Advertisement

ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ತುಳಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ

08:53 PM Apr 02, 2023 | Team Udayavani |

ಗಂಗಾವತಿ: ಆರ್ ಎಸ್ ಎಸ್ ಮತ್ತು ಬಿಜೆಪಿಯವರನ್ನು ಹಿಟ್ಲರ್, ಮುಸಲೋನಿಗೆ ಹೋಲಿಸುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮೊದಲಿಗೆ ತಮ್ಮ ಮುಸುಡಿಯನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ತುಳಿದ ಕೀರ್ತಿ ಕಾಂಗ್ರೆಸ್ ಪಕ್ಷದವರಿಗೆ ಸಲ್ಲುತ್ತದೆ. ಈ ವಿಷಯವನ್ನು ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿ ಕಾಂಗ್ರೆಸ್ ಬಣ್ಣವನ್ನು ಬಯಲು ಮಾಡುವಂತೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್. ಸಂತೋಷ್ ಹೇಳಿದರು.

Advertisement

ಅವರು ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಹತ್ತಿರ ಇರುವ ರಾಜ್ ಕೌಂಟಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಬಳ್ಳಾರಿ ವಿಭಾಗದ ಬಿಜೆಪಿ ಡಿಜಿಟಲ್ ಸೋಶಿಯಲ್ ಮೀಡಿಯಾ ಕಾರ್ಯಕರ್ತರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಬಿಜೆಪಿ ಸುದ್ದಿಗೆ ಜಾಗವಿರದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮ ಮತ್ತು ಸರ್ಕಾರದ ಯೋಜನೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ಬಿಜೆಪಿ ಪಕ್ಷಕ್ಕೆ ಶಕ್ತಿಯನ್ನು ನೀಡಿದ್ದಾರೆ. 70 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ದೇಶವನ್ನು ಆಳಿದರು ಜನಸಾಮಾನ್ಯರಿಗೆ ಉಳಿತಾಗುವಂತಹ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ ಒಂದೇ ಕುಟುಂಬದ ಕಲ್ಯಾಣವಾಗಿದೆ ಜನಸಾಮಾನ್ಯರ ಕಲ್ಯಾಣವಾಗಿಲ್ಲ ಎಂಬ ವಿಷಯವನ್ನು ನಿರಂತರವಾಗಿ ತಿಳಿಸಬೇಕು. ಬಿಜೆಪಿಗೆ 104 ಸ್ಥಾನ ನೀಡುವ ಮೂಲಕ ಸರ್ಕಾರ ರಚನೆ ಮಾಡಲಾಗಿದೆ ಅನೇಕ ಜನಪದವಾದ ಯೋಜನೆಗಳನ್ನು ಅನುಷ್ಠಾನ ಮಾಡಿ ಜನಸಾಮಾನ್ಯರಿಗೆ ಮನೆ ಬಾಗಿಲಿಗೆ ಯೋಜನೆಗಳನ್ನ ತಲುಪಿಸಲಾಗಿದೆ 2023 ಚುನಾವಣೆಯಲ್ಲಿ ಚುನಾವಣೆಯಲ್ಲಿ 135 ಸ್ಥಾನ ಬಿಜೆಪಿಗೆ ನೀಡುವ ಮೂಲಕ ಇಡೀ ಕನ್ನಡ ನಾಡನ್ನು ಅಭಿವೃದ್ಧಿಯ ಮತದತ್ತ ತೆಗೆದುಕೊಂಡು ಹೋಗಲು ಡಿಜಿಟಲ್ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಕಾರ್ಯ ಮಾಡಬೇಕು. ಗೊಲ್ಲರಹಟ್ಟಿಯ 1.85 ಕುಟುಂಬಗಳು ಮತ್ತು ಲಮಾಣ ತಾಂಡದ 1,52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ನೀಡಿ ಕಂದಾಯ ಗ್ರಾಮಗಳನ್ನಾಗಿ ಸರಕಾರ ಘೋಷಣೆ ಮಾಡಿದೆ. ಅಕ್ರಮ ಸಕ್ರಮ ಯೋಜನೆ ಅಡಿ ಸರ್ಕಾರಿ ಬಗರಹುಕುಂ ಭೂಮಿಯನ್ನು ಮಂಜೂರಿ ಮಾಡಿ ಹಕ್ಕುಪತ್ರಗಳನ್ನು ನೀಡಲಾಗಿದೆ. ಕಾಂಗ್ರೆಸ್ ಪಕ್ಷ ರಾಜಸ್ಥಾನ , ಛತ್ತಿಸ್ಗಢ ರಾಜ್ಯಗಳಲ್ಲಿ ಘೋಷಣೆ ಮಾಡಿದ್ದ ಸಾಲ ಮನ್ನಾ ಯೋಜನೆ ,ನಿರುದ್ಯೋಗ ಭತ್ಯೆ ಯೋಜನೆಯನ್ನು ಅನುಷ್ಠಾನಕ್ಕೆ ಮಾಡಿಲ್ಲ. ಆದರೂ ಕರ್ನಾಟಕದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆ ಮೂಲಕ ಪುನಃ ಕನ್ನಡ ನಾಡಿನ ಜಾರಿಗೆ ಮಕ್ಮಲ್ ಟೋಪಿ ಹಾಕುವ ಕಾರ್ಯ ಮಾಡುತ್ತಿರುವುದು ಹಾಸ್ಯಾಸ್ಪವಾಗಿದೆ. ವಿರೋಧವಿದ್ದರೂ ಪದೇ ಪದೇ ಟಿಪ್ಪುವನ್ನ ಧ್ಯಾನ ಮಾಡುವ ಕಾಂಗ್ರೆಸ್ ಮುಖಂಡರು ದೇವನಹಳ್ಳಿಯಲ್ಲಿ ಜನಿಸಿರುವ ನಾಡಪ್ರಭು ಕೆಂಪೇಗೌಡರನ್ನು ಮರೆತಿದ್ದರು. ಬಿಜೆಪಿ ಸರ್ಕಾರ ದೇವನಹಳ್ಳಿಯಲ್ಲಿಯೇ ಎತ್ತರದ ಕೆಂಪೇಗೌಡರ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಕೆಂಪೇಗೌಡರ ಸಾಧನೆಯನ್ನು ಜಗತ್ತಿಗೆ ತಿಳಿಸುವ ಕಾರ್ಯ ಮಾಡಿದೆ. ಕಿಷ್ಕಿಂಧಾ ಅಂಜನಾದ್ರಿ ಅಭಿವೃದ್ಧಿ ಗೆ ಕೈಗೊಂಡ ಯೋಜನೆಗಳ ಕುರಿತು ಜನರಿಗೆ ಮಾಹಿತಿ ತಿಳಿಸಬೇಕು.

ರಾಮಮಂದಿರ ನಿರ್ಮಾಣ ಉಜ್ಜಯಿನಿ ಜೀವನೋದ್ಧಾರ,ಕಾಶಿಯ ಪುನರ್ ನಿರ್ಮಾಣ ಸೇರಿದಂತೆ ದೇಶದ ಸಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆದ್ಯತೆಯ ಮೇರೆಗೆ ಹಣವನ್ನು ಮೀಸಲಿರಿಸಿ ಯೋಜನೆ ಅನುಷ್ಠಾನ ಮಾಡಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ತಿಳಿಸಬೇಕು.

ಡಬಲ್ ಇಂಜಿನ್ ಸರಕಾರಗಳ ಸಾಧನೆಗಳನ್ನು ಸೋಶಿಯಲ್ ಮೀಡಿಯಾ ಗಳ ಹೆಚ್ಚಾಗಿ ಪ್ತಸಾರ ಮಾಡಬೇಕು. ಮೋದಿ ಸೇರಿ ಬಿಜೆಪಿ ಮುಖಂಡರ ಸೋಶಿಯಲ್ ಮೀಡಿಯಾದಲ್ಲಿ ಬರುವ ಪ್ರಮಿಖ ಪೊಟೊ ವಿಷಯಗಳನ್ನು ತಪ್ಪದೇ ಷೇರ್ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೈಗೊಂಡರಿರುವ ಎಸ್ಸಿ ಒಳಮೀಸಲಾತಿ ಅನುಷ್ಠಾನದ ಅತ್ಯುತ್ತಮವಾಗಿದ್ದು ಸಾಮಾಜಿಕವಾಗಿ ಅನ್ಯಾಯಕ್ಕೆ ಒಳಗಾದ ವರ್ಗದವರಿಗೆ ಇದರಿಂದ ಅನುಕೂಲವಾಗುತ್ತದೆ ಎಂದರು.

Advertisement

ಕಾರ್ಯಕ್ರದಲ್ಲಿ ಸಂಸದರಾದ ಕರಡಿ ಸಂಗಣ್ಣ, ವೈ.ದೇವೆಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಆಚಾರ್, ಶಾಸಕರಾದ ಪರಣ್ಣ ಮುನವಳ್ಳಿ, ದಡೇಸೂಗೂರು ಬಸವರಾಜ, ಹೇಮಲತಾ ನಾಯಕ, ಮಾಜಿ ಸಚಿವ ನಾಗಪ್ಪ ಸಾಲೋಣ , ಮಾಜಿ ಶಾಸಕ ಕೆ.ಶರಣಪ್ಪ, ಕೆ.ಪಾಪರೆಡ್ಡಿ, ಮುಖಂಡರಾದ ಚಂದ್ಡಿರಶೇಖರ ಹಲಗೇರಿ, ನವೀನ ಗುಳಗಣ್ಣ ನವರ್, ಸಿಂಗನಾಳ ವಿರೂಪಾಕ್ಷಪ್ಪ, ಸಂತೋಷ ಕೆಲೋಜಿ,ಎಚ್.ಗಿರೇಗೌಡ, ತಿಪ್ಪೇರುದ್ರಸ್ವಾಮಿ, ಕೊಲ್ಲಾ ಶೇಷಗಿರಿರಾವ್, ಚಂದ್ರಶೇಖರ ಮುಸಾಲಿ, ಮಾಧ್ಯಮ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾದ ಸಿದ್ದರಾಜು,ವಿಕಾಸ ಪುತ್ತೂರು, ರಾಘವೇಂದ್ರ ನಾಗೂರು, ರೇವಣೆಪ್ಪ ಗೂಡ್ಲಾನೂರು,ವೆಂಕಟೇಶ, ಅಜಯ್, ರಾಮರಾವ್ ಶ್ರೀರಾಮನಗರ ಇದ್ದರು.

ಸಂಗಟಿ ಬಿಜೆಪಿ ಸೇರ್ಪಡೆಗೆ ಮಾತುಕತೆ: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್.ಸಂತೋಷ ಅವರನ್ನು ರಾಜ್ ಕೌಂಟಿ ರೆಸಾರ್ಟ್ ನಲ್ಲಿ ಭೇಟಿಯಾಗಿ ಬಿಜೆಪಿ ಸೇರ್ಪಡೆ ಕುರಿತು ಮಾತುಕತೆ ನಡೆಸಿದರು. ಶೀಘ್ರವೇ ಬಿಜೆಪಿ ಸೇರ್ಪಡೆಯಾಗುವುದಾಗಿ ಕರಿಯಣ್ಣ ಸಂಗಟಿ ಆಪ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಣಸೂರು: ಬಸ್‌ ಪ್ರಯಾಣದ ವೇಳೆ ಕೇರಳದ ಪ್ರಯಾಣಿಕ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next