Advertisement

ಕರುಳ ಬಳ್ಳಿಯನ್ನೇ ಮಾರಾಟಕ್ಕೆ ಯತ್ನಿಸಿದ!

06:25 AM Jan 16, 2018 | |

ಕೊಪ್ಪಳ: ಕರುಳ ಬಳ್ಳಿಯನ್ನೇ ಇನ್ನೊಬ್ಬರಿಗೆ ಮಾರಾಟ ಮಾಡಲು ಹೊರಟಿದ್ದ ಪತಿಯ ಕೃತ್ಯ ವಿರೋಧಿಸಿ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದ ಪತ್ನಿ, ತವರು ಮನೆಯಲ್ಲಿ ಆಶ್ರಯದ ಬದಲಿಗೆ ಕಿರುಕುಳ ಅನುಭವಿಸಿ ಕೊಪ್ಪಳದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಗೋಳಾಡಿದ ಘಟನೆ ನಡೆದಿದೆ.

Advertisement

ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿ ಸಿಬ್ಬಂದಿ ತಾಯಿ, ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಕೊಪ್ಪಳದ ಕೀರ್ತಿ ಕಾಲೋನಿಯ ನಿವಾಸಿ ರುಕ್ಸಾನಾ ಬಳ್ಳಾರಿ ಎಂಬಾಕೆ ರೈಲ್ವೆ ನಿಲ್ದಾಣದಲ್ಲಿ ಕಣ್ಣೀರಿಡುತ್ತಿದ್ದ ಮಹಿಳೆ. ರುಕ್ಸಾನಾಳನ್ನು ಅಣ್ಣಿಗೇರಿಯ ಅಕºರ್‌ ಜತೆ ಮದುವೆ ಮಾಡಿಕೊಡಲಾಗಿತ್ತು. ಅಕºರ್‌ ಒಂದೂವರೆ ತಿಂಗಳ ಹಿಂದೆ 3 ವರ್ಷದ ತನ್ನ ಮಗನನ್ನು ಹುಬ್ಬಳ್ಳಿ ನಿವಾಸಿಯೊಬ್ಬರಿಗೆ 1.50 ಲಕ್ಷ ರೂಪಾಯಿಗೆ ಮಾರಾಟಕ್ಕೆ ಯತ್ನಿಸಿದ್ದ. ಮಗು ಮಾರಾಟ ವಿರೋಧಿಸಿದ್ದ ರುಕ್ಸಾನಾ ಪತಿ ಜೊತೆ ಜಗಳವಾಡಿಕೊಂಡು ತವರು ಮನೆಗೆ ಆಗಮಿಸಿದ್ದಳು. ಆದರೆ ತವರು ಮನೆಯಲ್ಲಿ ಆಶ್ರಯ ಸಿಗಲಿಲ್ಲ. ಬದಲಿಗೆ ತಾಯಿ ತಾಹೇರಾ ಹಾಗೂ ಆಕೆಯ ಇನ್ನೋರ್ವ ಮಗಳು ರುಬಿಯಾ ಸೇರಿಕೊಂಡು ರುಕ್ಸಾನಾಳಿಗೆ ಪತಿ ಮನೆಗೆ ಹೋಗುವಂತೆ ಬೈದಿದ್ದಾರೆ. ಇದರಿಂದ ದಿಕ್ಕುತೋಚದ ರುಕ್ಸಾನಾ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಅಳುತ್ತಾ ಕುಳಿತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 

ಸಹಾಯವಾಣಿ ತಂಡ ಸ್ಥಳಕ್ಕೆ ಆಗಮಿಸಿ ರುಕ್ಸಾನಾಳಿಂದ ಮಾಹಿತಿ ಪಡೆದು ಮಗು ಮಾರಾಟದ ಬಗ್ಗೆ ಖಚಿತ ಪಡಿಸಿಕೊಂಡು ಮಕ್ಕಳ ಕಲ್ಯಾಣ ಸಮಿತಿಯಿಂದ ಆಶ್ರಯ ನೀಡಿದ್ದಾರೆ.

ಪತಿ ಒಂದೂವರೆ ತಿಂಗಳ ಹಿಂದೆ ಮಗನನ್ನು ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡುತ್ತಿದ್ದ. ಇದಕ್ಕೆ ವಿರೋಧಿಸಿ ಮಗನನ್ನು ನನ್ನ ಬಳಿಯೇ ಇರಿಸಿಕೊಂಡಿದ್ದೆ.
 ರುಕ್ಸಾನಾ ಬಳ್ಳಾರಿ, ನೊಂದ ಮಹಿಳೆ

ನೊಂದ ಮಹಿಳೆಯನ್ನು ವಿಚಾರಿಸಿದಾಗ ಗಂಡನೇ ಮಗುವನ್ನು ಮಾರಾಟಕ್ಕೆ ಯತ್ನಿಸಿದ ಕುರಿತು ಹೇಳಿಕೊಂಡಿದ್ದಾಳೆ. ಪ್ರಕರಣದ ಕುರಿತು ವಿಚಾರಣೆ ಮಾಡುತ್ತಿದ್ದೇವೆ.
– ಶಾಂತಕುಮಾರ
ಮಕ್ಕಳ ಸಹಾಯವಾಣಿ ಸಿಬ್ಬಂದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next