Advertisement
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಮತ್ತು ಕೃಷಿ ಕ್ಷೇತ್ರ ಸುಧಾರಣೆಗಾಗಿಯೇರೈತ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳಿಂದರೈತರಿಗೆ ಅನುಕೂಲವಾಗುತ್ತದೆಯೇ ಹೊರತು ಯಾವುದೇ ಅನಾನುಕೂಲ ಆಗುವುದಿಲ್ಲ ಎಂದರು.
Related Articles
Advertisement
ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲವೇ ಆಗಿದೆ. ಒಳಗೆ ಹೊರಗೆ ಎಲ್ಲಾದರೂ ಅವರು ವ್ಯವಹಾರ ಮಾಡಬಹುದು. ತಮ್ಮ ಉತ್ಪನ್ನಗಳನ್ನು ಲಾಭಕ್ಕೆ ಮಾರಿಕೊಳ್ಳಬಹುದು. ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಕೊಟ್ಯಂತರ ರೂ.ಗಳನ್ನು ಖರ್ಚು ಮಾಡುತ್ತಿದೆ. ಗೊಬ್ಬರದ ಸಮಸ್ಯೆ ಬಗೆಹರಿಸಿದೆ. ಬಿತ್ತನೆ ಬೀಜ ನೀಡಿದೆ. ಕಿಸಾನ್ ಕಾರ್ಡ್, ಫಸಲ್ ಬಿಮಾ, ಹನಿ ನೀರಾವರಿ, ಕಿಸಾನ್ ಸಮ್ಮಾನ್ ಮುಂತಾದ ಯೋಜನೆಗಳ ಮೂಲಕ ರೈತರ ಬಾಳನ್ನು ಬೆಳಗಿಸುತ್ತಿದೆ ಎಂದರು. ಇದರ ಪರಿಣಾಮ ರೈತನ ಆದಾಯ ಕೂಡ ಹೆಚ್ಚಿದೆ. 2014 ರಲ್ಲಿ 250 ಮಿಲಿಯನ್ ಟನ್ ಉತ್ಪಾದನೆ ಇದ್ದರೆ. 2020ರಲ್ಲಿ ಅದು 291ಮಿಲಿಯನ್ ಟನ್‌ಗೆ ಹೆಚ್ಚಿದೆ. ಅಂದಿಗೂ ಇಂದಿಗೂ ಶೇ.30 ರಷ್ಟು ಆದಾಯ ಹೆಚ್ಚಿದೆ. ಎಂಆರ್‌ಪಿ ಬಗ್ಗೆಯೂ ಯಾವ ಅನುಮಾನಗಳು ಬೇಡ ಎಂದರು.
ಶಾಂತಿ ಸುವ್ಯವಸ್ಥೆಗಾಗಿ ನಿಷೇಧಾಜ್ಞೆ :
ಇತ್ತೀಚೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡಿಸಿದ ಅವರು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು. ಗಲಾಟೆ ನಂತರ ಶಿವಮೊಗ್ಗದಲ್ಲಿ 144 ಸೆಕ್ಷನ್ ವಿನಾಕಾರಣ ವಿಸ್ತರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನೂ ಇಲ್ಲಯಾವುದೇ ಗಲಾಟೆಯಾಗದಂತೆ ಶಾಂತಿಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶ ಇದರ ಹಿಂದಿದೆ. ಪೊಲೀಸರು ಕೂಡ ಗುಪ್ತಚರ ವರದಿಗಳನ್ನು ಆಧರಿಸಿ ಕೆಲಸ ಮಾಡುತ್ತಾರೆ ಎಂದು ಸಮರ್ಥಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಗಿರೀಶ್ ಪಟೇಲ್,ಡಿ.ಎಸ್.ಅರುಣ್, ಸಾಲೇಕೊಪ್ಪ ರಾಮಚಂದ್ರ,ರಾಮು, ಗಂಗಾಧರ್, ಶಿವರಾಜ್, ಪ್ರಸನ್ನ, ಕೃಷ್ಣೋಜಿರಾವ್,ಸತೀಶ್, ಸುನಿತಾ ಅಣ್ಣಪ್ಪ ಸೇರಿದಂತೆ ಹಲವರಿದ್ದರು