Advertisement

Madikeri: ಊರಿಗೆ ಬಂದು ಮರಿಗೆ ಜನ್ಮ ನೀಡಿದ ಕಾಡಾನೆ!

11:49 PM Nov 15, 2023 | Team Udayavani |

ಮಡಿಕೇರಿ: ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕರಡ ಕೀಮಲೆಕಾಡು ಗ್ರಾಮದಲ್ಲಿ ಕಾಡಾನೆ ಯೊಂದು ಮರಿಗೆ ಜನ್ಮ ನೀಡಿದೆ.

Advertisement

ಸ್ಥಳೀಯ ನಿವಾಸಿ ಎಂ. ಮಂಜು ಅವರ ಮನೆಯ ಬಳಿ ಸೋಮವಾರ ರಾತ್ರಿ ವೇಳೆ ಕಾಡಾನೆ ಮರಿ ಹಾಕಿದೆ. ಮಂಗಳವಾರ ಹಗಲಿಡೀ ಮರಿಯು ಮನೆಯ ಅಂಗಳದಲ್ಲಿದ್ದರೆ ತಾಯಿ ಆನೆ ಪಕ್ಕದ ತೋಟದಲ್ಲಿ ಮರಿಗಾಗಿ ಕಾಯುತ್ತಿತ್ತು. ಕಾಡಾನೆ ಮರಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಬಳಿಕ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮರಿಯನ್ನು ತಾಯಿ ಆನೆಯ ಜತೆಗೆ ಸೇರಿಸಿದರು.

ಇದೇ ವೇಳೆ ನರಿಯಂದಡ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಲ್ಲಿ ದೂರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next