ಚಿಕ್ಕಬಳ್ಳಾಪುರ: ಇಲ್ಲಿನ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. “ನನಗೂ ವಯಸ್ಸಾಗಿದೆ, ಇನ್ನು ಸಕ್ರಿಯ ರಾಜಕಾರಣದಲ್ಲಿರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ವಿರುದ್ಧ ಹರಿಹಾಯ್ದರು.
ʻಈ ಹಿಂದೆ ಇದ್ದ ಎರಡೂ ಜಿಲ್ಲೆ ಉಸ್ತುವಾರಿ ಸಚಿವರು ನನ್ನ ಕಡೆಗಣಿಸಿದ್ದರು. ಕೆ. ಸುಧಾಕರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿಯಾಗಿ ಬಂದರು. ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ ಉಸ್ತುವಾರಿಯಾಗಿ ಬಂದರು. ಇಬ್ಬರು ಉಸ್ತುವಾರಿ ಸಚಿವರು ನನ್ನನ್ನು ಯಾವುದಕ್ಕೂ ಬಳಸಿಕೊಳ್ಳಲಿಲ್ಲ. ಯಾವುದೇ ಪತ್ರಿಕೆಯಲ್ಲಿ ನನ್ನ ಹೆಸರು ಇರುತ್ತಿರಲಿಲ್ಲ. ಸರ್ಕಾರದಿಂದ ಪ್ರೋಟೋಕಾಲ್ ಪ್ರಕಾರ ನನಗೆ ಆಹ್ವಾನ ಬರುತ್ತಿತ್ತು. ಅದು ಬಿಟ್ಟು ಪಕ್ಷದಿಂದ ಯಾರೂ ನನ್ನನ್ನು ಬಳಸಿಕೊಂಡಿಲ್ಲ. ಏನಪ್ಪಾ ಎಂದು ವಿಚಾರಿಸಿಲ್ಲ. ನಾನು ಸದನಕ್ಕೆ ಹೋಗಿ ಬರುತ್ತಿದ್ದೆ ಅಷ್ಟೇ. ಎಂದು ಬೇಸರ ತೋಡಿಕೊಂಡರು.
ಇದನ್ನೂ ಓದಿ:Congress ತಮ್ಮ ಶಾಸಕರನ್ನು ಹೆದರಿಸಲು ಆಪರೇಷನ್ ಹಸ್ತ ಮಾಡುತ್ತಿದೆ: ಬಾಲಚಂದ್ರ ಜಾರಕಿಹೊಳಿ
ಸಕ್ರಿಯ ರಾಜಕೀಯದಲ್ಲಿ ಇರಲು ಸಾಧ್ಯವಿಲ್ಲ, ವಯಸ್ಸಾಯ್ತು. ಆದರೆ ಕಾರ್ಯಕರ್ತರ ಜೊತೆ ಸಕ್ರಿಯವಾಗಿರತ್ತೇನೆ. 1978 ರಿಂದ ಶಾಸಕನಾಗಿ ಮತ್ತು ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಕೋಲಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಮ್ಮ ಅಭಿಮಾನಿಗಳಿದ್ದಾರೆ. ನನ್ನನ್ನು ರಾಜಕೀಯವಾಗಿ ಬೆಳೆಸಿದ ಕಾರ್ಯಕರ್ತರ ಹಿತ ರಕ್ಷಣೆ ಮಾಡಲು ನಾನು ಬದ್ಧನಾಗಿದ್ದೇನೆ. ದೇಹದಲ್ಲಿ ಕೊನೆ ಉಸಿರು ಇರುವ ತನಕ ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಎಂದು ಸ್ಪಷ್ಟಪಡಿಸಿದರು