Advertisement
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಧಾರವಾಡ 2ನೇ ಅಧಿಕ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ಗೌ. ನ್ಯಾಯಾಧೀಶೆಯರಾದ ಶ್ರೀಮತಿ ಪಂಚಾಕ್ಷರಿ.ಎಮ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
Related Articles
ಸಜಾ ಬಂಧಿಯಾದ 1 ನೇ ಆರೋಪಿ ಮುಂಬೈ ಮೂಲದ ಬಚ್ಚಾಖಾನ (38), ವಿಚಾರಣಾ ಬಂಧಿಗಳಾದ ಆರೋಪಿ ನಂ.2 ಬೆತ್ತನಗೇರಿ ಮೂಲದ ಶಂಕರಗೌಡ (28 ), ಆರೋಪಿ ನಂ 3 ಮುನಿರಾಜು (24 ) ಆರೋಪಿತರು ತಮ್ಮ ಕೊಠಡಿಗಳನ್ನು ಶೋಧನೆ ಮಾಡಲು ಹೋದ ಪೊಲೀಸರಿಗೆ ನೀವ್ಯಾರು ಅಂತ ಕೂಗಾಡಿದ್ದರು.
Advertisement
ಅಲ್ಲದೆ, ಆರೋಪಿ ನಂ. 4 ಬೆಳಗಾವಿಯ ಇಕ್ಬಾಲಖಾನ ತಂದೆ ಅಮೀರಖಾನ ಪಠಾಣ (42), ಮತ್ತು ಧಾರವಾಡದ 5 ನೇ ಆರೋಪಿತನಾದ ಜಾವೇದ ತಂದೆ ಶಮಶಾದಲಿ (18) ಹಾಗೂ 10-15 ಜನ ಅಪರಿಚಿತ ಖೈದಿಗಳಿಗೆ ಕೂಗಿ ಕರೆದು, ಅವರಿಗೆ ಪ್ರೋತ್ಸಾಹಿಸಿ, ಪೊಲೀಸರ ಖಲಾಸ ಮಾಡಿರಿ, ಜೀವಸಹಿತ ಉಳಿಸಬೇಡರಿ ಎಂದುಇತರ ಖೈದಿಗಳಿಗೆ ಪ್ರಚೋದನೆ ನೀಡಿದ್ದರು.
ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ, ಹಲ್ಲೆ, ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಕಲಂ 143, 147, 148, 114, 323, 324, 307, 353, 341, 506 ಸಹ ಕಲಂ 149 ಐಪಿಸಿ.ನೇದರ ಅಡಿಯಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ ಪಿ ಎಸ್ ಐ ಮುರುಗೇಶ ಚನ್ನಣ್ಣವರ (ತನಿಖಾಧಿಕಾರಿ) ಹಾಗೂ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ (ಭಾಗಶಃ ತನಿಖಾಧಿಕಾರಿ) ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.