Advertisement
ಇಲ್ಲಿ ಮಾಡುವ ಸಮೋಸ ವಿದೇಶಕ್ಕೂ ಹೋಗುತ್ತೆ. ಹೈದ್ರಾಬಾದ್ ಬಿರಿಯಾನಿ, ಉತ್ತರ ಭಾರತ ಚಿಕನ್, ಪತ್ತರ್ ಗೋಷ್, ಚಿಕನ್ ಕಡಾಯಿ,ಹಲೀಮ್… ಹೀಗೆ, ಬಾಯಲ್ಲಿ ನೀರೂರಿಸುವ ನಾನ್‌ವೆಜ್ ಡಿಶ್ ಇಲ್ಲಿ ಸಿಗುತ್ತೆ. ಹೀಗಾಗಿಯೇ ಸಸ್ಯಾಹಾರಿಗಳು ಇಲ್ಲಿ ತಿಂಡಿ ಊಟ ಮಾಡೋಕೆ ಕೊಂಚ ಹಿಂದೆ ಮುಂದೆ ನೋಡ್ತಾರೆ. ಆದರೆ,ಇಂತಹವರಿಗಾಗಿಯೇ ಒಂದು ಹೋಟೆಲ್ ಇದೆ. ಅದು ಬಿ.ಎನ್.ಸಾಂಬಯ್ಯ ಶೆಟ್ಟಿ ಟಿಫನ್ ರೂಂ.ಸಾಂಬಯ್ಯ ಶೆಟ್ಟಿ ಅವರ ಮೂಲ ಶಿವಾಜಿನಗರವೇ. ಇವರು, ಸಸ್ಯಹಾರಿಗಳಿ
ಗಾಗಿಯೇ 1970ರಲ್ಲಿ ಪತ್ನಿ ಕಲಾವತಿ ಅವರ ಸಹಕಾರದೊಂದಿಗೆ ಹೋಟೆಲ್ ಆರಂಭಿಸಿದ್ದರು. ಇವರ ನಂತರ ಪುತ್ರಿ ಗಿರಿಜಾ ಹೋಟೆಲ್ ಮುನ್ನಡೆಸುತ್ತಿದ್ದಾರೆ. ಪತಿ ಅಮರನಾರಾಯಣ ಹೆಂಡತಿಗೆ ಸಾಥ್ ನೀಡುತ್ತಿದ್ದಾರೆ.
ಗಿರುವ ಕಾರಣ, ಗ್ರಾಹಕರಿಗೂ ಹೊರೆಯಾಗದಂತೆ, ದರವನ್ನು 40 ರೂ.ಗೆ ಏರಿಸಿದ್ದಾರೆ.ಕಾಯಂ ಗ್ರಾಹಕರೇ ಹೆಚ್ಚು ಬೆಂಗಳೂರು ಈಗ 70ರ ದಶಕದಂತೆ ಇಲ್ಲ. ಗಲ್ಲಿ
ಗಲ್ಲಿಯಲ್ಲಿ ನಾಲ್ಕೈದು ಹೋಟೆಲ್‌ಗಳು ಪ್ರಾರಂಭವಾಗಿವೆ. ಅದೇ ರೀತಿ, ಸಾಂಬಯ್ಯ ಶೆಟ್ಟಿ ಟಿಫನ್ ರೂಂ ಇರುವ ಧರ್ಮರಾಜ ಕೋಯಿಲ್ ಸ್ಟ್ರೀಟ್ ನಲ್ಲೂ ಹೋಟೆಲ್‌ಗಳು ಇವೆ. ಆದರೆ, ಸಾಂಬಯ್ಯ ಹೋಟೆಲ್‌ನ ತಿಂಡಿ ರುಚಿಗೆ ಮಾರುಹೋಗಿರುವ ಅಕ್ಕಪಕ್ಕದ ಅಂಗಡಿ ಮಾಲೀಕರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ಸ್ಥಳೀಯರು 30 ರಿಂದ
40 ವರ್ಷಗಳಿಂದಲೂ ಕಾಯಂ ಗ್ರಾಹಕರಾಗಿದ್ದಾರೆ. ಈಗ ಅವರ ಮಕ್ಕಳು, ಮೊಮ್ಮಕ್ಕಳೂ ಇಲ್ಲಿನ ತಿಂಡಿ ರುಚಿಗೆ ಮಾರುಹೋಗಿದ್ದಾರೆ. ಪ್ಲಾಸ್ಟಿಕ್ ಬ್ಯಾನ್
ಹೆಚ್ಚಿನ ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸುವುದರಿಂದ ಹಿಡಿದು, ಪಾರ್ಸಲ್ ಕಟ್ಟಲು, ತಿಂಡಿ ಹಾಕಿಕೊಡುವ ಪ್ಲೇಟ್‌ನ ಮೇಲೆ ಪ್ಲಾಸ್ಟಿಕ್ ಬಳಕೆಯಾಗುತ್ತದೆ. ಇದು ಆರೋಗ್ಯ, ಮತ್ತು
ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಆದ ಕಾರಣ ಈ ಸಾಂಬಯ್ಯ ಶೆಟ್ಟಿ ಹೋಟೆಲ್‌ನವರು ಪ್ರಾರಂಭದಿಂದಲೂ ಬಾಳೆಎಲೆ ಈಗ ಮುತ್ತುಗದ ಎಲೆಯಲ್ಲಿ ತಿಂಡಿ ಹಾಕಿಕೊಡ್ತಾರೆ.
Related Articles
ಬದಲಾವಣೆ ಮಾಡಿಲ್ಲ. ಮೊದಲಿನಿಂದಲೂ ತಿಂಡಿ ಪದಾರ್ಥಗಳನ್ನು ಮನೆಯಲ್ಲೇ ತಯಾರಿ ಮಾಡಿಕೊಳ್ಳುವುದರಿಂದ ರುಚಿ ಹಾಗೇ ಉಳಿದುಕೊಂಡಿದೆ.
Advertisement
ವಾರದ ತಿಂಡಿ ವಿವರಇಡ್ಲಿ, ಉದ್ದಿನ ವಡೆ, ದೋಸೆ, ಪೂರಿ ಜೊತೆ ಪಲ್ಯ,ಈರುಳ್ಳಿ ಚಟ್ನಿ, ಕಡ್ಲೆ ಚಟ್ನಿ ವಾರ ಪೂರ್ತಿ ಸಿಗುತ್ತೆ. ದಿನಕ್ಕೊಂದು ಬಗೆಯ ರೈಸ್‌ಬಾತ್ ಇರುತ್ತೆ. ಮಂಗಳವಾರ, ಗುರುವಾರ, ಭಾನುವಾರ ಬ್ರೆಡ್ ಪಲಾವ್, ಬುಧವಾರ ರೈಸ್ ಜೊತೆ ಕೂರ್ಮಾ, ಶುಕ್ರವಾರ ಪೊಂಗಲ್, ಶನಿವಾರ ವಾಂಗೀಬಾತ್ ಮಾಡಲಾಗುತ್ತೆ. ದರ 40 ರೂ. ಹೋಟೆಲ್ ವಿಶೇಷ
ವಡಾ ಕರಿ, ಬ್ರೆಡ್ ಪಲಾವ್‌ಗೆ ಬೇಡಿಕೆ ಹೆಚ್ಚು. ಈ ತಿಂಡಿಗಳು ಬುಧವಾರ, ಶುಕ್ರವಾರ, ಭಾನುವಾರ ಮಾತ್ರ ಲಭ್ಯ. ವಿಳಾಸ: ಶಿವಾಜಿನಗರ ಬಸ್ ನಿಲ್ದಾಣದಿಂದ ರಸೆಲ್ ಮಾರ್ಕೆಟ್ ರಸ್ತೆಗೆ ತಿರುಗಿ ಮುಂದೆ ಬಂದ್ರೆ ಸರ್ಕಲ್ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಡಿ.ಕೆ.ಸ್ಟ್ರೀಟ್. ಇದೆ. ಅದೇ ರಸ್ತೆಯಲ್ಲಿ ಎರಡು ನಿಮಿಷ ಮುಂದೆ ಸಾಗಿದ್ರೆ ಸಾಂಬಯ್ಯ ಶೆಟ್ಟಿ ಟಿಫನ್ ರೂಂ ಸಿಗುತ್ತದೆ. ಹೋಟೆಲ್ ಸಮಯ:
ಬೆಳಗ್ಗೆ 7 ರಿಂದ 11 ಗಂಟೆವರೆಗೆ ಮಾತ್ರ. ಸೋಮವಾರ ವಾರದ ರಜೆ. -ಭೋಗೇಶ್ ಆರ್. ಮೇಲುಕುಂಟೆ