Advertisement

Devanahalli: ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವು

11:46 AM Oct 10, 2023 | Team Udayavani |

ದೇವನಹಳ್ಳಿ: ಗರ್ಭಿಣಿಯೊಬ್ಬರಿಗೆ ಶುಶ್ರೂಷಕಿ ಯರು ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ತಾಯಿ-ಮಗು ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯ ದಿಂದಲೇ ಹಸುಗೂಸು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.

Advertisement

ಮಗುವಿನ ಸಾವು ಕೇಳುತ್ತಿದ್ದಂತೆ ದಂಪತಿ ಹಾಗೂ ಪೋಷಕರು ಆಸ್ಪತ್ರೆ ಮುಂಭಾಗ ಜಮಾಯಿಸಿ, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ, ನಮಗೆ ನ್ಯಾಯ ಕೊಡಿಸ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 10 ದಿನಗಳ ಹಿಂದೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಲಕ್ಷ್ಮೀ 9 ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಅದೇ ದಿನದಲ್ಲಿ ಹೆರಿಗೆ ವೈದ್ಯರಾಗಿರುವ ಡಾ| ಮಮತಾ ರಜೆ ಇದ್ದರು ಎನ್ನಲಾಗುತ್ತಿದ್ದು, ಆಸ್ಪತ್ರೆಯ ನರ್ಸ್‌ಗಳೇ ಹೆರಿಗೆ ಮಾಡಲು ಮುಂದಾಗಿದ್ದಾರೆ. ಮಗುವಿನ ತಂದೆ ಪುನೀತ್‌ ಹಾಗೂ ಸಂಬಂಧಿಕರು ಬೇರೆ ಆಸ್ಪತ್ರೆಗೆ ಬರೆದು ಕೊಡಿ ಎಂದು ಅಂಗಲಾಚಿದರೂ ಕೇಳಲಿಲ್ಲ. “ನಾವೇ ಹೆರಿಗೆ ಮಾಡಿಸುತ್ತೇವೆ. ನೀವೇನೂ ಗಾಬರಿ ಪಡಬೇಡಿ’ ಎಂದು ಹೇಳಿದ್ದಾರೆ.

ಆದರೆ, ಹೆರಿಗೆ ಆಗುತ್ತಿದ್ದಂತೆ, ಮಗುವು ಹೊರಗೆ ಬರದ ಕಾರಣ ಹೆಚ್ಚು ಸಮಯ ತೆಗೆದುಕೊಂಡ ಪರಿಣಾಮ ಮಗುವಿನ ಉಸಿರಾಟದಲ್ಲಿ ವ್ಯತ್ಯಾಸ ಉಂಟಾಗಿದೆ. ಮಗುವಿನ ಮೆದುಳು ನಿಷ್ಕಿಯ ಆಗುತ್ತಿದ್ದಂತೆ ಮಗುವನ್ನು ಸ್ಥಳೀಯ ವಾಗಿ ಬೇರೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಕೂಡಲೇ ಪೋಷಕರು ಸ್ಥಳೀಯ ನ್ಯೂ ಮಾನಸ ಆಸ್ಪತ್ರೆಗೆ ದಾಖಲಿಸಿದ್ದರು. ದುರಾದೃಷ್ಟವೆಂದರೆ ಮಗುವಿನ ಹಾರ್ಟ್‌ಬಿಟ್‌ ಇದ್ದರೂ ಸಹ ಮಗುವಿನ ಉಸಿರಾಟ ಇರದ ಕಾರಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ತಾಯಿ ಲಕ್ಷ್ಮೀ, “ಇಲ್ಲಿ ಹೆರಿಗೆ ಬೇಡ ಎಂದು ನಾವು ಎಷ್ಟು ಬೇಡಿಕೊಂಡರೂ ಇಲ್ಲಿನ ಸಿಬ್ಬಂದಿ ಬೇರೆಡೆ ಹೋಗಬೇಡಿ, ನಾವು ಹೆರಿಗೆ ಮಾಡಿಸುತ್ತೇವೆ ಎಂದು ಹೇಳಿ ನಿರ್ಲಕ್ಷ್ಯ ತೋರಿ ದ ಪರಿಣಾಮ ಮಗುವಿನ ಸಾವಿಗೆ ಕಾರಣ ರಾಗಿದ್ದಾರೆ’ ಎಂದು ಕಣ್ಣೀರು ಹಾಕಿದರು.

Advertisement

ಸಂಬಂಧಿ ಪದ್ಮಾ ಮಾತನಾಡಿ, ವೈದ್ಯರಿಲ್ಲವೆಂದು ಹೇಳಿದ್ದಾಗ ನಾವು ಬೇರೆ ಕಡೆಗೆ ಹೋಗ್ತಿವಿ ಎಂದು ಹೇಳಿದ್ರೀ, ಆಗ ನೋವು ಕಾಣಿಸಿಕೊಂಡಿರಲಿಲ್ಲ. ನೋವಿನ ಇಂಜೆಕ್ಷನ್‌ ನೀಡಿದ್ರೂ, ನೋವು ಕಾಣಿಸಿಕೊಂಡಿದೆ. ಹೆರಿಗೆ ಮಾಡಿಸುವಾಗಲೂ ಸಹ ನಾನು ಜೊತೆಯಲ್ಲಿಯೇ ಇದ್ದೆ. ರಿರ್ಪೊàಟ್‌ನಲ್ಲಿ ಎಲ್ಲವೂ ನಾರ್ಮಲ್‌ ಇತ್ತು. ಆದರೆ, ಮಗು ಹೊರಗೆ ಬಂದ ಬಳಿಕ ಈ ರೀತಿಯಾಗಿದೆ. ಬೇರೆ ಆಸ್ಪತ್ರೆಗೆ ಹೋದಾಗ ಸ್ವಲ್ಪ ಉಸಿರಾಟವೇನೋ ಬಂದಿತ್ತು. ಇಲ್ಲಿ ಆಕ್ಸಿಜನ್‌ ವ್ಯವಸ್ಥೆ ಇಲ್ಲ. ನಮಗೆ ನ್ಯಾಯಬೇಕಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಮುಂದೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ತಾಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದರು.

ವೈದ್ಯೆ ಡಾ.ಮಮತಾ ಮಾತನಾಡಿ, ಗರ್ಭಿಣಿ ಬಂದಾಗ, ಎಲ್ಲವೂ ನಾರ್ಮಲ್‌ ಇತ್ತು. ನಾನು ರಜೆಯಲ್ಲಿದೆ, ಮಕ್ಕಳ ವೈದ್ಯರೊಬ್ಬರು ಇದ್ದರು. ಮಗುವಿನ ಕತ್ತಿಗೆ ಕರಳು ಸುತ್ತಿಕೊಂಡಿದ್ದರಿಂದ ಉಸಿರಾಟದ ತೊಂದರೆಯಾಗಿ ಮಗುವು ಸಾವನ್ನಪ್ಪಿದೆ. ಮಗು ಉಳಿಸಲು ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ಸಹ ತರಲಾಗಿದೆ ಎಂದು ತಿಳಿಸಿದರು.

ಮಗು ಸಾವಿಗೆ ಸಂಬಂಧಿಸಿ ದಂತೆ ಪೋಷಕ ರಿಂದ ಮಾಹಿತಿ ಪಡೆಯಲಾಗಿದೆ. ಇವ ರಿಂದ ದೂರು ಬಂದ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮ ನಕ್ಕೂ ಸಹ ತಂದಿದ್ದೇನೆ. ಸಾವಿಗೆ ಕಾರಣಕ್ಕಾಗಿ ತನಿಖೆ ಕೈಗೊಂಡು ಸೂಕ್ತ ಕ್ರಮವಹಿಸಲಾಗುವುದು. – ಡಾ.ಸಂಜಯ್‌, ತಾಲೂಕು ಆರೋಗ್ಯಾಧಿಕಾರಿ, ದೇವನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next