Advertisement

Lok Sabha Election: ಗ್ಯಾರಂಟಿಗಾಗಿ ಚುನಾವಣೆ ನಡೆಯಲ್ಲ : ಬಿ.ವೈ. ರಾಘವೇಂದ್ರ

12:24 PM Apr 05, 2024 | sudhir |

ಶಿವಮೊಗ್ಗ: ಈ ಬಾರಿಯ ಲೋಕಸಭೆ ಚುನಾವಣೆ ರಾಷ್ಟ್ರೀಯತೆ, ಅಭಿವೃದ್ಧಿಗಳ ಮೇಲೆ ನಡೆಯುತ್ತದೆಯೇ ವಿನಾ ಗ್ಯಾರಂಟಿಗಳಿಗಾಗಿ ನಡೆಯುವುದಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಗುರುವಾರ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದೇಶವನ್ನು ಅಭಿವೃದ್ಧಿಗೊಳಿಸುವ ಚುನಾವಣೆ. ಗ್ಯಾರಟಿಗಾಗಿ ನಡೆಯವ ಚುನಾವಣೆ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕಾಗಿ, ಸ್ವಾವಲಂಬಿಯಾಗಿ ಬದುಕಬೇಕೆನ್ನುವ ದೃಷ್ಟಿಯಿಂದ ಅನೇಕ
ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳಾ ಮೀಸಲಾತಿ, ಸ್ಟಾರ್ಟಪ್‌ ಯೋಜನೆ, ತ್ರಿವಳಿ ತಲಾಖ್‌. ಜನಧನ್‌ ಯೋಜನೆ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ವಿಶ್ವಕರ್ಮ ಯೋಜನೆ, ಲಕ್‌ ಪತ್‌ ದೀದಿ ಹೀಗೆ ಹತ್ತು ಹಲವು ಕಾರ್ಯಕ್ರಮ ನೀಡಿದ್ದಾರೆ. ಇಂತಹ ವ್ಯಕ್ತಿಯಾದ ಮೋದಿಯವರು ಮತ್ತೆ ಪ್ರದಾನಿಯಾಗಬೇಕು ಎಂದು ಹೇಳಿದರು.

ರಾಮಮಂದಿರ ನಿರ್ಮಾಣ. ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಮೋದಿಯವರು ಮತ್ತೆ ಪ್ರದಾನಿಯಾಗಲು ನಾವು ಕೆಲಸ ಮಾಡುತ್ತಿದ್ದೇವೆ. ಅನೇಕ ಅಭಿವೃದ್ಧಿ, ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರ ಎಂದು ಬಣ್ಣಿಸಿದ ಅವರು, ಹಿಂದೆ ಎಲ್‌ಪಿಜಿ ಸಿಲಿಂಡರ್‌ ಸಿಗದ ಪರಿಸ್ಥಿತಿ ಇತ್ತು. ಈಗ ಎಲ್ಲೆಂದರಲ್ಲಿ ಸಿಗುತ್ತಿದೆ. ಬಡ ಕುಟುಂಬಕ್ಕೆ ಉಚಿತ ಸಿಲಿಂಡರ್‌ ಪೂರೈಸುತ್ತಿದ್ದೇವೆ. ಹಿಂದಿನ 60 ವರ್ಷಗಳಲ್ಲಿ ಕಾಂಗ್ರೆಸ್‌ ಸಾಧನೆ ಏನು ಎಂದು ಪ್ರಶ್ನಿಸಿದ
ಅವರು ಪ್ರತಿ ಗ್ರಾಮಗಳಲ್ಲಿ ಉತ್ತಮ ರಸ್ತೆ, ನೀರು, ಶೌಚಾಲಯ, ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಉಚಿತ ಲಸಿಕೆ ನೀಡಿ ದೇಶದ ಜನರ ಜೀವ ಉಳಿಸಿದ್ದಾರೆ ಎಂದರು. ಚುನಾವಣೆಗಾಗಿ ಮಾತ್ರ ಮಾತನಾಡುವ ಪಕ್ಷ, ವ್ಯಕ್ತಿ ನಾವಲ್ಲ. ಜನರ ಮಧ್ಯೆ ಇದ್ದು ಅಭಿವೃದ್ಧಿ, ದೇಶದ ರಕ್ಷಣೆ, ಜನಪರ ಯೋಜನೆಗಳ ಚಿಂತನೆ ನಡೆಸುವ ಪಕ್ಷ ಬಿಜೆಪಿ. ಇದರ ಕಾರ್ಯಕರ್ತರಾಗಿರುವ ನಾವು ಪ್ರಧಾನಿ
ನರೇಂದ್ರ ಮೋದಿಯವರನ್ನು ಬೆಂಬಲಿಸಬೇಕಿದೆ. ರಾಜ್ಯ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ.
ಇವು  ದೀರ್ಘ‌ಕಾಲ ಇರಲು ಸಾಧ್ಯವಿಲ್ಲ. ಈ ವಿಷಯಗಳನ್ನು ಮಹಿಳೆಯರು ಬೂತ್‌ ಮಟ್ಟದಲ್ಲಿ ಜನರಿಗೆ ತಿಳಿಸಬೇಕು. ಈ ಕಾರಣದಿಂದ ಕ್ಷೇತ್ರದಲ್ಲಿ
ಬಿಜೆಪಿಯನ್ನು ಮತ್ತೂಮ್ಮೆ ಗೆಲ್ಲಿಸಬೇಕಿದೆ ಎಂಬುದನ್ನು ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಜನರಿಗೆ ಮನವರಿಕೆ ಮಾಡಬೇಕೆಂದು ರಾಘವೇಂದ್ರ ಮನವಿ ಮಾಡಿದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಶಾಸಕ ಚನ್ನಬಸಪ್ಪ, ನಗರಾಧ್ಯಕ್ಷ ಮೋಹನ್‌ ರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಶಿಗಳಾದ ಯಶೋಧ ವೈಷ್ಣವ್‌, ಸುರೇಖಾ ಮುರಳೀದರ್‌ ಮತ್ತಿತರರಿದ್ದರು.

Advertisement

ಇದನ್ನೂ ಓದಿ: ಹೆರಿಗೆ ಮಾಡಿಸಲು ನಿರಾಕರಿಸಿದ ವೈದ್ಯರು… ಆಸ್ಪತ್ರೆ ಹೊರಗೆ ಮಗುವಿಗೆ ಜನ್ಮ ನೀಡಿದ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next