Advertisement
ಪ್ರಧಾನಿ ಮೋದಿಯವರ ದಕ್ಷ ನೇತೃತ್ವದಲ್ಲಿ ಕೋವಿಡ್ 19 ಪಿಡುಗನ್ನು ಮೂಲೋತ್ಪಾಟನೆ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಕರ್ನಾಟಕದ ಮುಖ್ಯಮಂತ್ರಿ ಯಾಗಿ ಈ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಹಿತ ಕಾಪಾಡುವುದು ನನ್ನ ಗುರುತರ ಹೊಣೆಗಾರಿಕೆ. ಕೋವಿಡ್ 19 ವೈರಸ್ ಹರಡಲು ನಮ್ಮ ಸರಕಾರ ಅವಕಾಶ ನೀಡುವುದಿಲ್ಲ.
ಹಳ್ಳಿಗಳು ಭಾರತದ ಬೆನ್ನೆಲುಬು. ಕೃಷಿ, ಹೈನುಗಾರಿಕೆ ಮುಂತಾದ ಜೀವನೋಪ ಯೋಗಿ ಚಟುವಟಿಕೆಗಳು ಇಡೀ ರಾಜ್ಯದ ನೆಮ್ಮದಿಯ ಬದುಕಿನ ಜೀವನಾಡಿ.ಅತ್ಯಧಿಕ ಸಂಖ್ಯೆಯ ಶ್ರಮಿಕರು ನೆಲೆಸಿರುವುದೇ ಹಳ್ಳಿಗಳಲ್ಲಿ. ಈ ಕಾರಣದಿಂದಲೇ ಹಳ್ಳಿಗಳಿಗೆ ಕೋವಿಡ್ 19 ವೈರಸ್ ಪ್ರವೇಶಿಸ ಬಾರದು ಎನ್ನುವುದು ನನ್ನ ಅಭಿಮತ. ನಗರ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗಳಿಗೆ ಎಲ್ಲ ರೀತಿಯ ಸವಲತ್ತುಗಳಿರುತ್ತವೆ. ಸಾಕಷ್ಟು ಪ್ರಮಾಣದ ಪರಿಣತ ವೈದ್ಯಕೀಯ ಸಿಬಂದಿ ಇರುತ್ತಾರೆ. ದೊಡ್ಡ ಪ್ರಮಾಣದಲ್ಲಿ ರೋಗ ತಪಾಸಣ ಕೇಂದ್ರಗಳಿವೆ. ಕೋವಿಡ್ 19 ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1,700 ಹಾಸಿಗೆ ಸಮುಚ್ಚಯವನ್ನು ಮೀಸಲಿಟ್ಟಿದ್ದೇವೆ. ಆದರೆ ಇಂಥ ವೈದ್ಯಕೀಯ ಸವಲತ್ತುಗಳು ಹಳ್ಳಿಗಳಲ್ಲಿ ಇಲ್ಲ. ಬೆಂಗಳೂರು ಸೇರಿದಂತೆ ನಗರಕ್ಕೆ ಹತ್ತಿರದ ಹಳ್ಳಿಗಳ ಜನರು ಸೋಂಕು ಪೀಡಿತರನ್ನು ನಗರ ಪ್ರದೇಶಗಳಿಗೆ ಕರೆದುಕೊಂಡು ಬರಬಹುದು. ಆದರೆ ಕುಗ್ರಾಮಗಳಲ್ಲಿ ನೆಲೆಸಿರುವವರು ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ಬರಲು ಕಷ್ಟಸಾಧ್ಯ.
Related Articles
Advertisement
ಹಳ್ಳಿಗಳಿಗೆ ಹೋಗದಿದ್ದರೆ ಗೆಲುವು ಸಾಧಿಸಿದ ಹಾಗೆಇನ್ನು ಎರಡೂ¾ರು ದಿನಗಳಲ್ಲಿ ಯುಗಾದಿ ಹಬ್ಬವಿದೆ. ನಗರಗಳಲ್ಲಿರುವ ಹಳ್ಳಿ ಮೂಲದವರು ಹಳ್ಳಿಗೆ ತೆರಳುವುದು ವಾಡಿಕೆ. ಆದರೆ ಈ ಭಾವನಾತ್ಮಕ ಸೆಳೆತವನ್ನು ಈ ಬಾರಿ ಪ್ರತಿಬಂಧಿಸಿ. ಏಕೆಂದರೆ ಹಳ್ಳಿಗಳನ್ನು ಕೋವಿಡ್ 19 ಪ್ರವೇಶಿಸದಂತೆ ತಡೆಗಟ್ಟಿದರೆ ನಾವು ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಶೇ.60ರಷ್ಟು ಗೆಲುವು ಸಾಧಿಸಿದ ಹಾಗೆ. ಹೀಗಾಗಿ ಹಳ್ಳಿಗಳಲ್ಲಿ ನೆಲೆಸಿರುವವರು ಯಾವುದೇ ಕಾರಣಕ್ಕೆ ಕೋವಿಡ್ 19 ವೈರಸ್ ಸೋಂಕಿಗೆ ಬಲಿ ಆಗಲೇ ಕೂಡದು. ಈ ಹಿನ್ನೆಲೆ ಯಲ್ಲಿ ರೋಗ ಗುಣಪಡಿಸುವುದಕ್ಕಿಂತ, ರೋಗ ತಡೆಗಟ್ಟುವುದು ಜಾಣತನ ಎನ್ನುವ ಗಾದೆಯಂತೆ ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ವಾಸಿಸುವ ಯಾರೂ ಹಳ್ಳಿಗಳಿಗೆ ಭೇಟಿ ನೀಡಕೂಡದು. ರಾಜ್ಯದ ಪ್ರತಿಯೊಂದು ಹಳ್ಳಿಯನ್ನು ಕೋವಿಡ್ 19 ವೈರಸ್ ಮುಕ್ತವಾಗಿಸಬೇಕು ಎನ್ನುವ ನನ್ನ ಸರಕಾರದ ಸದಾಶಯದೊಂದಿಗೆ ನೀವೆಲ್ಲ ಭಾಗಿಗಳಾಗಬೇಕೆಂದು ಕೈಜೋಡಿಸಿ ವಿನಂತಿ ಮಾಡಿಕೊಳ್ಳುತ್ತೇನೆ. ಸಮರೋಪಾದಿ ಕಾರ್ಯತಂತ್ರ
ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಗಟ್ಟುವ ದಿಶೆಯಲ್ಲಿ ನನ್ನ ಸರಕಾರ ಸಮರೋ ಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ. ಕರ್ನಾಟಕದ ಎಲ್ಲ ಗಡಿಗಳನ್ನು ಮುಚ್ಚಿದ್ದೇವೆ. ಸಾಮಾಜಿಕ ಒಗ್ಗೂಡುವಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ದಿಶೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗಳನ್ನು ಮುಂದೂಡಿದ್ದೇವೆ. ಕೋವಿಡ್ 19 ವೈರಾಣು ಗಳನ್ನು ಪತ್ತೆ ಮಾಡುವ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ ಇನ್ನೂರು ಮಂದಿಗೆ ವೈದ್ಯಕೀಯ ತಪಾಸಣೆ ನಡೆಸುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಐಸಿಎಂಆರ್ ಮತ್ತು ಎನ್‌ಐವಿ ಸಹಯೋಗದಲ್ಲಿ ಸಾಕಷ್ಟು ಸಂಖ್ಯೆಯ ಸರಕಾರಿ ಮತ್ತು ಸರಕಾರೇತರ ಲ್ಯಾಬ್‌ಗಳಿಗೆ ಕೋವಿಡ್ 19 ತಪಾಸಣ ಪರವಾನಿಗೆ ನೀಡಲಾಗುವುದು. ಬಾಲಬ್ರೂಯಿ ಅತಿಥಿ ಗೃಹವನ್ನು ಕೋವಿಡ್ 19 ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಹೋರಾಟ ಮಾಡುವ ವಾರ್ ರೂಂ ಆಗಿ ಪರಿವರ್ತಿಸಲಾಗಿದೆ. 24 ತಾಸುಗಳ ಕಾಲ ಕಾರ್ಯನಿರ್ವಹಿಸುವ ವಾರ್ ರೂಂ ನಿರ್ವಹಣೆಯ ನೇತೃತ್ವವನ್ನು ನಾನೇ ವಹಿಸಿದ್ದೇನೆ.