Advertisement

ಅಂಬೇಡ್ಕರ್‌- ಜಗಜೀವನರಾಂ ಕೊಡುಗೆ ಅಪಾರ

05:29 PM Apr 06, 2019 | Naveen |

ಶಿವಮೊಗ್ಗ: ಅಂಬೇಡ್ಕರ್‌ ಹಾಗೂ ಬಾಬು ಜಗಜೀವನ್‌ ರಾಮ್‌ ದಲಿತ ಚಳುವಳಿಗಳ ಎರಡು ಕಣ್ಣು ಎಂದು ಜಿಲ್ಲಾ ಧಿಕಾರಿ ಕೆ.ಎ.
ದಯಾನಂದ್‌ ಅಭಿಪ್ರಾಯಪಟ್ಟರು. ನಗರಗದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ
ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಾಬು ಜಗಜೀವನ್‌ ರಾಂ ಅವರ 112ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು.

Advertisement

ಭಾರತದಲ್ಲಿ ಇಂದಿಗೂ ಸಹ ದಲಿತರ ಮೇಲಿನ ದೌರ್ಜನ್ಯವನ್ನು ಕಾಣುತ್ತೇವೆ. ನೂರು ವರ್ಷಗಳ ಹಿಂದಿನ ತೀವ್ರತೆ ಎಷ್ಟಿರಬಹುದು ಎಂದು ಊಹಿಸಿದರೆ ಅದರ ಕರಾಳ ಮುಖದ ಅರಿವಾಗುತ್ತದೆ. ಇಂದು ನಾವು ಹೋರಾಟ ಹಾಗೂ ಚಳುವಳಿ ಎಂದು ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತುವುದು ದೊಡ್ಡದಲ್ಲ.ನೂರು ವರ್ಷಗಳ ಹಿಂದೆಯೇ ತಮ್ಮ ಶಾಲಾ ಹಂತದಲ್ಲೇ ಜಾತೀಯತೆ ಹಾಗೂ ಶೋಷಣೆಗಳ ವಿರುದ್ಧ ತಿರುಗಿ ಬಿದ್ದು ಚಳುವಳಿಗಳನ್ನು ನಡೆಸಿದವರು ಬಾಬು ಜಗಜೀವನ್‌ ರಾಂ ಎಂದು ಅವರು ಹೇಳಿದರು.

ಹಸಿರು ಕ್ರಾಂತಿಯ ಸಂದರ್ಭವನ್ನು ನೆನಪಿಸುವಾಗ ಆಗಿನ ಪ್ರಧಾನಿ ಹಾಗೂ ವಿಜ್ಞಾನಿಗಳ ಬಗ್ಗೆಯಷ್ಟೆ ನಾವು ಸ್ಮರಿಸುತ್ತೇವೆ. ಆದರೆ ಆಗಿನ ಕೃಷಿ ಸಚಿವರಾಗಿದ್ದ ಬಾಬು ಜಗಜೀವನ್‌ರಾಂ ಅವರನ್ನು
ಮರೆಯುತ್ತಿದ್ದೇವೆ. ಹಾಗೆಯೇ ಪಾಕಿಸ್ಥಾನದ ವಿರುದ್ಧ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕಂತಹ ವಿಜಯವನ್ನು
ಅಂದಿನ ಪ್ರಧಾನಿಯನ್ನಷ್ಟೇ ನೆನೆಯುತ್ತೇವೆ. ಅಂದಿನ ರಕ್ಷಣಾ ಸಚಿವರಾಗಿದ್ದವರು ಬಾಬು ಜಗಜೀವನ್‌ ರಾಂ. ಬಾಂಗ್ಲಾ
ವಿಭಜನೆಯಲ್ಲೂ ಸಹ ಪ್ರಮುಖ ಪಾತ್ರ ವಹಿಸಿದವರು ಅವರು. ಇಂತಹ ಅಪಾರವಾದಂತಹ ಅವರ ಕೊಡುಗೆಗಳನ್ನು ನಾವು ಮರೆಯುತ್ತಿರುವುದು ವಿಷಾದನೀಯ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಚಿವ ಸ್ಥಾನಕ್ಕೇರಿ ದೀರ್ಘಾವಧಿ ಕೇಂದ್ರ ಸಚಿವರಾಗಿದ್ದ ಏಕೈಕ ವ್ಯಕ್ತಿ ಜಗ ಜೀವನ್‌
ರಾಂ ಆಗಿದ್ದಾರೆ. ಅವರು ಉತ್ತಮ ವಾಗ್ಮಿಗಳಾಗಿದ್ದರು. ಅವರು ಮಾಡಿದಂತಹ ಸ್ವಾಗತ ಭಾಷಣವನ್ನು ಮೆಚ್ಚಿ ಬನಾರಸ್‌
ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ನೀಡಲಾಯಿತು ಎಂದು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂ ಸಿಇಒ ಕೆ. ಶಿವರಾಮೇ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಪಾಲಿಕೆ
ಆಯುಕ್ತೆ ಚಾರುಲತಾ ಸೋಮಲ್‌ ಇದ್ದರು. ಕಾರ್ಯಕ್ರಮದಲ್ಲಿ ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ
ಪ್ರಾಧ್ಯಾಪಕ ಎ.ಕೆ ತಿಮ್ಮಪ್ಪ ವಿಶೇಷ ಉಪನ್ಯಾಸ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next