Advertisement
ಬಂಟ್ವಾಳ ನಗರದಲ್ಲಿ ಸಾಗುವ ಮುಖ್ಯ ರಸ್ತೆಯ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಿ.ಸಿ. ರೋಡ್-ಕೈಕುಂಜೆ ರಸ್ತೆಯ ಬಿ.ಸಿ. ರೋಡ್ ಜಂಕ್ಷನ್‌ನಲ್ಲೇ ಸಾಕಷ್ಟು ಹೊಂಡಗಳು ಸೃಷ್ಟಿ ಯಾಗಿದ್ದು, ವಾಹನಗಳು ಎದುಬಿದ್ದು ಸಾಗುತ್ತಿವೆ. ಇದರ ಜತೆಗೆ ಇತರ ಒಳರಸ್ತೆಗಳ ಹೊಂಡಗಳಿಗೂ ಮುಕ್ತಿ ನೀಡಬೇಕಿದೆ.
Related Articles
ಕಳೆದ ಮಳೆಗಾಲದಲ್ಲೇ ಈ ಹೊಂಡಗಳು ಕಂಡುಬಂದಿದ್ದು, ಅದರಲ್ಲಿ ನೀರು ನಿಂತ ಪರಿಣಾಮ ವಾಹನಗಳು ಸಾಗುವ ವೇಳೆ ನೀರು ಎರಚಿ ಪಾದಾಚಾರಿಗಳು ಒದ್ದೆಯಾದ ಘಟನೆಯೂ ಸಂಭವಿಸಿತ್ತು. ನೀರು ನಿಂತು ಹೊಂಡಗಳಿರುವುದು ತಿಳಿಯದೆ ವಾಹನ ಚಾಲಕರು, ಸವಾರ ರಿಗೂ ತೊಂದರೆಯುಂಟಾಗಿತ್ತು.
Advertisement
ಸಾಮಾನ್ಯವಾಗಿ ಮಳೆ ಕಾರಣದಿಂದ ಹಾನಿಯಾದ ರಸ್ತೆಗಳಿಗೆ ತೇಪೆ ಕಾರ್ಯ ನಡೆಯುತ್ತದೆಯಾದರೂ ಇಲ್ಲಿ ತೇಪೆ ಕಾರ್ಯವೂ ನಡೆದಿಲ್ಲ. ಹೆದ್ದಾರಿ ಸಮಸ್ಯೆ ಗಳಿಗೆ ಮುಕ್ತಿ ಸಿಕ್ಕರೂ ನಗರ ಒಳಭಾಗದ ರಸ್ತೆಗಳಲ್ಲಿ ತೊಂದರೆ ಸಾಕಷ್ಟಿದೆ. ಈ ಕುರಿತು ಪುರಸಭೆ ಗಮನಹರಿಸಬೇಕಿದೆ ಎಂದು ಜನತೆ ಅಭಿಪ್ರಾಯಿಸುತ್ತಿದ್ದಾರೆ.
ರಸ್ತೆಯಲ್ಲೇ ಮ್ಯಾನ್ಹೋಲ್ಬಿ.ಸಿ. ರೋಡ್‌ನಿಂದ ಬಂಟ್ವಾಳ ಪೇಟೆಗೆ ಸಾಗುವ ರಸ್ತೆಯಲ್ಲಿ ಮೇಲ್ಭಾಗಕ್ಕೆ ಕಾಣುವ ರೀತಿಯಲ್ಲಿ ರಸ್ತೆಯಲ್ಲೇ ಮ್ಯಾನ್‌ಹೋಲ್‌ಗಳಿದ್ದು, ಇದೂ ವಾಹನಗಳ ಸಂಚಾರಕ್ಕೆ ತೊಂದರೆ ನೀಡುತ್ತಿದೆ. ರಸ್ತೆಯ ಹೊಂಡಗಳು, ಮ್ಯಾನ್‌ಹೋಲ್‌ಗಳು ದೊಡ್ಡ ವಾಹನಗಳ ಸಂಚಾರಕ್ಕೆೆR ತೊಂದರೆ ನೀಡದೇ ಇದ್ದರೂ ಸಣ್ಣ ವಾಹನಗಳಿಗೆ ಸಾಕಷ್ಟು ತೊಂದರೆ ನೀಡುತ್ತಿವೆ. ಪೈಪ್ ಕಾಮಗಾರಿ ವೇಳೆ ರಸ್ತೆಯನ್ನು ಅಗೆದು ಹಾಗೇ ಬಿಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅನುದಾನ ಬಂದರೆ ದುರಸ್ತಿ
ಅನುದಾನ ಬಂದ ತತ್‌ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ ಯಾವುದೇ ಅನುದಾನಗಳು ಬಂದಿಲ್ಲ. ಶಾಸಕರ ನಗರ ಸುಂದರೀಕರಣ ಯೋಜನೆಯಲ್ಲಿ ಬಿ.ಸಿ. ರೋಡ್‌ನ ಕೈಕುಂಜೆ ರಸ್ತೆಯ ಪ್ರಾರಂಭದ ಭಾಗಕ್ಕೆ 2 ಕೋ. ರೂ.ಗಳ ಕ್ರಿಯಾಯೋಜನೆ ಆಗಿದೆ ಎನ್ನಲಾಗುತ್ತಿದೆ. ಅನುದಾನ ಬಂದರೆ ರಸ್ತೆಗಳ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಮಾಡಲಾಗುವುದು.
- ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ