Advertisement

ಕುಯೆಂಪು…ಬೆರೇಂದ್ರೆ…ಇದು ಸಚಿವ ಶ್ರೀರಾಮುಲು ಕನ್ನಡ!

08:24 AM Nov 02, 2019 | Team Udayavani |

ರಾಯಚೂರು: ನಾಡು ನುಡಿಯ ಶ್ರೀಮಂತಿಕೆಯ ಸ್ಮರಿಸುವ ರಾಜ್ಯೋತ್ಸವ ದಿನದಂದೇ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕನ್ನಡ ಭಾಷೆ ಅಪಭ್ರಂಶಗೊಳಿಸಿದ ಪ್ರಸಂಗ ನಡೆಯಿತು.

Advertisement

ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣಕ್ಕಿಳಿದ ಸಚಿವರು ಒಂದೊಂದಾಗಿ ಪದಗಳನ್ನು ತಪ್ಪಾಗಿ ಉಚ್ಛರಿಸುತ್ತಾ ಹೋದರು. ಕೆಲವೊಂದು ಪದಗಳು ನೆರೆದವರ ಅಚ್ಚರಿಗೂ ಕಾರಣವಾದರೆ, ಬಹುತೇಕರಿಗೆ ಅರ್ಥವೇ ಆಗಲಿಲ್ಲ.

ಸ್ವಾತಂತ್ರ್ಯ ಎನ್ನುವುದಕ್ಕೆ ಸ್ವಸಂತ್ರ,ದೇವನಾಂಪ್ರಿಯ ಎನ್ನುವ ಬದಲು ದೇವ ಪ್ರಾಣೀಯ,ಕುವೆಂಪು ಬದಲಿಗೆ ಕುಯೆಂಪು,ದ ರಾ ಬೇಂದ್ರೆ ಎನ್ನುವ ಬದಲು ಬೆರೇಂದ್ರೆ, ಸಂಘ ಸಂಸ್ಥೆಗಳು ಬದಲಿಗೆ ಸಂಘ ಸಮಸ್ಯೆಗಳು, ಪ್ರಗತಿ ಪಥದತ್ತ ಎನ್ನುವ ಬದಲಿಗೆ ಪ್ರಗತಿ ಪದಕ ಎಂದು ಉಚ್ಛರಿಸಿದರು. ಜಿಲ್ಲೆಗೆ 2000 ವರ್ಷಗಳ ಇತಿಹಾಸ ಎನ್ನುವ ಬದಲು 200 ವರ್ಷ ಎಂದರು.

ಹೀಗೆ ಭಾಷಣದುದ್ದಕ್ಕೂ ಒಂದಲ್ಲ ಒಂದು ಉಚ್ಛಾರ ತಪ್ಪು ಮಾಡುತ್ತಲೇ ಸಾಗಿದರು. ಅಧಿಕಾರಿಗಳು ಬರೆದುಕೊಟ್ಟ ವರದಿಯನ್ನು ಓದಿ ಮುಗಿಸುವಷ್ಟರಲ್ಲಿ ಹೈರಾಣವಾದರು. ಕೊನೆ ಕೊನೆಗೆ ಓದುವುದನ್ನು ಬಿಟ್ಟು ತಮ್ಮದೇ ಶೈಲಿಯ ಭಾಷಣ ಶುರುವಿಟ್ಟುಕೊಂಡ ಸಚಿವರು, ಸಂಪೂರ್ಣ ರಾಜಕೀಯ ಟೀಕೆ ಟಿಪ್ಪಣಿಗಳನ್ನು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next