Advertisement

ಬಹು ನಿರೀಕ್ಷಿತ ಬಿ.ಸಿ. ರೋಡ್‌-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ

12:16 PM May 22, 2019 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಗೊಳ್ಳು ತ್ತಿರುವ
ಬಿ.ಸಿ. ರೋಡ್‌ – ಪುಂಜಾಲ ಕಟ್ಟೆ ರಸ್ತೆ ಕಾಮಗಾರಿಯನ್ನು ಮಳೆಗಾಲದಲ್ಲಿ ಸಮಸ್ಯೆಯಾಗದಂತೆ ಒಂದು ಹಂತಕ್ಕೆ ತರುವ ಪ್ರಯತ್ನವನ್ನು ರಾ. ಹೆ. ಇಲಾಖೆ ಸಮರೋಪಾದಿಯಲ್ಲಿ ನಡೆಸುತ್ತಿದೆ.

Advertisement

ಬಿ.ಸಿ. ರೋಡ್‌-ಕಡೂರು ರಸ್ತೆಯು ರಾ.ಹೆ.ಯಾಗಿ ಮೇಲ್ದರ್ಜೆಗೇರಿದ ಬಳಿಕ ಬಿ.ಸಿ.ರೋಡ್‌-ಪುಂಜಾಲ ಕಟ್ಟೆ ರಸ್ತೆ ಅಭಿವೃದ್ಧಿ ಕಾರ್ಯವನ್ನು ರಾ.ಹೆ. ಇಲಾಖೆ ಕೈಗೆತ್ತಿ ಕೊಂಡಿತ್ತು. ಇಲ್ಲಿ ಮಣ್ಣು ಅಗೆದಿರುವ ಪ್ರದೇಶಗಳನ್ನು ಹಾಗೇ ಬಿಟ್ಟಲ್ಲಿ ಮಳೆ ಗಾಲದಲ್ಲಿ ಸಂಚಾರ ಕಡಿತ ಅಪಾಯ ಇದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಒಟ್ಟು 159 ಕೋ.ರೂ. ವೆಚ್ಚದಲ್ಲಿ 19.85 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಮುಗಿಸುವುದಕ್ಕೆ 18 ತಿಂಗಳ ಅವಧಿ ನೀಡಲಾಗಿದ್ದು, ಮುಂದಿನ ವರ್ಷ ಪೂರ್ಣಗೊಳ್ಳುತ್ತದೆ.

ಪ್ರಸ್ತುತ ಬಿ.ಸಿ. ರೋಡ್‌ ಮತ್ತು ಪುಂಜಾಲಕಟ್ಟೆ ಎರಡೂ ಕಡೆಗಳಿಂದ ಕಾಮಗಾರಿ ನಡೆಯುತ್ತಿದೆ. ಅಗೆದಿ ರುವ ಬಹುತೇಕ ಪ್ರದೇಶದಲ್ಲಿ ಈಗಾ ಗಲೇ ಡಾಮರು ಹಾಕಲಾಗಿದೆ. ಬಂಟ್ವಾಳ ಅಜೆಕಲ-ಬೈಪಾಸ್‌ ಬಳಿ ಸೇತುವೆ ನಿರ್ಮಾಣ ಬಹು ತೇಕ ಪೂರ್ಣಗೊಂಡಿದೆ. ಪುಂಜಾಲಕಟ್ಟೆ ಭಾಗದಲ್ಲೂ ಅಗೆದಿರುವ ಹೆದ್ದಾರಿಗೆ ಒಂದು ಹಂತದ ಡಾಮರು ಹಾಕಿ ಮಳೆಗಾಲದಲ್ಲಿ ತೊಂದರೆಯಾಗದಂತೆ ಮಾಡುವತ್ತ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.
ಒಟ್ಟು 159 ಕೋ.ರೂ.ಗಳ ಅನುದಾನದಲ್ಲಿ ರಸ್ತೆ ಕಾಮಗಾರಿಗೆ 100 ಕೋ.ರೂ. ವ್ಯಯವಾಗಲಿದೆ. ಇನ್ನುಳಿದ ಅನುದಾನವು ಭೂಸ್ವಾಧೀನ, ಮರಗಳ ತೆರವು, ವಿದ್ಯುತ್‌ ಕಂಬಗಳ ಸ್ಥಳಾಂತರ ಇತ್ಯಾದಿಗೆ. ಹೆದ್ದಾರಿಯ ಮಣಿಹಳ್ಳದಲ್ಲಿ ಸೇತುವೆ ಕೆಲಸ ನಡೆಯುತ್ತಿದ್ದು, ಅಲ್ಲಿ ಮನೆಗಳ ತೆರವು, ಭೂಸ್ವಾಧೀನ ಪ್ರಕ್ರಿಯೆಯೂ ನಡೆಯಬೇಕಿದೆ.

5 ಕಿ.ಮೀ. ಹೆದ್ದಾರಿ ಪೂರ್ಣ ಪುಂಜಾಲಕಟ್ಟೆಯಿಂದ ಮಧ್ವದ ವರೆಗೆ ಸುಮಾರು 5 ಕಿ.ಮೀ. ಉದ್ದಕ್ಕೆ ರಸ್ತೆ ಅಗೆಯಲಾಗಿದ್ದು, ಮಣ್ಣು-ಜಲ್ಲಿ ತುಂಬಿಸಿ ಒಂದು ಹಂತದ ಡಾಮರು ಹಾಸುವಿಕೆಯನ್ನು ಇಲಾಖೆ ಮಳೆ ಗಾಲಕ್ಕೆ ಮುನ್ನ ಮುಗಿಸಲಿದೆ. ಇನ್ನುಳಿದ ಕೆಲಸ ಮಳೆಗಾಲ ಕಳೆದ ಮೇಲೆ ನಡೆಯಲಿದೆ. ಬಿ.ಸಿ.ರೋಡಿನಿಂದ ಸುಮಾರು 4 ಕಿ.ಮೀ. ವರೆಗೆ ಚತುಷ್ಪಥ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಲಿದೆ. ಮಳೆಗಾಲಕ್ಕೆ ಮುನ್ನ ಅಗಲಗೊಳಿಸಿ, ಮಳೆಗಾಲ ಮುಗಿದ ತತ್‌ಕ್ಷಣ ಕಾಂಕ್ರೀಟ್‌ ಹಾಕುವ ಯೋಜನೆ ಇಲಾಖೆಯ ಮುಂದಿದೆ.

4 ಸೇತುವೆ, 60 ಮೋರಿಗಳು
ಒಟ್ಟು ನಾಲ್ಕು ಸೇತುವೆಗಳು ನಿರ್ಮಾಣವಾಗಲಿದ್ದು, ಇದರಲ್ಲಿ ಬಂಟ್ವಾಳ ಬೈಪಾಸ್‌ ಬಳಿಯದು ಬಹುತೇಕ ಪೂರ್ಣಗೊಂಡಿದೆ. ಉಳಿದ ಮೂರನ್ನು ಮಳೆಗಾಲದಲ್ಲೇ ನೀರಿನ ಮಟ್ಟ ಗಮನಿಸಿ ಮುಂದುವರಿಸುವ ಆಲೋಚನೆ ಇದೆ ಎಂದು ಅಧಿಕಾರಿ ಗಳು ಹೇಳಿದ್ದಾರೆ. 65 ಮೋರಿಗಳ ಪೈಕಿ ಸುಮಾರು 30ರ ಕಾಮಗಾರಿ ಮಳೆಗಾಲ ಆರಂಭಕ್ಕೆ ಮುನ್ನ ನಡೆಯಲಿದೆ. ಉಳಿದವುಗಳ ಕೆಲಸ ಮಳೆಗಾಲದಲ್ಲೇ ಆಗಲಿದೆ. ಮಳೆಗಾಲ ಮುಗಿದ ತತ್‌ಕ್ಷಣ ಅವುಗಳಿಗೆ ಮಣ್ಣು-ಜಲ್ಲಿ ತುಂಬಿಸಿ ಡಾಮರು ಹಾಕಲಾಗುತ್ತದೆ.

Advertisement

5 ಕಿ.ಮೀ. ಕಾಮಗಾರಿ ಪೂರ್ಣ
ಹೆದ್ದಾರಿ ಕಾಮಗಾರಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದು, ಪ್ರಸ್ತುತ ಆರಂಭಗೊಂಡಿರುವ ಪ್ರದೇಶದಲ್ಲಿ ಮಳೆಗಾಲಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಿದ್ದೇವೆ. ಪುಂಜಾಲಕಟ್ಟೆಯಿಂದ ಸುಮಾರು 5 ಕಿ.ಮೀ.ಗಳ ಕೆಲಸ ಈಗ ಮುಗಿಸಿ, ಮಳೆಗಾಲ ಕಳೆದ ಮೇಲೆ ಇನ್ನುಳಿದ ರಸ್ತೆ ಅಗೆಯಲಿದ್ದೇವೆ. ಸೇತುವೆ, ಮೋರಿಗಳ ಕಾಮಗಾರಿ ಮಳೆಗಾಲದಲ್ಲಿಯೂ ನಡೆಯಲಿದೆ.
ರಮೇಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ರಾ.ಹೆ. ಉಪವಿಭಾಗ, ಮಂಗಳೂರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next