Advertisement
ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅವರು ಸ್ವತಃ ತಮ್ಮ ಸಿಬ್ಬಂದಿಯೊಂದಿಗೆ ದೇವರಹಿಪ್ಪರಗಿಯಲ್ಲಿನ ಇಟ್ಟಂಗಿ ಭಟ್ಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಶಾಲಾ ಮಕ್ಕಳನ್ನು ಗುರುತಿಸಿದ್ದಾರೆ. ತಾಲೂಕಿನ ಕೋರವಾರ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆ (ಆರ್‌ಎಂಎಸ್‌ಎ)ಯ 10ನೇ ತರಗತಿಯವಿದ್ಯಾರ್ಥಿನಿ ಆಯಿಶಾ ಕೊಳಾಳ ಹಾಗೂ ಕೊಂಡಗೂಳಿ ಎಂಪಿಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಇರ್ಫಾನ್ ತಾಂಬೋಳಿ ಅವರನ್ನು ಗುರುತಿಸಿದ್ದಾರೆ. ಅವರನ್ನು ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಶಾಲೆಗೆ ಕಳುಹಿಸಿದ್ದಾರೆ.
ಅನಾನೂಕೂಲವಾಗುತ್ತಿದ್ದಲ್ಲಿ ತಮ್ಮನ್ನು ಭೇಟಿ ಮಾಡಿ. ಆದರೆ ಮಕ್ಕಳನ್ನು ಕೂಲಿಗೆ ಕಳುಹಿಸಬೇಡಿ. ಕೂಲಿ ಮಾಡುವ ಮಕ್ಕಳನ್ನು ನೋಡಲು ನನ್ನಿಂದಾಗುವುದಿಲ್ಲ. ಸರಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
Related Articles
Advertisement
ತಾಲೂಕಿನ ಕೋರವಾರ ಗ್ರಾಮದ ಸರಕಾರಿ ಉರ್ದು ಪ್ರೌಢಶಾಲೆ ಮುಖ್ಯೋಧ್ಯಾಪಕ ಎಂ.ಎಸ್. ಸ್ಥಾವರಮಠ, ಅತಿಥಿ ಶಿಕ್ಷಕ ಐ.ಬಿ. ಚಿಗರೊಳ್ಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆಯಿಶಾ ಕೊಳಾಳ ಹಾಗೂ ಇರ್ಫಾನ್ ತಾಂಬೋಳಿ ಸೋಮವಾರದಿಂದ ಶಾಲೆಗೆ ಹೋಗುತ್ತಿದ್ದಾರೆ. ಅವರ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವಂತೆ ಆಯಾ ಶಿಕ್ಷಕರಿಗೆ ಮಾರ್ಗದರ್ಶನ ನೀಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಪತ್ರಿಕೆಗೆ ತಿಳಿಸಿದ್ದಾರೆ.
ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕಳುಹಿಸುವ ಕಾರ್ಯದಲ್ಲಿ ಸ್ವತಃ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅವರ ಕಾರ್ಯ ಶ್ಲಾಘನೀಯ. ಇಂಥ ಕಾರ್ಯಾಚರಣೆ ಸಿಂದಗಿ ತಾಲೂಕಿನಲ್ಲಿ ಪ್ರಥಮವಾಗಿದೆ. ಸಿದ್ದಣ್ಣ ಚೌಧರಿ ಕನ್ನೊಳ್ಳಿ ಜಿಲ್ಲಾ ರೈತ ಮುಖಂಡ
ಮನೆಯಲ್ಲಿ ಬಹಳ ಕಷ್ಟವಿದೆ. ನನಗೆ ಶಾಲೆ ಕಲಿಯಲು ಇಷ್ಟ. ಆದರೆ ಬಡತನಕ್ಕಾಗಿ ಕೂಲಿ ಕೆಲಸಕ್ಕೆ ಬಂದಿದ್ದೇನೆ. ಬಿಇಒ ಸರ್ ಅವರು ನೀನು ಮೊದಲು ಶಾಲೆ ಕಲಿ ನೀನಗೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ. ಅವರಿಗೆ ತುಂಬಾ ಧನ್ಯವಾದಗಳು. ನನಗೆ ಬಹಳ ಸಂತೋಷವಾಗಿದೆ. ಆಯಿಶಾ ಕೊಳ್ಯಾಳ ,10ನೇ ತರಗತಿ ವಿದ್ಯಾರ್ಥಿನಿ