ಚಿತ್ರದುರ್ಗ : ಕೋವಿಡ್ ಸೋಂಕಿನ ಎರಡನೇ ಅಲೆಯ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಡವಿದ್ದಾರೆ, ರಾಜ್ಯ ಸರ್ಕಾರದ ನಾಯಕತ್ವವನ್ನು ಬಿ ಎಸ್ ವೈ ಹೊರತಾಗಿ ಬೇರೆಯವರಿಗೆ ನೀಡಬೇಕು ಎಂಬ ವಾದ ವಿವಾದಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದರ ನಡುವೆ ಈ ಕುರಿತಂತೆ ಪರ, ವಿರೋಧ ಹೇಳಿಕೆ ನೀಡದಂತೆ ರಾಜ್ಯಧ್ಯಕ್ಷರಿಂದ ಸ್ಪಷ್ಟ ಸೂಚನೆ ನೀಡಿದ್ದಾರೆಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಂತೆ ಹೈಡ್ರಾಮ ನಡೆಯುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಡೆಲ್ಟಾ ರೂಪಾಂತರಿ ಸೋಂಕಿನಿಂದ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳು ಪತ್ತೆ : ಅಧ್ಯಯನ
ಮಾಧ್ಯಮಗಾರರೊಂದಿಗೆ ಮಾತನಾಡಿದ ಪಾಟೀಲ್, ಸಿಎಂ ಬದಲಾವಣೆ ಬಗ್ಗೆ ಸಹಿ ಸಂಗ್ರಹದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾವು ಬಿಜೆಪಿ ಹಾಗೂ ಸಿಎಂ ಬಿಎಸ್ ವೈ ಪರ ಇದ್ದೇವೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತೇವೆ ಎಂದಿದ್ದಾರೆ.
ಇನ್ನು, ಕಾಂಗ್ರೆಸ್ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಅವರು, ಕಾಂಗ್ರೆಸ್ ನವರು ಟೀಕೆ ಮಾಡುವುದೇ ಜನ್ಮಸಿದ್ಧ ಹಕ್ಕು ಎಂದು ಕೊಂಡಿದ್ದಾರೆ. ಬಿಜೆಪಿ ಸರ್ಕಾರ ಕೋಇಡ್ ಸೋಂಕನ್ನು ಶಿಸ್ತಿನಿಂದ ನಿರ್ವಹಣೆ ಮಾಡುತ್ತಿದೆ. ಕಾಂಗ್ರೆಸ್ ಕೋವಿಡ್ ನನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ, ಅದು ನಡೆಯದು ಎಂದಿದ್ದಾರೆ.
ಕೃಷಿ ಚಟುವಟಿಕಗಳ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ 153 ಲಕ್ಷ ಮೆಟ್ರಿಕ್ ಟನ್ ಆಹಾರೋತ್ಪನ್ನವನ್ನು ಬೆಳೆದು ದಾಖಲೆ ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಡಾ.ಭರತ್ ಶೆಟ್ಟಿ ಪ್ರಯತ್ನ ಫಲಪ್ರದ : AOMSI ನಿಂದ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ