ಮುಂಬೈ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಆಡದೆ ದಶಕ ಕಳೆಯಿತು. ಸದ್ಯ ಐಸಿಸಿ ಕೂಟಗಳು ಅಥವಾ ಏಷ್ಯಾಕಪ್ ನಲ್ಲಷ್ಟೇ ಇತ್ತಂಡಗಳ ಹಣಾಹಣಿ ನಡೆಯುತ್ತದೆ. ಹೀಗಾಗಿಯೇ ಉಭಯ ತಂಡಗಳ ಮುಖಾಮುಖಿ ಬಹಳಷ್ಟು ರೋಚಕತೆಯಿಂದ ಕೂಡಿರುತ್ತದೆ.
ಪಂದ್ಯದಲ್ಲಿ ಎಷ್ಟೇ ಸ್ಪರ್ಧಾತ್ಮಕವಾಗಿ ಕೂಡಿದ್ದರೂ ಎರಡು ತಂಡದ ಆಟಗಾರರು ಪಂದ್ಯದ ಹೊರಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿರುತ್ತಾರೆ. ಇತ್ತೀಚಿನ ಸಂದರ್ಶನವೊಂದಲ್ಲಿ, ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಪಾಕ್ ನಾಯಕ ಬಾಬರ್ ಅಜಮ್ ರೊಂದಿಗಿನ ತನ್ನ ಬಾಂಧವ್ಯದ ಬಗ್ಗೆ ಮಾತನಾಡಿದರು. ಪಾಕಿಸ್ತಾನಿ ಬ್ಯಾಟರ್ ಬಹುಶಃ ಎಲ್ಲಾ ಸ್ವರೂಪಗಳಲ್ಲಿ ವಿಶ್ವದ ಅಗ್ರ ಬ್ಯಾಟರ್ ಆಗಿದ್ದಾರೆ ಎಂದು ಕೊಹ್ಲಿ ಕರೆದರು.
2019ರ ವಿಶ್ವಕಪ್ ಪಂದ್ಯದ ಬಳಿಕ ಮ್ಯಾಂಚೆಸ್ಟರ್ ನಲ್ಲಿ ನಾನು ಮೊದಲ ಬಾರಿಗೆ ಬಾಬರ್ ಜೊತೆ ಚರ್ಚೆ ನಡೆಸಿದ್ದೆ. ಅಂಡರ್-19 ವಿಶ್ವಕಪ್ ನಿಂದಲೂ ನನಗೆ ಇಮಾದ್ ವಾಸಿಮ್ ಪರಿಚಯವಿದೆ. ಅಂದು ಇಮಾದ್ ಬಂದು ಬಾಬರ್ ನನ್ನ ಜತೆ ಮಾತನಾಡಲು ಬಯಸಿದ್ದರು ಎಂದು ಹೇಳಿದರು. ನಾವು ಕುಳಿತು ಆಟದ ಬಗ್ಗೆ ಮಾತನಾಡಿದೆವು. ಮೊದಲ ದಿನದಿಂದ ನಾನು ಅವರಿಂದ ಸಾಕಷ್ಟು ಗೌರವವನ್ನು ಕಂಡಿದ್ದೇನೆ. ಅದು ಎಂದೂ ಬದಲಾಗಿಲ್ಲ ಎಂದು ಕೊಹ್ಲಿ ಹೇಳಿದರು.
“ಅವರು ಬಹುಶಃ ಸ್ವರೂಪಗಳಾದ್ಯಂತ ವಿಶ್ವದ ಅಗ್ರ ಬ್ಯಾಟ್ಸ್‌ಮನ್ ಆಗಿರಬಹುದು. ಆದ್ದರಿಂದ ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದಾರೆ. ನಾನು ಯಾವಾಗಲೂ ಅವರ ಆಟವನ್ನು ನೋಡುವುದನ್ನು ಆನಂದಿಸುತ್ತೇನೆ” ಎಂದು ಕೊಹ್ಲಿ ಸೇರಿಸಿದರು.
ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಂದಿನ ಏಷ್ಯಾಕಪ್ ನಲ್ಲಿ ಮುಖಾಮುಖಿಯಾಗಲಿದೆ. ಸೆಪ್ಟೆಂಬರ್ ಎರಡರಂದು ಈ ಪಂದ್ಯ ನಡೆಯಲಿದೆ.