Advertisement

ಗ್ರಾಮಾಂತರ ಪ್ರದೇಶದಲ್ಲಿ ಎಸ್ಸೆಸ್‌ಗೆ ಹಿನ್ನಡೆ!

03:46 PM May 19, 2018 | Team Udayavani |

ದಾವಣಗೆರೆ: ಕ್ಷೇತ್ರ ಪುನರ್‌ ವಿಂಗಡನೆಯಿಂದ ಹೊಸದಾಗಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಈ ಬಾರಿಯ ಗೆಲುವಿನಿಂದಾಗಿ ಹ್ಯಾಟ್ರಿಕ್‌ ಸಾಧನೆಗೈದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರ ಎದುರಾಳಿ ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ಸೋಲಿಗೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಲಭಿಸದಿರುವುದೇ ಕಾರಣ ಎಂಬುದು ವಾರ್ಡ್‌ವಾರು ಮತಗಳಿಕೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

Advertisement

ಮಹಾನಗರ ಪಾಲಿಕೆಯ ಒಟ್ಟು 41 ವಾರ್ಡ್‌ಗಳಲ್ಲಿ 18 ವಾರ್ಡ್‌ಗಳು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುತ್ತವೆ. 1ರಿಂದ 17 ಮತ್ತು 22ನೇ ವಾರ್ಡ್‌ ಈ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಈ ಪೈಕಿ ಅಲ್ಪಸಂಖ್ಯಾತರು
ವಾಸಿಸುವ ವಾರ್ಡ್‌ಗಳಲ್ಲಿ ಈ ಬಾರಿಯೂ ಮತದಾರರು ಕಾಂಗ್ರೆಸ್‌ ಪರ ಹೆಚ್ಚು ಒಲವು ತೋರಿದ್ದಾರೆ. ಜೆಡಿಎಸ್‌ನಿಂದ ಮುಸ್ಲಿಂ ಮುಖಂಡ ಜೆ. ಅಮಾನುಲ್ಲಾ ಖಾನ್‌ ಸ್ಪರ್ಧಿಸಿದ್ದರೂ ಸಹ ಆ ಸಮುದಾಯದ ಮತದಾರರು ಅವರನ್ನು ಬೆಂಬಲಿಸಿಲ್ಲ.

ಮಂಡಕ್ಕಿ ಭಟ್ಟಿ ಬಡಾವಣೆ, ಭಾಷಾನಗರ, ಅಹ್ಮದ್‌ ನಗರ, ಆಜಾದ್‌ ನಗರ, ಬಸವರಾಜ ಪೇಟೆ, ಚಾಮರಾಜ ಪೇಟೆ ಭಾಗಗಳಲ್ಲಿ ಮುಸ್ಲಿಂ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದು, ಈ ಎಲ್ಲಾ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ
ಉತ್ತಮ ಮುನ್ನಡೆ ದೊರಕಿದೆ. ಯಶವಂತರಾವ್‌ ಜಾಧವ್‌ರಿಗೆ ಬಹುತೇಕ ಬೇರೆ ಪ್ರದೇಶಗಳಲ್ಲಿ ಲೀಡ್‌ ಸಿಕ್ಕಿದೆ. ಎಸ್‌ಜೆಎಂ ನಗರ, ಕುರುಬರಕೇರಿ, ಕಾಯಿಪೇಟೆ, ಮಂಡಿಪೇಟೆ, ಬಸಾಪುರ ಭಾಗದಲ್ಲಿ ಬಿಜೆಪಿಗೆ ಕಾಂಗ್ರೆಸ್‌ಗಿಂತ ಹೆಚ್ಚಿನ ಮತ ಸಿಕ್ಕಿರುವುದು ಗಮನಾರ್ಹ. ಇನ್ನೊಂದು ವಿಶೇಷ ಸಂಗತಿ ಎಂದರೆ ಮುಸ್ಲಿಂರೇ ಹೆಚ್ಚಾಗಿ ವಾಸಿಸುವ, ಸ್ವಲ್ಪ ಪ್ರಮಾಣದಲ್ಲಿ ಹಿಂದುಗಳೂ ಇರುವ ಜಾಲಿನಗರದಲ್ಲೂ ಸಹ ಬಿಜೆಪಿಗೆ ಮುನ್ನಡೆ ಸಿಕ್ಕಿರುವುದು.
 
ಇನ್ನು ಗ್ರಾಮಾಂತರ ಪ್ರದೇಶದ ಮತದಾರರು ಕಾಂಗ್ರೆಸ್‌ ಬದಲು ಬಿಜೆಪಿ ಬೆಂಬಲಿಸಿದ್ದಾರೆ. ಗ್ರಾಮಾಂತರ
ಭಾಗದಲ್ಲಿ ಚಲಾವಣೆಯಾದ ಒಟ್ಟು 27,489 ಚಲಾಯಿತ ಮತಗಳ ಪೈಕಿ ಬಿಜೆಪಿಯ ಜಾಧವ್‌ಗೆ 13,658 ಮತಗಳು
ದೊರೆತಿದ್ದರೆ, ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪನವರಿಗೆ 11,998 ಮತ ಲಭ್ಯವಾಗಿವೆ. ನಗರ ಪ್ರದೇಶದಲ್ಲಿ ಒಟ್ಟು ಚಲಾವಣೆಯಾದ 1,08,180 ಮತಗಳ ಪೈಕಿ ಶಾಮನೂರು ಶಿವಶಂಕರಪ್ಪನವರಿಗೆ ಹೆಚ್ಚಿನ ಮತ ಸಿಕ್ಕಿವೆ. ಶಾಮನೂರು ಈ ಭಾಗದಲ್ಲಿ 59,169 ಮತ ಗಳಿಸಿದ್ದಾರೆ. 

ಬಿಜೆಪಿಗೆ 31,638 ಮತ ಸಿಕ್ಕಿವೆ. ಜೆಡಿಎಸ್‌ನ ಅಮಾನುಲ್ಲಾ ಖಾನ್‌ ಪಡೆದ ಒಟ್ಟು 6,020 ಮತಗಳ ಪೈಕಿ ನಗರ ಪ್ರದೇಶದಲ್ಲಿಯೇ 4,903 ಮತ ಪಡೆದಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಅವರಿಗೆ ಹೆಚ್ಚಿನ ಬೆಂಬಲ ದೊರೆಯದಿರುವುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮುಸ್ಲಿಂ ಮತಗಳನ್ನು ಸೆಳೆಯಬೇಕೆಂದು ಬಿಜೆಪಿಯವರು ಸಾಕಷ್ಟು ಶ್ರಮಿಸಿದ್ದರು. ಕೆಲ ಯುವಕರನ್ನು ತನ್ನತ್ತ ಸೆಳೆದು ಮತ ಗಳಿಸಲು ತಂತ್ರಗಾರಿಕೆ ಸಹ ರೂಪಿಸಿದ್ದರು. ಜೊತೆಗೆ ಇದೇ ಮೊದಲ ಬಾರಿಗೆ ಈ ಭಾಗಗಳಲ್ಲಿ ಸಂಚರಿಸಿ, ಮತಯಾಚಿಸಲಾಗಿತ್ತು. ಆದರೆ,
ಅದ್ಯಾವುದೂ ಫಲ ನೀಡಿಲ್ಲ. ಆದರೆ, ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಒಂದಿಷ್ಟು ಮತ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಒಂದು ವೇಳೆ ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಸ್ಪರ್ಧಿಸಿದ್ದ ಸೈಯದ್‌ ಸೈಫುಲ್ಲಾರಂತೆ ಅಮಾನುಲ್ಲಾ ಖಾನ್‌ ಮುಸ್ಲಿಂ ಸಮಾಜದ ಮತಗಳನ್ನು ಹೆಚ್ಚು ಸೆಳೆದಿದ್ದಲ್ಲಿ ಶಾಮನೂರು ಶಿವಶಂಕರಪ್ಪನವರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿ¨ 

Advertisement

ಗೆಲುವಲ್ಲಿ ಪ್ರಮುಖ ಪಾತ್ರ ಕಾಂಗ್ರೆಸ್‌ ಗೆಲುವಿಗೆ ಪ್ರಮುಖವಾಗಿ 3 ವಾರ್ಡ್‌ಗಳು ಪಾತ್ರ ವಹಿಸಿವೆ. ಈ ವಾರ್ಡ್‌ಗಳಲ್ಲಿ ಭರ್ಜರಿ ಲೀಡ್‌ ಸಿಕ್ಕಿದ್ದಕ್ಕೇ ಶಾಮನೂರು ಶಿವಶಂಕರಪ್ಪನವರ ಗೆಲುವು ಸಾಧ್ಯವಾಗಿದೆ. ಒಂದು ವೇಳೆ ಈ ವಾರ್ಡ್‌ಗಳಲ್ಲಿ ಅಮಾನುಲ್ಲಾ ಖಾನ್‌ ಹೆಚ್ಚಿನ ಮತ ಗಳಿಸಿದ್ದರೆ ಕಾಂಗ್ರೆಸ್‌ ಗೆಲುವು ಕಷ್ಟವಾಗುತಿತ್ತು.

ಭಾಷಾನಗರದಲ್ಲಿ ಒಟ್ಟು ಚಲಾವಣೆಯಾದ 6687 ಮತಗಳ ಪೈಕಿ ಕಾಂಗ್ರೆಸ್‌ ಗೆ 5182 ಲಭ್ಯವಾಗಿವೆ. ಮಂಡಕ್ಕಿ
ಭಟ್ಟಿ ಬಡಾವಣೆಯಲ್ಲಿ 10,387 ಮತ ಚಲಾವಣೆಯಾಗಿದ್ದು ಈ ಪೈಕಿ 8,131, ಆಜಾದ್‌ ನಗರದಲ್ಲಿ 5,608 ಮತಗಳ ಪೈಕಿ 4817, ಅಹ್ಮದ್‌ ನಗರದಲ್ಲಿ 6910 ಮತಗಳ ಪೈಕಿ 5195 ಮತಗಳು ಕಾಂಗ್ರೆಸ್‌ಗೆ ದೊರೆತಿವೆ.

„ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next