Advertisement

B.Y.Vijayendra: ಅಧಿವೇಶನದಲ್ಲಿ ಸರಕಾರದ ಬಂಡವಾಳ ಬಯಲು: ಬಿಜೆಪಿ ಗುಡುಗು

12:38 AM Jul 05, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ಪಾಪದ ಕೊಡ ತುಂಬಿ ತುಳುಕುತ್ತಿದೆ. ಈ ಸರಕಾರ ಇನ್ನೆಷ್ಟು ದಿನ ಜೀವ ಹಿಡಿದುಕೊಂಡಿರುತ್ತದೆ ಎಂಬುದು ಗೊತ್ತಿಲ್ಲ. ಮುಂಬರುವುದು ಬಿಜೆಪಿಯ ಪಾಲಿನ ಹೋರಾಟದ ದಿನಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರಕಾರದ ವಿರುದ್ಧ ಗುಡುಗಿದ್ದಾರೆ.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜುಲೈ 15ರಂದು ನಡೆಯಲಿರುವ ಅಧಿವೇಶನದಲ್ಲಿ ಇವರ ಬಂಡವಾಳವನ್ನು ಬಯಲಿಗೆ ಎಳೆಯುತ್ತೇವೆ. ಸಿಎಂ ಹಿಂಬಾಲಕ ಸಚಿವರು ನಾಲ್ಕು ಡಿಸಿಎಂ ಮಾಡಿ ಎಂದು ಓಡಾಡುತ್ತಿದ್ದರೆ, ಡಿ.ಕೆ. ಶಿವಕುಮಾರ್‌ ಬಣ ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸುತ್ತಿದೆ. ಇವರ ಬಡಿದಾಟದಲ್ಲಿ ಸರಕಾರ ಎಷ್ಟು ದಿನ ಇರುತ್ತದೆ ಎಂಬುದು ಗೊತ್ತಿಲ್ಲ ಎಂದರು.

ಅಧಿಕಾರ ದರ್ಪದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 15 ರಿಂದ 20 ಸ್ಥಾನ ಗೆಲ್ಲಲು ಹೊರಟಿತ್ತು. ಇವರ ದುರಾಡಳಿತ, ದಬ್ಟಾಳಿಕೆ ನಡುವೆ ನಾವು 19 ಸೀಟು ಗೆದ್ದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಒಡೆದಾಡುವ ನೀತಿ, ತುಷ್ಟೀಕರ ನೀತಿಯನ್ನು ಧಿಕ್ಕರಿಸಿ ನಮಗೆ ಜನರು ಆಶೀರ್ವಾದ ಮಾಡಿ¨ªಾರೆ. ಕಾಂಗ್ರೆಸ್‌ನ ಕಟಾಕಟ್‌ ಸುಳ್ಳಿನ ಭರವಸೆಗಳ ನಡುವೆ 142 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಮುನ್ನಡೆ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಮುಡಾ ಹಗರಣದಲ್ಲಿ ಹಲವರ ಹೆಸರು
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಆದಿಯಾಗಿ ಅನೇಕರ ಹೆಸರುಗಳು ಕೇಳಿ ಬರುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹುಬ್ಬಳ್ಳಿ ನೇಹಾ ಹತ್ಯೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ರಾಮೇಶ್ವರ ಕೆಫೆ ಬಾಂಬ್‌ ಸ್ಫೋಟ, ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್‌ ಘೋಷಣೆ, ಕಿಸಾನ್‌ ಸಮ್ಮಾನ್‌ ಯೋಜನೆ ಸ್ಥಗಿತ ಸೇರಿ ಅನೇಕ ಘಟನೆಗಳು ನಡೆದಿವೆ. ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಮೇಕೆದಾಟು ಹೋರಾಟ ನಡೆಸಿತ್ತು. ಆದರೆ ಈ ಸರಕಾರ ಬಂದ ಅನಂತರ ಡಿ.ಕೆ. ಶಿವಕುಮಾರ್‌ ಈ ವಿಚಾರ ಮರೆತಿದ್ದಾರೆ. ಅವರ ಹಣೆಬರಹ ಏನೆಂದು ಜನರು ನೋಡುತ್ತಿದ್ದಾರೆ ಎಂದು ಟೀಕಿಸಿದರು.

“ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಸಂಖ್ಯಾಬಲ ಕಡಿಮೆಯಾದರೂ ಅದು ಹಿನ್ನಡೆಯಲ್ಲ. ಪಕ್ಷದ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಈ ಹೇಳಿಕೆ ನೀಡುವ ಮೂಲಕ 25ರಿಂದ 17ಕ್ಕೆ ಕುಸಿದಿರುವ ಬಗ್ಗೆ ಬೇರೆ ಬೇರೆ ವ್ಯಾಖ್ಯಾನಗಳಾಗುತ್ತಿವೆ. ಆದರೆ ಕಾಂಗ್ರೆಸ್‌ ಸರ್ಕಾರದ ದಬ್ಟಾಳಿಕೆ, ಗ್ಯಾರಂಟಿಯ ಆಮಿಷ ಇತ್ಯಾದಿಗಳ ಮಧ್ಯೆ ಮೈತ್ರಿಗೆ 19 ಸ್ಥಾನ ಸಿಕ್ಕಿರುವುದು ಕಡಿಮೆ ಸಾಧನೆಯಲ್ಲ. ಕಾಂಗ್ರೆಸ್‌ಗೆ ಎರಡಂಕಿ ಸ್ಥಾನ ತಲುಪುವುದಕ್ಕೂ ಸಾಧ್ಯವಾಗಿಲ್ಲ.” – ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next