Advertisement

ಅಕ್ರಮ ಸೈಟ್‌ ಇನ್ನು ಸಕ್ರಮ: ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ‘ಬಿ’ ಖಾತೆ

11:41 PM Feb 15, 2024 | Team Udayavani |

ಬೆಂಗಳೂರು: ಬಿಬಿಎಂಪಿ ಹೊರತು ಪಡಿಸಿ ಉಳಿದ ನಗರ ಮತ್ತು ಪಟ್ಟಣಗಳ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ‘ಬಿ’ ಖಾತೆ ನೀಡಲು ಸರಕಾರ ಮುಂದಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಈ ಪೈಕಿ 34.35 ಲಕ್ಷಕ್ಕೂ ಅಧಿಕ ಅನಧಿಕೃತ ಆಸ್ತಿಗಳು. ಅವುಗಳನ್ನು ಸಕ್ರಮಗೊಳಿಸುವ ಯೋಜನೆ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ಇದರಿಂದ ರಾಜ್ಯ ಸರಕಾರಕ್ಕೆ 2 ಸಾವಿರ ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗುವ ನಿರೀಕ್ಷೆಯಿದೆ.

Advertisement

ಸದ್ಯ ಈ ಆಸ್ತಿಗಳ ಮಾಲಕರು ಸರಕಾರಕ್ಕೆ ತೆರಿಗೆ ಕಟ್ಟದೆ ವಿದ್ಯುತ್‌, ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವೆಲ್ಲವೂ ಇನ್ನು ಮುಂದೆ ತೆರಿಗೆ ವ್ಯಾಪ್ತಿಗೆ ಬರಲಿದೆ. ಸಕ್ಷಮ ಪ್ರಾಧಿಕಾರಗಳಿಂದ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿದ ಬಡಾವಣೆ, ಕಟ್ಟಡಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.

ಅನಧಿಕೃತ ಬಡಾವಣೆ ನಿರ್ಮಿಸಿದರೆ ಜೈಲು ಶಿಕ್ಷೆ
ಅನಧಿಕೃತ ನಿವೇಶನ, ಬಡಾವಣೆ, ಕಟ್ಟಡಗಳಿಗೆ ಬಿ ಖಾತೆಯ ಮಾನ್ಯತೆ ಪಡೆಯಲು ಕೊನೆಯ ದಿನಾಂಕ ನಿಗದಿಪಡಿಸಲಾಗುತ್ತದೆ. ಅಷ್ಟರಲ್ಲಿ ದಂಡ ಅಥವಾ ತೆರಿಗೆ ಪಾವತಿಸಿ ಬಿ ಖಾತೆಯನ್ನು ಪಡೆಯಬೇಕು.ಬಳಿಕ ಇ-ಆಸ್ತಿ ಹೊರತುಪಡಿಸಿ ಯಾವುದೇ ಮಾದರಿ ಯಲ್ಲೂ ನೋಂದಣಿಗೆ ಅವಕಾಶ ಇರುವುದಿಲ್ಲ. ಅನಧಿ ಕೃತ ನಿರ್ಮಾಣದಾರರ ವಿರುದ್ಧ ಲಕ್ಷ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next