Advertisement

Lok Sabha Election: ಕೈಲಾಗದ ವಿಪಕ ನಾಯಕರಿಂದ ಅಪಪ್ರಚಾರ: ಬಿವೈ ರಾಘವೇಂದ್ರ

09:38 AM Apr 08, 2024 | Team Udayavani |

ಶಿವಮೊಗ್ಗ: ಕ್ಷೇತ್ರದಲ್ಲಿ ಅತ್ಯಂತ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ. ಅನೇಕ ಸಾಹಿತಿ ಮುಖ್ಯಮಂತ್ರಿಗಳಿದ್ದ ಕ್ಷೇತ್ರ. ನಮ್ಮ ದೌರ್ಭಾಗ್ಯ ಅಭಿವೃದ್ಧಿ ಬಗ್ಗೆ
ಚರ್ಚೆ ಆಗದೆ, ವೈಯಕ್ತಿಕ ಟೀಕೆ ನಡೆಯುತ್ತಿದೆ. ಕೈಲಾಗದ ವಿಪಕ್ಷದ ನಾಯಕರ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಟೀಕಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಪ್ರಚಾರ ಮಾಡಲು ಯಾವುದೇ ವಿಚಾರ ಇಲ್ಲ. ಹೀಗಾಗಿಯೇ ಅಪಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ, ರಾಜ್ಯದಲ್ಲಿ ಆಡಳಿತ ಮಾಡಿದವರು ನೀವು. ಕುಮಾರಸ್ವಾಮಿ, ಯಡಿಯೂರಪ್ಪ ಸಮ್ಮಿಶ್ರ ಸರಕಾರ ಇದ್ದಾಗ ಸಾಕಷ್ಟು ಅಭಿವೃದ್ಧಿ ಆಗಿದೆ ಎಂದರು.

ಚಿತ್ರದುರ್ಗದಲ್ಲಿ ಮಠದಲ್ಲಿ ಪ್ರಚಾರ ಮಾಡಿದ್ದೆ ಎಂದು ಚುನಾವಣಾ ನೀತಿ ಸಂಹಿತೆ ದೂರು ದಾಖಲಾಗಿತ್ತು. ಈ ಸಂಬಂಧ ಪ್ರಕರಣ ರದ್ದು ಮಾಡುವಂತೆ
ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇನೆ. ಶಿವಮೊಗ್ಗ ಜನತೆ ಮೋದಿ ಕೈ ಬಲಪಡಿಸುತ್ತಾರೆ ಎಂದರು.

ಶಿಕಾರಿಪುರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಚಾರ ಮಾಡುತ್ತಾರೆ. ಶಿಕಾರಿಪುರದ ಜನತೆ ಪುರಸಭೆ ಸದಸ್ಯನಾಗಿದ್ದವನನ್ನು ಸಂಸತ್‌ ಸದಸ್ಯನಾಗಿ
ಮಾಡಿದ್ದಾರೆ. 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುತ್ತೇನೆ ಎಂದರು.

ಈಶ್ವರಪ್ಪ ಮೋದಿ ಭಾವಚಿತ್ರ ಬಳಕೆಗೆ ಎಲ್ಲರಿಗೂ ಕಾನೂನಿನಲ್ಲಿ ಹಕ್ಕಿದೆ. ಯಾವ ಸಂದರ್ಭದಲ್ಲಿ ಯಾವ ಪೋಟೋ ಹಾಕಬೇಕೋ ಹಾಕಿಕೊಳ್ಳಲಿ. ಕೋರ್ಟ್‌
ಏನು ತೀರ್ಮಾನ ಮಾಡುತ್ತದೋ ನೋಡೋಣ. ಮೋದಿ ಭಾವಚಿತ್ರ ಹಾಕಿಕೊಳ್ಳುವುದರಿಂದ ನಮ್ಮ ಕಾರ್ಯಕರ್ತರಿಗೆ ಯಾವುದೇ ಗೊಂದಲ ಆಗಲ್ಲ. ಹಿಂದುತ್ವದ ಆಳ- ಅಗಲ ಇದೆ. ಅದರದೇ ಆದ ಸಂಸ್ಕಾರ ಇದೆ. ಮೋದಿ ಶ್ರಮ ಇದೆ, ಅನೇಕ ಕಾರ್ಯಕರ್ತರು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಜನ
ಯಾವ ಸಂದರ್ಭದಲ್ಲಿ ಏನು ತೀರ್ಮಾನ ತಗೋಬೇಕೋ ಅದನ್ನು ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next