ನವದೆಹಲಿ: ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ಕೆ ಯಾದವ್ ಅವರು ಬುಧವಾರ (ಸೆಪ್ಟೆಂಬರ್ 30, 2020) ಪ್ರಕಟಿಸಿದ್ದು, ಪ್ರಮುಖ ಆರೋಪಿಗಳಾದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ ಸೇರಿದಂತೆ ಎಲ್ಲಾ ಆರೋಪಿಗಳು ನಿರ್ದೋಷಿಗಳು ಎಂದು ತಿಳಿಸಿದೆ.
ಬಾಬ್ರಿ ಮಸೀದಿ ಧ್ವಂಸ ಘಟನೆ ಪೂರ್ವನಿಯೋಜಿತ ಕೃತ್ಯ ಅಲ್ಲ. ಇದು ಆಕಸ್ಮಿಕವಾಗಿ ನಡೆದದ್ದು ಎಂದು ಲಖ್ನೋ ವಿಶೇಷ ನ್ಯಾಯಾಲಯದ ಜಡ್ಜ್ ಎಸ್.ಕೆ.ಯಾದವ್ ತೀರ್ಪಿನಲ್ಲಿ ತಿಳಿಸಿದ್ದಾರೆ. ನ್ಯಾಯಾಧೀಶ ಎಸ್.ಕೆ.ಯಾದವ್ ಅವರು ಬರೋಬ್ಬರಿ ಎರಡು ಸಾವಿರ ಪುಟಗಳ ತೀರ್ಪನ್ನು ಬರೆಯಿಸಿದ್ದು, ಅಂತಿ ತೀರ್ಪನ್ನು ಪ್ರಕಟಿಸಿದ್ದಾರೆ.
ನ್ಯಾಯಾಧೀಶರಿಗೆ ವಿಶೇಷ ಭದ್ರತೆಯನ್ನು ಕೂಡಾ ಸರ್ಕಾರ ನೀಡಿತ್ತು.
ಇದನ್ನೂ ಓದಿ:ಬಾಬರಿ ಮಸೀದಿ ಪ್ರಕರಣ ತೀರ್ಪು; ಒಟ್ಟಾರೆ ಘಟನೆಯ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ
ಲಖ್ನೋ ಸಿಬಿಐ ವಿಶೇಷ ನ್ಯಾಯಾಲಯ ಸುದೀರ್ಘ 28 ವರ್ಷಗಳ ಕಾಲ ವಿಚಾರಣೆ ನಡೆಸಿ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಅಲ್ಲದೇ ಈ ಪ್ರಕರಣದ ಅಂತಿಮ ತೀರ್ಪು ನೀಡಿರುವ ಜಡ್ಜ್ ಎಸ್ ಕೆ ಯಾದವ್ ಗೆ ಅವರ ಸೇವಾವಧಿಯ ಕೊನೆಯ ದಿನವಾಗಿದೆ.
Proceedings yet to commence in the
#BabriDemolitionCase. The Judge is still in Chamber and not arrived in the Courtroom.