Advertisement

ಮಮತೆಯ ತೊಟ್ಟಿಲು ತೂಗಿದ ನ್ಯಾಯಾಧೀಶೆ

07:06 PM Nov 25, 2020 | mahesh |

ಉಡುಪಿ: ಹೆತ್ತಮ್ಮನಿಗೆ ಬೇಡವಾದ ಮಗುವನ್ನು ಹಾದಿ ಬೀದಿಯಲ್ಲಿ ಬಿಟ್ಟು ಹೋಗುವುದಕ್ಕಿಂತ ಮಮತೆಯ ತೊಟ್ಟಿಲಲ್ಲಿ ಹಾಕುವುದು ಉತ್ತಮ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ನ್ಯಾಯಾಧೀಶೆ ಕಾವೇರಿ ತಿಳಿಸಿದರು.

Advertisement

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಪೊಲೀಸ್‌ ಠಾಣೆ, ನಾಗರಿಕ ಸಮಿತಿ ಟ್ರಸ್ಟ್‌ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಬುಧವಾರ ಸಂತೆಕಟ್ಟೆ ಶ್ರೀ ಕೃಷ್ಣಾನುಗೃಹದಲ್ಲಿ ಆಯೋಜಿಸಿದ್ದ “ಮಡಿಲ ಬೆಳಗು’- ದತ್ತು ಹಾಗೂ ನಗರದಲ್ಲಿ ಪತ್ತೆಯಾದ ಪರಿತ್ಯಕ್ತ ನವಜಾತ ಶಿಶುವಿನ ನಾಮಕರಣದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಯಿಗೆ ಬೇಡವಾದ ಶಿಶುವನ್ನು ಮಮತೆಯ ತೊಟ್ಟಿಲಲ್ಲಿ ಹಾಕಿದರೆ, ಅವರನ್ನು ಯಾರೊಬ್ಬರೂ ಪ್ರಶ್ನಿಸುವು ದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬಂದಿಯೇ ಆ ಮಗುವನ್ನು ಆರೈಕೆ ಮಾಡುವ ಜತೆಗೆ ನಾಮಕರಣ ಕೂಡ ಮಾಡುತ್ತಾರೆ. ಮಕ್ಕಳಿಲ್ಲದ ದಂಪತಿಗೆ ಮಗುವನ್ನು ದತ್ತು ನೀಡಿ, ಆಸ್ತಿ ಹಕ್ಕಿನ ಜತೆಗೆ ಕುಟುಂಬದ ವಾತಾವರಣ ಕಲ್ಪಿಸುವ ಕೆಲಸ ಮಾಡು ತ್ತಾರೆ. ಪ್ರಾಣಿ- ಪಕ್ಷಿಗಳು ತಮ್ಮ ಮರಿ ಗಳು ತಾವೇ ಆಹಾರ ಹುಡುಕುವ ತನಕ ನೋಡಿಕೊಳ್ಳುತ್ತದೆ. ಮನುಷ್ಯರು ಈ ಗುಣವನ್ನು ಮರೆತಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಮಗುವಿನ ನಾಮಕರಣ
ನಗರದ ಕಸದ ಡಬ್ಬಿಯಲ್ಲಿ ಆ.10 ರಂದು ಪತ್ತೆಯಾದ ಪರಿತ್ಯಕ್ತ ನವಜಾತ ಹೆಣ್ಣು ಮಗುವಿಗೆ ಕೃಷ್ಣಾನುಗ್ರಹದಲ್ಲಿ “ಪ್ರಜ್ವಲಾ’ ಎಂದು ನಾಮಕರಣ ಮಾಡಲಾಯಿತು. ಸಾಮಾನ್ಯ ಮಕ್ಕಳಂತೆ ನಾಮಕರಣದ ಧಾರ್ಮಿಕ ವಿಧಿಗಳನ್ನು ನಡೆಸಿಕೊಡಲಾಯಿತು.

ಪರಿತ್ಯಕ್ತ ಶಿಶುಗಳಿಗೆ ಬದುಕು ಕಲ್ಪಿಸಿಕೊಡುವ ಉದಾತ್ತ ಆಶಯದಿಂದ ರಾಜ್ಯ ಸರಕಾರ “ಮಮತೆಯ ತೊಟ್ಟಿಲು’ ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಕಾನೂನು ಪರಿವೀಕ್ಷಕ ಪ್ರಭಾಕರ್‌ ತಿಳಿದರು.

Advertisement

ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ, ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್‌, ಮಹಿಳಾ ಪೊಲೀಸ್‌ ಠಾಣಾಧಿಕಾರಿ ಫಿಲೋಮಿನಾ, ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ನ ನಿತ್ಯಾನಂದ ಒಳಕಾಡು ಮತ್ತಿತರರು ಉಪಸ್ಥಿತರಿದ್ದರು.

ದತ್ತು ಕಾರ್ಯಕ್ರಮದ ಮಾಹಿತಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಉದಯ ಕುಮಾರ್‌ ಸ್ವಾಗತಿಸಿದರು. ಸಂಯೋಜಕಿ ಮರೀನಾ ವಂದಿಸಿದರು.

ಕರ್ತವ್ಯಪ್ರಜ್ಞೆ ಮೂಡಿಸಿದ ಎಸ್‌ಐ
ಕಾರ್ಯಕ್ರಮದ ಉದ್ಘಾಟನೆ ಸಂದರ್ಭ ಮಹಿಳಾ ಪೊಲೀಸ್‌ ಠಾಣಾ ಉಪನಿರೀಕ್ಷಕಿ ವೈಲೆಟ್‌ ಫಿಲೋಮಿನಾ ಅವರು ಮಗುವನ್ನು ಎತ್ತಿಕೊಂಡು ಮುದ್ದಾಡಿದ ದೃಶ್ಯ ನೆರೆದಿರುವವರಲ್ಲಿ ಕರ್ತವ್ಯಪ್ರಜ್ಞೆಯನ್ನು ಮೂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next