Advertisement
ಆರು ತಿಂಗಳ ಹಿಂದೆಯೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವುದನ್ನೇ ಸೂಕ್ಷ್ಮವಾಗಿ ಅರಿತೇ ಬಿಜೆಪಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿರುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಎಂಎಲ್‌ಸಿ ಆದ ನಂತರ ಪಕ್ಷದಲ್ಲೇ ಉಳಿಯುತ್ತಾ ರೆಂದು ಬಿಜೆಪಿ ನಾಯಕರು ಬಲವಾಗಿ ನಂಬಿದ್ದರು. ಹೀಗಾಗಿ ಚಿಂಚನಸೂರ ಹಾದಿ ಕಡೆ ಲಕ್ಷ್ಯ ವಹಿಸ ಲಿಲ್ಲ. ಆದರೆ ಚಿಂಚನಸೂರು ಅವರೊಂದಿಗೆ ಕಾಂಗ್ರೆಸ್‌ನವರು ನಡೆಸಿದ ಮಾತುಕತೆ ಫಲಪ್ರದ ವಾಗಿ ಈಗ ಮರಳಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಈಗ ರಾಜಕೀಯ ಲಾಭ-ನಷ್ಟಗಳ ಕುರಿತಾಗಿ ಜೋರಾಗಿ ಚರ್ಚೆ ನಡೆದಿದೆ.
Related Articles
Advertisement
ಪ್ರಿಯಾಂಕ್‌ಗೆ ಸಹಾಯಕವಾದೀತೆ?: ಕಲ್ಯಾಣ ಕರ್ನಾ ಟಕದ ಅದರಲ್ಲೂ ಯಾದಗಿರಿ ಜಿಲ್ಲೆಯ ಗುರುಮಿಠಕಲ್, ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ ಹಾಗೂ ಅಫಜಲಪುರ ಸೇರಿ ಇತರೆಡೆ ಕೋಲಿ ಸಮಾಜದವರು ಫಲಿತಾಂಶ ನಿರ್ಧರಿಸಬಲ್ಲ ಜನ ಸಂಖ್ಯೆಯಿದೆ. ಅದನ್ನೆಲ್ಲ ಬಾಬು ರಾವ ಚಿಂಚನ ಸೂರು ಕ್ರೋಡೀಕ ರಿಸುತ್ತಾರೆಂದು ಕಾಂಗ್ರೆಸ್ ಬಲ ವಾಗಿ ನಂಬಿದೆಯಲ್ಲದೇ, ಮೂರು ಸಲ ಚಿತ್ತಾಪುರದಲ್ಲಿ ಗೆದ್ದಿರುವುದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣೆ ಯಲ್ಲಿ ಸಹಾಯಕವಾಗುತ್ತದೆಂದು ಹೆಚ್ಚಿನ ನಿರೀಕ್ಷೆ ಹೊಂದಿರುವುದು ಒಂದೆಡೆ ಯಾದರೆ, ಈಗ ಮೊದಲಿನ ಹಾಗೆ ಸಮಾಜದೊಳಗೆ ವರ್ಚಸ್ಸು ಹೊಂದಿಲ್ಲ. ಪಕ್ಷ ಎಲ್ಲ ಕೊಟ್ಟರೂ, ಪ್ರಮುಖವಾಗಿ ಕೋಲಿ ಸಮಾಜದ ತಳವಾರ ಸಮುದಾಯ ಎಸ್ಟಿಗೆ ಸೇರಿಸಲಾ ಗಿದ್ದರೂ ಸಮಾಜವನ್ನು ಸ್ವಾರ್ಥಕ್ಕಾಗಿ ಉಪಯೋಗಿ ಸಿಕೊಳ್ಳುತ್ತಿದ್ದಾರೆಂಬ ಬಿಜೆಪಿ ಹೇಳಿಕೆ ಜತೆಗೆ ಇದೇ ತೆರನಾದ ವಾಸ್ತವಿಕತೆಯನ್ನು ವಿವಿಧ ಸ್ಥರಗಳಲ್ಲಿ ಮಂಥನ ಮಾಡಲಾಗುತ್ತಿದೆ.
ಚಿತ್ತಾಪುರ ಸೇರಿದಂತೆ ಇತರೆಡೆ ಕೋಲಿ ಸಮಾಜದ ಕೆಲವೊಂದಿಷ್ಟು ಮತಗಳನ್ನು ಸೆಳೆಯುವ ಕೌಶಲ್ಯ ಬಾಬುರಾವ ಚಿಂಚನಸೂರ ಹೊಂದಿದ್ದಾರೆ. ಆದರೆ ಮೊದಲಿನ ವರ್ಚಸ್ಸು ಈಗ ಹೊಂದಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಗುರುಮಿಠಕಲ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೂ ಸಮಾಜದ ಮತಗಳನ್ನು ಮೊದಲಿನಷ್ಟು ಈಗ ಪಡೆಯುವುದಿಲ್ಲ ಎನ್ನಲಾಗುತ್ತಿದೆ.
ಮಾತಿಗೆ ಬದ್ಧರಲ್ಲಬಾಬುರಾವ ಚಿಂಚನಸೂರು ಪಕ್ಷಕ್ಕೆ ಬಂದಿರು ವುದರಿಂದ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ ಬಿಜೆಪಿಯವರು ಪಕ್ಷಕ್ಕೆ ನಷ್ಟವಾಗುವು ದಿಲ್ಲ. ಕಳೆದ ಸಲ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಲ್ಲೇ ಇರಲಿಲ್ಲ. ಗುರು ಮಿಠಕಲ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತ ನಂತರ ಬಿಜೆಪಿಗೆ ಬಂದಿದ್ದಾರೆ. 2018ರಲ್ಲೇ ಬಾಬುರಾವ ಚಿಂಚನಸೂರ ಅವರಿಂದ ಕಾಂಗ್ರೆಸ್‌ಗೆ ಆಗದ ಲಾಭ ಈಗ ಆಗುತ್ತದೆಯೇ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ಅಪ್ಪನನ್ನು ಸೋಲಿ ಸಿದ ಹಾಗೆ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ತೊಡೆ ತಟ್ಟಿದ್ದ ಹಾಗೂ ಬಿಜೆಪಿಗೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ ಎಂಬ ಮಾತುಗಳ ಟ್ರೋಲ್ ಬಿಜೆಪಿ ವ್ಯಾಪಕಗೊಳಿಸಿ ಜನ ಮಾನಸದಲ್ಲಿ ಚಿಂಚನಸೂರ ಮಾತಿಗೆ ಬದ್ಧನಲ್ಲ ಎಂಬುದನ್ನು ಮನೆ ಮಾತಾಗಿಸಲಾಗುತ್ತಿದೆ. – ಹಣಮಂತರಾವ ಭೈರಾಮಡಗಿ