Advertisement

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

05:58 PM Sep 24, 2023 | Team Udayavani |

ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು ವಿಶ್ವಕಪ್ 2023 ರಲ್ಲಿ ಅಸಾಧಾರಣ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ರೋಹಿತ್ ಶರ್ಮಾ, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರಂತಹ ದಿಗ್ಗಜರನ್ನು ಬಾಬರ್ ಮೀರಿಸಬಹುದು ಎಂದು ಗಂಭೀರ್ ಹೇಳಿದರು.

ಮುಲ್ತಾನ್‌ ನಲ್ಲಿ ನಡೆದ ಏಷ್ಯಾ ಕಪ್‌ ನ ಆರಂಭಿಕ ಪಂದ್ಯದಲ್ಲಿ ಬಲಗೈ ಆಟಗಾರ ಬಾಬರ್ ಅಜಂ ನೇಪಾಳ ವಿರುದ್ಧ 151 ರನ್ ಗಳಿಸಿದ್ದರು. ಆದರೆ ನಂತರ ಪಂದ್ಯಗಳಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು.

“ಬಾಬರ್ ಅಜಂ ಈ ವಿಶ್ವಕಪ್‌ ನಲ್ಲಿ ಅದ್ಭುತ ಪ್ರದರ್ಶನ ತೋರಬಹುದು. ಬ್ಯಾಟಿಂಗ್ ಮಾಡಲು ತುಂಬಾ ಸಮಯವಿರುವ ಬಹಳಷ್ಟು ಆಟಗಾರರನ್ನು ನಾನು ನೋಡಿದ್ದೇನೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಇದ್ದಾರೆ ಎಂದು ನಾನು ಭಾವಿಸುತ್ತೇನೆ, ಆದರೆ ಬಾಬರ್ ಅಜಮ್ ವಿಭಿನ್ನ ಮಟ್ಟದ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಬಾಬರ್ ಪ್ರಸ್ತುತ ಏಕದಿನ ಕ್ರಿಕೆಟ್ ನಲ್ಲಿ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿದ್ದು, 108 ಪಂದ್ಯಗಳಿಂದ 58.16 ಸರಾಸರಿಯಲ್ಲಿ 5409 ರನ್ ಗಳಿಸಿದ್ದಾರೆ. 19 ಶತಕಗಳು ಮತ್ತು 28 ಅರ್ಧ ಶತಕಗಳೊಂದಿಗೆ 89.12 ಸ್ಟ್ರೈಕ್-ರೇಟ್ ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next