Advertisement

ಹುಟ್ಟುತ್ತಲೇ ಸಿಕ್ಕಿತು ಆಧಾರ್‌ ಸಂಖ್ಯೆ!

06:15 AM Sep 25, 2017 | Team Udayavani |

ಒಸ್ಮಾನಾಬಾದ್‌: “ಚಿನ್ನದ ಚಮಚ ಬಾಯಲ್ಲಿಟ್ಕೊಂಡೇ ಹುಟ್ಟು’ವ ಬಗ್ಗೆ ನೀವು ಕೇಳಿರುತ್ತೀರ ಆದರೆ, ಆಧಾರ್‌ ಕಾರ್ಡ್‌ ಕೈಲಿಟ್ಟುಕೊಂಡು ಹುಟ್ಟುವ ಬಗ್ಗೆ ಕೇಳಿರಲಿಕ್ಕಿಲ್ಲ. ಅಂಥದೊಂದು ಅಪರೂಪದ ಘಟನೆ ಮಹಾರಾಷ್ಟ್ರದ ಒಸ್ಮಾನಾಬಾದ್‌ ಆಸ್ಪತ್ರೆಯಲ್ಲಿ ನಡೆದಿದೆ. 

Advertisement

ಆಸ್ಪತ್ರೆಯಲ್ಲಿ ಜನಿಸಿದ ಭಾವನಾ ಸಂತೋಷ್‌ ಜಾಧವ್‌ ಎಂಬ ಪುಟ್ಟ ಕಂದಮ್ಮ ಹುಟ್ಟಿ ಕೆಲವೇ ನಿಮಿಷಗಳಾಗುತ್ತಲೇ, ಆಕೆ ಹೆಸರಿನಲ್ಲೊಂದು ಆಧಾರ್‌ ಸಂಖ್ಯೆ ಸಿದ್ಧವಾಗಿದೆ! 

ಒಸ್ಮಾನಾಬಾದ್‌ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆ 03 ನಿಮಿಷಕ್ಕೆ ಮಗುವಿನ ಜನನವಾಗಿದ್ದು, 12 ಗಂಟೆ 09 ನಿಮಿಷಕ್ಕೆ ಭಾವನಾ ಹೆಸರಿಗೆ ಜನನ ಪ್ರಮಾಣಪತ್ರ ಹಾಗೂ ಆಧಾರ್‌ ಸಂಖ್ಯೆ ನೀಡಲಾಯಿತು ಎಂದು ಜಿಲ್ಲಾಧಿಕಾರಿ ರಾಧಾಕೃಷ್ಣ ಗಾಮೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next