Advertisement

Lok Sabha Election: “ಕೈ’ ಬಡತನ ಪ್ರೀತಿಸಿತೇ ಹೊರತು ಬಡವರನ್ನಲ್ಲ: ಬಿ.ವೈ.ರಾಘವೇಂದ್ರ

01:07 PM Apr 05, 2024 | Team Udayavani |

ಸಾಗರ: ನಮ್ಮ ದೇಶವನ್ನು 60 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಕಾಂಗ್ರೆಸ್‌ ಬಡತನವನ್ನು ಪ್ರೀತಿಸಿತೇ ಹೊರತು ಬಡವರನ್ನು ಪ್ರೀತಿಸಿಲ್ಲ. ಹಾಗಾಗಿ ಬಡವರು ಬಡವರಾಗಿಯೇ ಉಳಿದಿದ್ದರು. ಆದರೆ ಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ಪ್ರಧಾನಿ ಮೋದಿ ಬಡವರನ್ನು ಪ್ರೀತಿಸಿದ್ದು ಮಾತ್ರವಲ್ಲ. ಅಂತ್ಯೋದಯಕ್ಕೆ ಹಲವು
ಯೋಜನೆಗಳನ್ನು ನೀಡುವ ಮೂಲಕ ಬಡತನವನ್ನು ದೂರ ಮಾಡುತ್ತ ಬಂದಿದ್ದಾರೆ. ಇದು ನಿಜವಾದ ಆಡಳಿತ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ನಗರದ ಗಾಂಧಿ ಮೈದಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ 3ನೇ ಬಾರಿಗೆ ನರೇಂದ್ರ ಮೋದಿಯವರನ್ನು ಏಕೆ ಪ್ರಧಾನಿ ಮಾಡಬೇಕು ಎನ್ನುವ ಕುರಿತು ಮಾತನಾಡಿದ ಅವರು, ಕಳೆದ 70 ವರ್ಷಗಳಲ್ಲಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಹೇಳುವ ಹೆಸರಿನಲ್ಲಿ
ಭಾಷಣವನ್ನಷ್ಟೇ ಮಾಡಿದ ಕಾಂಗ್ರೆಸ್‌ ಆಡಳಿತ ದೇಶದ ಕುರಿತಾಗಲಿ, ಬಡವರ, ರೈತರ ಕುರಿತಾಗಲಿ ಗಮನ ಹರಿಸಿಲ್ಲ. ಮೋದಿಯವರು ಭಾಷಣದ ಬದಲು ಜಗತ್ತು ಭಾರತ ದೇಶದ ಕುರಿತು ಗೌರವ ನೀಡುವ ರೀತಿ ಭೂಷಣವಾಗಿಸಿದರು. ಅದು ಬಡವರ ಕಲ್ಯಾಣದ ಮೂಲಕ ಎಂದರು.

ಕಾಂಗ್ರೆಸ್‌ ಗ್ಯಾರಂಟಿ ಮೂಲಕ ಮತ್ತೂಮ್ಮೆ ನಿಮ್ಮ ಬಳಿ ಬರುತ್ತಿದೆ. ಈಗಾಗಲೇ ರಾಜ್ಯದಲ್ಲಿ ನೀಡಿರುವ ಗ್ಯಾರಂಟಿ ಬಡವರ ಜೇಬಿನಿಂದ ಕಿತ್ತು ಇನ್ನೊಬ್ಬರಿಗೆ ಕೊಡುತ್ತಿರುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ನರೇಂದ್ರ ಮೋದಿ ಅವರು ನೀಡಿರುವ ಜನಪರ ಯೋಜನೆಗಳನ್ನು
ಮುಖಂಡರು, ಕಾರ್ಯಕರ್ತರು ಮನೆ- ಮನೆಗೆ ತಲುಪಿಸುವ ಮೂಲಕ ಅತಿಹೆಚ್ಚು ಮತಗಳ ಅಂತರದಿಂದ ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ, ಬಿಜೆಪಿ ಉಪಾಧ್ಯಕ್ಷ ಎಚ್‌. ಹಾಲಪ್ಪ ಹರತಾಳು ಮಾತನಾಡಿ, ನಮ್ಮ ನಮ್ಮ ಬೂತ್‌ ಗೆದ್ದರೆ ನಮ್ಮ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬಹುದು. ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಯೋಜನೆ ಜನರ ಮನೆ ಹಾಗೂ ಮನವನ್ನು ಮುಟ್ಟಿದೆ. 10 ವರ್ಷಗಳ ಕಾಲ ಸಣ್ಣ ಆಪಾದನೆ ಇಲ್ಲದೆ ಆಡಳಿತ ನಡೆಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ಭಾರತವನ್ನು ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಸಂಕಲ್ಪ ಮೋದಿಯವರದ್ದಾಗಿದೆ. ಜಗತ್ತಿನಲ್ಲಿ ಭಾರತವನ್ನು ನಂ. 1 ಸ್ಥಾನಕ್ಕೆ ತರುವ ಜೊತೆಗೆ ವಿಕಸಿತ ಭಾರತ ಪರಿಕಲ್ಪನೆ ಸಾಕಾರಗೊಳಿಸಲು,  ನರೇಂದ್ರ ಮೋದಿ ಅವರ ಕೈ ಬಲಪಡಿಸಲು ರಾಘವೇಂದ್ರ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಮನವಿ
ಮಾಡಿದರು.

ಟಿ.ಡಿ.ಮೇಘರಾಜ್‌, ಡಾ| ರಾಜನಂದಿನಿ, ದೇವೇಂದ್ರಪ್ಪ ಯಲಕುಂದ್ಲಿ, ಪ್ರಸನ್ನ ಕೆರೆಕೈ, ಕೆ.ಆರ್‌.ಗಣೇಶ್‌ಪ್ರಸಾದ್‌, ಮಧುರಾ ಶಿವಾನಂದ್‌, ಕೆ.ಸಿ. ದೇವಪ್ಪ, ಅರುಣ ಕುಗ್ವೆ, ಸುವರ್ಣ ಟೀಕಪ್ಪ ಇನ್ನಿತರರು ಇದ್ದರು.

Advertisement

ಮಾರುತಿಪುರದಲ್ಲಿ ಬಿಜೆಪಿ ಮಹಿಳಾ ಸಮಾವೇಶ
ಹೊಸನಗರ: ಬಿಜೆಪಿ ಮಹಿಳೆಯರಿಗೆ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ಲೋಕಸಭೆಯಲ್ಲಿ ನೀಡುವ ಮೂಲಕ ಮಹತ್ವದ ಹೆಜ್ಜೆ ಇರಿಸಿದೆ ಎಂದು
ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಸಮೀಪದ ಮಾರುತಿಪುರದಲ್ಲಿ ಬಿಜೆಪಿ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ
ಮಹಿಳೆಯರಿಗೆ ನೀಡಿದ ಅನೇಕ ಯೋಜನೆಗಳಿಗೆ ಉತ್ತರವಾಗಿ ಮತ್ತೆ ಅಧಿಕಾರ ನೀಡುವ ಕೆಲಸ ಆಗಬೇಕಿದೆ ಎಂದರು.

ಈಗ ಮಹಿಳೆಯರು ನೀಡುತ್ತಿರುವ ಪ್ರತಿಯೊಂದು ಅಮೂಲ್ಯ ಮತವು ಮೋದಿಗೆ ಹೋಗುತ್ತದೆ. ತಾವು ನಿಮಿತ್ತ ಮಾತ್ರ ಎಂದು ಅಭಿಪ್ರಾಯಪಟ್ಟರು. ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಕಳೆದ 10 ವರ್ಷ ಸುವರ್ಣ ಕಾಲವಾಗಿತ್ತು. ಮತ್ತೆ ದೇಶ- ವಿದೇಶಗಳಲ್ಲಿ ಭಾರತದ ಕಂಪನ್ನು ಮತ್ತಷ್ಟು ಬೆಳಗಿಸಲು
ಮೋದಿ ಮತ್ತೂಮ್ಮೆ ಅನಿವಾರ್ಯ ಎಂದರು.  ಮಹಿಳಾ ಮೋರ್ಚಾ ಅಧ್ಯಕ್ಷ ಗಾಯತ್ತಿ ಮಲ್ಲಪ್ಪ, ಡಾ| ರಾಜನಂದಿನಿ, ಪ್ರಮುಖರಾದ ಆಶಾ, ಕುಸುಮಾ
ಸುರೇಶ, ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ, ಕೃಷ್ಣವೇಣಿ, ಮಂಡಾಣಿ ಮೋಹನ ಮತ್ತಿತರರು ಇದ್ದರು. ಸುಮಾ ಸುರೇಶ ಸ್ವಾಗತಿಸಿದರು. ಎ.ಟಿ.ನಾಗರತ್ನ
ವಂದಿಸಿದರು.


ವಂಡ್ಸೆ: ಬಿಜೆಪಿ ಬೆ„ಂದೂರು ಮಂಡಲದ ವಂಡ್ಸೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆ ಚಿತ್ತೂರಿನಲ್ಲಿ ನಡೆಯಿತು. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳೆ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಬೈಂದೂರು ಕ್ಷೇತ್ರ ಪ್ರಭಾರಿ
ಅಶೋಕಮೂರ್ತಿ, ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಹಕ್ಲೂರು ಮಂಜಯ್ಯ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್‌ ಶೆಟ್ಟಿ, ಮಂಡಲ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ,ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಶೆಟ್ಟಿ ಕಲ್ಗದ್ದೆ, ಮಹೇಂದ್ರ ಪೂಜಾರಿ, ಚಿತ್ತೂರು ಗ್ರಾ.ಪಂ.ಅಧ್ಯಕ್ಷ ರವಿರಾಜ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಇಂದಿರಾ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ಚಿತ್ತೂರು ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೊಳೂರು, ಕೊಲ್ಲೂರು ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಉದ್ಯಮಿ ವೆಂಕಟೇಶ ಕಿಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next