Advertisement
ಕಟಪಾಡಿ: ಮಟ್ಟುಗುಳ್ಳವನ್ನು ಬಿ.ಟಿ. ಬದನೆಯಿಂದ ಪಾರು ಮಾಡಿದ ಪದವೀಧರ ಕ್ರಾಂತಿಕಾರಿ ಕೃಷಿಕ ಲಕ್ಷ್ಮಣ ಮಟ್ಟು ಅವರು ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು.
ಯುವಕರಿಗೆ, ಶಾಲಾ ಮಕ್ಕಳಿಗೆ ಶಾಲಾ ಕೈದೋಟ ಅಲ್ಲದೇ ತರಕಾರಿ ಬೆಳೆಸುವಲ್ಲಿ ತರಬೇತಿಯನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಪ್ರಥಮ ಪ್ರೋಟ್ರೇ ಪದ್ಧತಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸಂಘವನ್ನು ಸ್ಥಾಪಿಸಿ ಟಿಲ್ಲರ್ ಖರೀದಿಸಿ ಐವರ ತಂಡದೊಂದಿಗೆ ಸುಮಾರು 10 ಎಕರೆ ಹಡಿಲು ಭೂಮಿಯನ್ನು ಅಭಿವೃದ್ಧಿಪಡಿಸಿ ಫಸಲು ಭರಿತ ಕೃಷಿಯನ್ನು ಬೆಳೆಸಿದ್ದರು.
Related Articles
Advertisement
ವಿದೇಶೀ ಅಧ್ಯಯನ ತಂಡ, ನಬಾರ್ಡ್ ಅಧಿಕಾರಿಗಳಿಗೆ ಮಾಹಿತಿ
ಅಮೆರಿಕದ ಪೆನ್ಸಿಲ್ವೇನಿಯಾ ಯುನಿವರ್ಸಿಟಿ, ಮಲೇಷಿಯಾದ ಇಂಟರ್‌ನ್ಯಾಶನಲ್ ಮಣಿಪಾಲ ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ, ಭಾರತದ ಎಲ್ಲಾ ರಾಜ್ಯಗಳ ನಬಾರ್ಡ್ ಟ್ರೈನಿಂಗ್ ಅಧಿಕಾರಿಗಳಿಗೆ, ವಿವಿಧ ಅಧ್ಯಯನ ಶೀಲರಿಗೆ ಮಟ್ಟುಗುಳ್ಳದ ಬೆಳೆಗಾರಿಕೆ, ಮಾರುಕಟ್ಟೆ, ಸಹಿತ ಸಂಘದ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿರುವ ಲಕ್ಷ್ಮಣ್ ಅವರು ಮಟ್ಟುಗುಳ್ಳ ಬೆಳೆಗಾರರ ಸಂಘದ ಕಾರ್ಯನಿರ್ವಹಣಾಧಿಕಾರಿ ಯಾಗಿರುತ್ತಾರೆ. ಕೃಷಿ ಮೇಳದಲ್ಲಿ ಗೌರವ
ಕೃಷಿ ಮೇಳಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ರಂಗಮಂದಿರ ನಿರ್ಮಾಣ, ರೈತ ಸಂಚಾರಿ ಮಾರುಕಟ್ಟೆ ಸ್ಥಾಪನೆಯ ಮೂಲಕ ಗೌರವಕ್ಕೊಳಗಾಗಿದ್ದು, ಮಾತ್ರವಲ್ಲದೇ ಸ್ಥಳೀಯವಾಗಿ ಯುವ ಸಾಧನಾ ಪ್ರಶಸ್ತಿ ಸಹಿತ ಸಮ್ಮಾನದ ಗೌರವಗಳನ್ನು ಬಾಚಿಕೊಂಡಿದ್ದಾರೆ. ಕೃಷಿಯಿಂದ ಒತ್ತಡರಹಿತ ಜೀವನ
ಯುವ ಶಕ್ತಿಯು ವೈಜ್ಞಾನಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಆದಾಯ, ಆರೋಗ್ಯ ವೃದ್ಧಿ ಮಾಡಿಕೊಳ್ಳಬಹುದು. ಯಾವುದೇ ಒತ್ತಡದ ಉದ್ಯೋಗಕ್ಕಿಂತಲೂ ಹೆಚ್ಚಿನ ಪಾಲು ಆದಾಯವನ್ನು ಆಧುನಿಕ ಕೃಷಿಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾರದ್ದೂ ಹಂಗಿಲ್ಲದೆ, ಅಡಿಯಾಳಾಗದೇ, ಒತ್ತಡ ರಹಿತ ಜೀವನ ಕೃಷಿಯಿಂದ ಕಟ್ಟಿಕೊಳ್ಳಬಹುದು. 10 ಕ್ವಿಂಟಾಲ್ ಅಕ್ಕಿ ಸಹಿತ ಸುಮಾರು 4 ಲಕ್ಷ ರೂ.ಗೂ ಅಧಿಕ ಆದಾಯ ಕೃಷಿ ಮೂಲದಿಂದ ಲಭಿಸುತ್ತದೆ . ಶ್ರಮ ಪಟ್ಟು ಕೆಲಸ ಮಾಡಿದರೆ ಕೃಷಿಯಿಂದ ಲಾಭ ಗಳಿಸಲು ಸಾಧ್ಯ
– ಲಕ್ಷ್ಮಣಮಟ್ಟು,ಕೃಷಿಕ ಹೆಸರು:
ಲಕ್ಷ್ಮಣ ಮಟ್ಟು
ಏನೇನು ಕೃಷಿ:
ಭತ್ತ, ಮಟ್ಟುಗುಳ್ಳ ಹಾಗೂ ಇತರ ತರಕಾರಿ, ತೆಂಗು, ತಾವರೆ ಹೂವು
ಎಷ್ಟು ವರ್ಷ: 40
ಕೃಷಿ ಪ್ರದೇಶ:
ಎರಡು ಎಕರೆ ಸಂಪರ್ಕ ಸಂಖ್ಯೆ: 9964069001 -ವಿಜಯ ಆಚಾರ್ಯ,ಉಚ್ಚಿಲ