ಮೃದು ಚರ್ಮ ಹೊಂದಿರುವ ಕಂದಮ್ಮಗಳ ಆರೈಕೆ ಸುಲಭದ ಮಾತಲ್ಲ. ಅದರಲ್ಲೂ ಬೇಸಿಗೆ ಕಾಲದಲ್ಲಿ ಕಾಳಜಿ ಮತ್ತು ಪೋಷ ಣೆಯ ಅಗತ್ಯ ಹೆಚ್ಚಿರುತ್ತದೆ. ಏರುತ್ತಿರುವ ತಾಪಮಾನ ಹಿರಿಯರ ಚರ್ಮವನ್ನೇ ಸುಡುತ್ತಿರುವಾಗ ಮೃದು ಚರ್ಮ ಹೊಂದಿರುವ ಶಿಶುಗಳಿಗೆ ಕಿರಿಕಿರಿ ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಈ ವೇಳೆ ಮಕ್ಕಳ ಚರ್ಮದ ಬಗ್ಗೆ ಕಾಳಜಿ ವಹಿಸುವುದು ತಾಯಂದಿರಿಗೆ ಕಷ್ಟದ ಕೆಲಸ. ಈ ಬೇಸಿಗೆಯಲ್ಲಿ ನಿಮ್ಮ ಮಗುವಿನ ತ್ವಚೆ ಸಂರ ಕ್ಷಣೆ ಇಲ್ಲಿವೆ ಕೆಲವೊಂದು ಸಲಹೆಗಳು.
ಸ್ನಾನದ ನೀರಿಗೆ ಮೂಲಿಕೆ ಎಲೆಗಳು ಸ್ನಾನಮಾಡಿಸುವುದರ ಮೂಲಕ ಮಗುವಿನ ತ್ವಚೆಯನ್ನು ರಿಫ್ರೆಶ್ ಮಾಡಬಹುದು. ಬರೇ ನೀರಿನ ಸ್ನಾನದ ಬದಲು ನೀರಿಗೆ ಬೇವಿನ ಎಲೆ, ತುಳಸಿ ಮೊದಲಾದ ಎಲೆಗಳನ್ನು ಹಾಕಿ ಸ್ನಾನ ಮಾಡಿ ಸುವುದರಿಂದ ಅನೇಕ ಚರ್ಮದ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಬಹುದು. ಉಗುರು ಬಿಸಿ ನೀರು ಬಳಸುವುದು ಒಳ್ಳೆಯದು. ಮಕ್ಕಳ ಚರ್ಮ ಅತಿ ಸೂಕ್ಷ್ಮವಾಗಿರುವ ಕಾರಣ ಮಕ್ಕಳ ಸಾಬೂನುಗಳನ್ನೇ ಬಳಸುವುದು ಉತ್ತಮ.
ನೈಸರ್ಗಿಕ ಲೋಷನ್‌ಗಳ ಬಳಕೆ
ನೈಸರ್ಗಿಕ ವಾಗಿ ಲಭಿ ಸುವ ಲೋಷನ್‌ಗಳನ್ನು ಬಳಸಿ ಮಕ್ಕಳ ಚರ್ಮವನ್ನು ಕಾಪಾಡಬಹುದು. ಅಲೋ ವೆರಾ, ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ ಮಕ್ಕಳ ತ್ವಚೆಯ ತೇವಾಂಶವನ್ನು ರಕ್ಷಿಸಲು ಸಹಕಾರಿ. ಸಾಸಿವೆ ಎಣ್ಣೆಗೆ ತುರಿಕೆ ಕಡಿಮೆ ಮಾಡುವ ಸಾಮರ್ಥ್ಯ ಇದೆ. ಬಾದಾಮಿ ಎಣ್ಣೆಯು ಮಕ್ಕಳ ತ್ವಚೆ ಪೋಷಣೆಯನ್ನು ನೀಡುತ್ತದೆ. ಬಟ್ಟೆಗಳು ಶುಚಿಯಾಗಿರಲಿ ಮಗುವಿನ ಚರ್ಮದ ರಕ್ಷಣೆಗೆ ಅವರು ಧರಿಸುವ ಮತ್ತು ಬಳ ಸುವ ಬಟ್ಟೆ ಗಳು ಸ್ವಚ್ಚವಾಗಿರುವುದು ಮುಖ್ಯವಾಗಿದೆ. ಬೇಸಗೆಯಲ್ಲಿ ಆದಷ್ಟು ಹತ್ತಿಯ ಬಟ್ಟೆಗಳನ್ನು ಬಳಸುವುದು ಸೂಕ್ತ ಮತ್ತು ಉತ್ತಮ. ಇಲ್ಲವಾದಲ್ಲಿ ಬಟ್ಟೆಗಳು ಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತದೆ.
ಡೈಪರ್ ಕಿರಿಕಿರಿ ನೀಡದಿರಲಿ
ಡೈಪರ್ ಬಳಕೆಯಿಂದಾಗಿ ಚರ್ಮದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಬೇಸಿಗೆಯಲ್ಲಿ ಡೈಪರ್ ಬಳಕೆ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವುದರೊಂದಿಗೆ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಡೈಪರ್ ಅನ್ನು ಪದೇ ಪದೇ ಬದಲಾಯಿಸಬೇಕು. ಡೈಪರ್‌ನಿಂದ ಉಂಟಾದ ಎಲರ್ಜಿಗಳಿಗೆ ಬಾದಾಮಿ ಎಣ್ಣೆ, ಯಶಾದಾ ಭಾಸ್ಮ ದಂತಹ ಎಲರ್ಜಿ ಕ್ರಿಮ್‌ಗಳನ್ನು ಬಳಸಿ. ಬಾದಾಮಿ ಎಣ್ಣೆ ತಂಪು ಮತ್ತು ತೇವಾಂಶವನ್ನು ನೀಡಿದರೆ, ಯಶಾದಾ ಭಾಸ್ಮ ಎಲರ್ಜಿ ಮಕ್ಕಳ ತ್ವಜೆಯನ್ನು ರಕ್ಷಿಸುತ್ತದೆ. ಇದರೊಂದಿಗೆ ಸ ಯಾದ ಅಳತೆಯ ಡೈಪರ್ ಬಳಸುವುದು ಅಗತ್ಯ.
ಧನ್ಯಶ್ರೀ ಬೋಳಿಯಾರ್