಿ ಡಿಪೋ
ಸ್ಥಾಪಿಸಲು ಅನುಮತಿ ಕಲ್ಪಿಸಿಕೊಡ ಬೇಕೆಂದು ಅವರು ಆಗ್ರಹಿಸಿದರು. 

ಈಗಾಗಲೇ ತಹಶೀಲ್ದಾರ್‌, ಆಹಾರ ನಿರೀಕ್ಷಕರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಹದೇವಪುರ, ವಡ್ಡರಹಳ್ಳಿ, ಮಿಂಡಹಳ್ಳಿ ಗ್ರಾಮಸ್ಥರಿಗೆ ಅನಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.

Advertisement

ನಿಯೋಗದಲ್ಲಿ ದಲಿತ ಕ್ರಿಯಾ ಸಮಿತಿ ಜಿಲ್ಲಾ ಸಂಚಾಲಕ ಬಿ.ಎಂ. ರಮೇಶ್‌, ಗ್ರಾಮ ಪಂಚಾಯತಿ ಸದಸ್ಯ ವಡ್ಡರಹಳ್ಳಿ ಶಿವಪ್ಪ, ಶ್ರೀನಾಥ್‌, ಶಿವಕುಮಾರ್‌, ಗೋಪಾಲಕೃಷ್ಣ, ಮಂಜುನಾಥ್‌, ವೆಂಕಟರಾಮ್‌, ಮಹೇಶ್‌, ಚಂದ್ರಶೇಖರ್‌, ಗಜೇಂದ್ರ, ಕೃಷ್ಣಪ್ಪ, ಆನಂದ್‌, ವೆಂಕಟೇಶಪ್ಪ, ಮಹದೇವಪುರ ವೆಂಕಟೇಶ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next