Advertisement

ನಿಮ್ಮ ಮಗು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೇ ? ಹಾಗಾದರೆ ಹೀಗೆ ಮಾಡಿ

04:50 PM May 22, 2021 | Team Udayavani |

ಪುಟ್ಟ ಮಕ್ಕಳು ಜಾಸ್ತಿ ಹೊತ್ತು ನಿದ್ದೆ ಮಾಡಬೇಕು. ಇದು ಆರೋಗ್ಯದ ದೃಷ್ಠಯಿಂದಲೂ ಉತ್ತಮ. ಆದರೆ, ಕೆಲವು ಕಂದಮ್ಮಗಳು ಗುಟುಕು ನಿದ್ದಗೆ ಸೀಮಿತವಾಗಿರುತ್ತವೆ. ಅಮ್ಮಂದಿರುಗಳು ಎಷ್ಟೇ ಜೋಗುಳ ಪದ ಹಾಡಿದರೂ ನಿದ್ರಾ ದೇವತೆ ಮಾತ್ರ ಕೂಸುಗಳತ್ತ ಸುಳಿಯುವುದಿಲ್ಲ.  ಈ ಸಮಸ್ಯೆ ನಿವಾರಿಸಬೇಕಾದರೆ, ನಿಮ್ಮ ಮಕ್ಕಳು ಗಡದ್ದಾಗಿ ನಿದ್ದೆ ಹೊಡೆಯಬೇಕಿದ್ದರೆ, ಈ ಕೆಳಗೆ ನಾವು ತಿಳಿಸಿರುವ ಕೆಲವು ವಿಧಾನಗಳನ್ನು ಅನುಸರಿಸಿ.

Advertisement

ನಿದ್ದೆಯ ರುಚಿ ಹತ್ತಿಸಿ:

ಮಗುವನ್ನು ಪ್ರತಿದಿನ ಮಲಗಿಸಲು ಪ್ರಯತ್ನಿಸಿ. ನೀವು ಇದನ್ನು ಮೊದಲಿನಿಂದಲೂ ಮಾಡಿದರೆ, ಅದು ತನ್ನಷ್ಟಕ್ಕೆ ಅಭ್ಯಾಸವಾಗಿಸುತ್ತದೆ. ದಿನಕಳೆದಂತೆ ನೀವು ಮಲಗಿಸುವುದು ಬೇಕಾಗಿಲ್ಲ. ಅದರ ಟೈಮ್ ಬಂದಾಗ ಅದೇ ನಿದ್ದೆಗೆ ಜಾರುತ್ತದೆ

ಮಸಾಜ್ ಮಾಡಿ:

ಮಲಗುವ ಮೊದಲು ಮಗುವಿಗೆ ಮಸಾಜ್ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಅವರ ದೇಹ ನಿದ್ರಾವಸ್ಥೆಗೆ ಜಾರುತ್ತದೆ. ಜೊತೆಗೆ ಮಸಾಜ್ ಮಕ್ಕಳಿಗೆ ನಿದ್ದೆ ಬರಲು ಸಹಾಯ ಮಾಡುತ್ತದೆ.

Advertisement

ಮಲಗುವ ಕೋಣೆ ಕತ್ತಲಾಗಿರಲಿ:

ಮಗುವನ್ನು ಮಲಗಿಸುವಾಗ ಕೋಣೆ ಕತ್ತಲಾಗಿರುವುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಕತ್ತಲೆಯಲ್ಲಿ, ನಿದ್ರೆಗೆ ಸಂಬಂಧಿಸಿದ ಹಾರ್ಮೋನ್ ಸಕ್ರಿಯಗೊಳ್ಳುತ್ತದೆ. ಈ ಹಾರ್ಮೋನ್ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಸಾಧ್ಯವಾದರೆ ಬಾಗಿಲು ಮುಚ್ಚಿ ಇದರಿಂದ ಮಗುವಿಗೆ ಅಡಚಣೆಯಿಲ್ಲದ ಉತ್ತಮ ನಿದ್ರೆ ಸಿಗುತ್ತದೆ.

ಮನೆಯಲ್ಲಿ ನಿಶ್ಯಬ್ದವಿರಲಿ:

ನಿಮ್ಮ ಮಗು ನಿದ್ದೆ ಮಾಡುವಾಗ, ಮನೆಯಲ್ಲಿ ಮಿಕ್ಸರ್, ವ್ಯಾಕ್ಯೂಮ್ ಕ್ಲೀನರ್ ಮುಂತಾದ ದೊಡ್ಡ ಶಬ್ದ ಬರುವ ಸಾಧನಗಳನ್ನು ಬಳಸಬೇಡಿ. ಈ ಶಬ್ದ ಕೇಳಿ ಮಕ್ಕಳು ಈ ಭಯದಿಂದ ಎಚ್ಚರಗೊಳ್ಳುತ್ತಾರೆ. ಅದಲ್ಲದೇ, ಮಗುವಿಗೆ ಉತ್ತಮ ನಿದ್ರೆ ಬರಲು ಸಣ್ಣ ಸಂಗೀತ ಮತ್ತು ಬೆಚ್ಚಗಿನ ಗಾಳಿ ಸಹಕಾರಿಯಾಗಿದೆ. ನೀವು ಇದನ್ನು ಅವರ ಕೋಣೆಯಲ್ಲಿ ಫಿಕ್ಸ್ ಮಾಡಬಹುದು.

ಮಗುವಿನ ಜೊತೆ ನೀವೂ ಮಲಗಬೇಡಿ:

ನೀವು ಬಯಸಿದಲ್ಲಿ, ಮಕ್ಕಳು ನಿದ್ರಿಸುವವರೆಗೂ ಅವರೊಂದಿಗೆ ಮಲಗಬಹುದು. ಆದರೆ ನಿದ್ದೆಬಂದ ಮೇಲೂ ಅವನೊಂದಿಗೆ ಅಲ್ಲಿಯೇ ಮಲಗಬೇಡಿ. ನೀವು ಹಾಗೇ ಮಲಗಿದ್ದೇ ಆದಲ್ಲಿ ಮಗುವಿಗೆ ನಿಮ್ಮ ಶಾಖ ಅಭ್ಯಾಸವಾಗುವುದು. ಮತ್ತು ನೀವು ದೂರ ಹೋದಾಗ ಮಗು ಎಚ್ಚರಗೊಳ್ಳುತ್ತದೆ. ಆದ್ದರಿಂದ ನಿಮ್ಮ ಮಗುವಿನಲ್ಲಿ ಈ ರೀತಿಯ ಅಭ್ಯಾಸವನ್ನು ನೀವು ಬೆಳೆಸಿಕೊಳ್ಳದಿರುವುದು ಉತ್ತಮ. ಮಗುವಿಗೆ ನಿದ್ದೆ ಬಂದಾಗ, ನಂತರ ಅವನನ್ನು ತೊಡೆಯಿಂದ ಅಥವಾ ಸ್ವಿಂಗ್ನಿಂದ ಹೊರಗೆ ಮಲಗಿಸಿ.

Advertisement

Udayavani is now on Telegram. Click here to join our channel and stay updated with the latest news.

Next