Advertisement

ಸಾಕು ನಾಯಿಗೆ ಸೀರೆ ಉಡಿಸಿ,ಕುಂಕುಮ ಇಟ್ಟು,ಹೂವಿನ ಹಾರ ಹಾಕಿ ಅದ್ಧೂರಿ ಸೀಮಂತ: ವಿಡಿಯೋ ವೈರಲ್

05:01 PM Apr 25, 2022 | Team Udayavani |

ಹಾವೇರಿ: ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾವು ಸಾಕಿದ ಶ್ವಾನಕ್ಕೆ ಸೀಮಂತ ಮಾಡಿ ಪ್ರಾಣಿ ಪ್ರೇಮ ಮೆರದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Advertisement

ಜಿಲ್ಲೆಯ ರಾಣಿಬೆನ್ನೂರು ನಗರದ ನಿವಾಸಿ ಅಕ್ಷಯ ಕುಮಾರ ಎಂಬುವವರು ತಮ್ಮ ಸಾಕು ನಾಯಿ ರೂಬಿಗೆ ಸೀರೆ ಉಡಿಸಿ, ಕುಂಕುಮ ಇಟ್ಟು, ಹೂವಿನ ಹಾರ ಹಾಕಿ ಸೀಮಂತ ಕಾರ್ಯ ಮಾಡಿರುವುದು ಭಾರೀ ಮೆಚ್ಚುಗೆಗೆ ಪಾತ್ರರಾಗಿದೆ.

ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವಂತೆ ಸೀರೆ, ಬಳೆ ಹಾಗೂ ಕುಂಕಮವನ್ನು ಇಟ್ಟು ವಿಶೇಷವಾಗಿ ಅದಕ್ಕೆ ಇಷ್ಟವಾದ ತಿಂಡಿಯನ್ನೇ ಇಟ್ಟು, ಶಾಸ್ರೋಕ್ತವಾಗಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ.

ಇಷ್ಟಕ್ಕೆ ಸೀಮಿತವಾಗದೆ ಈ ಸೀಮಂತ ಕಾರ್ಯಕ್ಕೆ ಸಂಬಂಧಿಕರಿಗೆ ಆಹ್ವಾನ ನೀಡಿ ಊಟದ ವ್ಯವಸ್ಥೆಯನ್ನು ಮಾಡಿದ್ದು ವಿಶೇಷವಾಗಿತ್ತು.

ಸದ್ಯ ಸೀಮಂತ ಕಾರ್ಯ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಡೆ ವೈರಲ್ ಆಗುತ್ತಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next