Advertisement

ಬಿ. ಆರ್‌. ತೊಲ್‌ ಇಂಗ್ಲಿಷ್‌ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ

11:22 AM Jun 20, 2017 | Team Udayavani |

ಮುಂಬಯಿ: 2016-2017 ನೇ ಶೈಕ್ಷಣಿಕ ಸಾಲಿನ ಸಿಬಿಎಸ್‌ಇ ಹತ್ತನೇ ತರಗತಿಯಲ್ಲಿ ವಿದ್ಯಾ ಪ್ರಸಾರಕ ಮಂಡಳಿ ಮುಲುಂಡ್‌ ಸಂಚಾಲಕತ್ವದ ಬಿ. ಆರ್‌. ತೊಲ್‌ ಇಂಗ್ಲಿಷ್‌ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ ಲಭಿಸಿದೆ.

Advertisement

ಪರೀಕ್ಷೆಗೆ ಹಾಜರಾದ 65 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ಶೇ. 83 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದರೆ, ಶೇ. 34.04 ರಷ್ಟು ವಿದ್ಯಾರ್ಥಿಗಳು ಶೇ. 90 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಸೋಹಂ ಸಾವರ್ಕರ್‌ ಅವರು 500ರಲ್ಲಿ 496 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಕು| ಆವಂತಿಕಾ ನಾಯಕ್‌ ಅವರು 500ರಲ್ಲಿ 495 ಹಾಗೂ ಕು| ಜೈನಾಬ್‌ ಕೆರೊಸೆನ್‌ವಾಲಾ ಅವರು 491 ಅಂಕಗಳನ್ನು ಪಡೆದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. 

ಶಾಲಾ ಪ್ರಾಂಶುಪಾಲೆ ಆ್ಯಂಜೆಲೀನಾ ನೆಲ್ಸನ್‌ ಅವರು ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕವೃಂದ, ಪಾಲಕ-ಪೋಷಕರನ್ನು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next