Advertisement
ಶನಿವಾರ ನಗರದ ಕಂದಗಲ್ ಹನುಮಂತ್ರಾಯ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ10ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೋವುಂಡ ಜನರು, ಶೋಷಿತ ವ್ಯವಸ್ಥೆಯಲ್ಲಿ ಅನುಭವಿಸಿದ ನೋವುಗಳನ್ನು ಸಮುದಾಯದ ಜನರ ಆಶಯಕ್ಕೆ ಅಕ್ಷರ ರೂಪ ನೀಡಿ, ಸಾಹಿತ್ಯ ರೂಪಿಸಿ, ವಾಸ್ತವಿಕ ನೆಲೆಯಲ್ಲಿ ಮೂಡಿ ಬರುತ್ತದೆ ಎಂದರು.
Related Articles
Advertisement
ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ಆರ್ಥಿಕ ನೆರವು ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿದರು.
ಪ್ರಸ್ತಾವಿಕ ಮಾತನಾಡಿದ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅಂತರಂಗದ ಬೆಳವಣಿಯಾಗದ ಹೊರತು ಭಾರತದ ಭೌತಿಕ ಅಭಿವೃದ್ಧಿ, ಪ್ರಗತಿ ಅರ್ಥ ಕಳೆದುಕೊಳ್ಳುತ್ತವೆ. ಹೀಗಾಗಿ ಭಾರತ ಪ್ರಬುದ್ಧತೆ ಸಾಧಿಸಲು ಬುದ್ಧ ಭಾರತವಾಗಬೇಕು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ಕನಸಿನ ಭಾರತ ನಿರ್ಮಾಣ ಸಾಧ್ಯ ಎಂದು ನಾಡಿನ ಚಿಂತಕ ಡಾ.ಮಲ್ಲೇಪುರ ಜಿ. ವೆಂಕಟೇಶ ತಮ್ಮ ಆಶಯ ಭಾಷಣದಲ್ಲಿ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಅವರ ಆಶಯದ ನಿಮ್ನ, ಆರ್ಥಿಕ, ಸಾಮಾಜಿಕವಾಗಿ ಕೆಳಗೆ ಬಿದ್ದ ಎಲ್ಲ ವರ್ಗದ ಜನರನ್ನು ಮೇಲೆತ್ತುವ ಕೆಲಸವಾಗಬೇಕು ಎಂದು ಆಶಿಸಿದರು.
ಧಮ್ಮ ಬಂತೇಜಿಗಳಾದ ಸಂಘಪಾಲ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್.ಟಿ.ಪೋತೆ, ಹಿಂದಿನ ಸಮ್ಮೇಳನದ ಅಧ್ಯಕ್ಷ ಅಲ್ಲಾಗಿರಿರಾಜ, ಶಾಸಕರಾದ ವಿಠ್ಠಲ ಕಟಕಧೋಂಡ, ಜಗದೀಶ ಗುಡಗುಂಟಿ, ಮಾಜಿ ಶಾಸಕರಾದ ರಾಜು ಆಲಗೂರ, ಡಿ.ಎಸ್. ವೀರಯ್ಯ, ಡಿ.ಎಸ್.ಎಸ್. ರಾಜ್ಯ ಸಂಚಾಲಕ ಡಿ.ಜಿ.ಸಾಗರ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಡಾ.ಸುಜಾತಾ ಚಲವಾದಿ, ಹೇಮಲತಾ ವಸ್ತ್ರದ ಇತರರು ವೇದಿಕೆ ಮೇಲಿದ್ದರು.