ಪಡುಬಿದ್ರಿ: ಶ್ರೀ ಖಡ್ಗೆಶ್ವರೀ ಬ್ರಹ್ಮಸ್ಥಾನದಲ್ಲಿ “ಢಕ್ಕೆಬಲಿ’, “ಮಂಡಲ ಸೇವೆ’ ಜ. 17ರಿಂದ ಆರಂಭಗೊಳ್ಳಲಿದೆ. ಜ. 17ರಂದು ಬ್ರಾಹ್ಮಣ ಸಮಾಜದ ವತಿಯಿಂದ ಮಂಡಲ ಹಾಕುವ ಸೇವೆಯೊಂದಿಗೆ ಢಕ್ಕೆಬಲಿ ಆರಂಭಗೊಳ್ಳಲಿದೆ. ನಿರ್ದಿಷ್ಟ ದಿನಗಳಲ್ಲಿ ಈ ಸೇವೆ ಮುಂದುವರಿಯುತ್ತಾ ಪೂರ್ವ ಸಂಪ್ರದಾಯದ ಸೇವೆಗಳೂ ಸೇರಿದಂತೆ ಒಟ್ಟು 39 ಸೇವೆಗಳು ನಡೆದು ಮಾ. 10ರಂದು ಕೊನೆಗೊಳ್ಳಲಿವೆ.
ಚಿದಂಬರ ರಹಸ್ಯದ ತಾಣ ಚಿದಂಬರ ರಹಸ್ಯಗಳನ್ನು ಒಳಗೊಂಡು ಇಲ್ಲಿನ ಪೂಜಾ ಪರಂಪರೆ, ಆರಾಧನಾ ವಿಧಾನ, ಕೇವಲ ಮಾಂತ್ರಿಕವೂ ಅಲ್ಲದೆ ಯಾಂತ್ರಿಕವಾಗಿ ಒಂದರ ಮೇಲೊಂದರಂತೆ ದೈವೀ ಸನ್ನಿವೇಶಗಳ ಸೃಷ್ಟಿಯಾಗಿ ರಾತ್ರಿಯೆಲ್ಲಿ ಮೈನವಿರೇಳುವ ಕ್ಷಣಗಳನ್ನೊದಗಿಸಿ ನೋಡುಗರ ಕಣ್ಣಲ್ಲಿ ಅಚ್ಚಳಿಯದ ರಮಣೀಯ ದೃಶ್ಯಾವಳಿಗಳ ಸರಮಾಲೆಗಳನ್ನೇ ಉಂಟುಮಾಡುತ್ತವೆ. ಒಂದು ಕಾಲದಲ್ಲಿ ದೊಂದಿ ದೀಪದ ಬೆಳಕಲ್ಲೇ ನಡೆದಿದ್ದ ಈ ಢಕ್ಕೆಬಲಿಗೆ ಈಗ ಗ್ಯಾಸ್‌ಲೈಟ್‌ಗಳ ಪ್ರಕಾಶತೆಯ ಹರಿಯಬಿಡಲಾಗುತ್ತದೆ. ಶ್ರೀ ಖಡೆYàಶ್ವರೀ ಬ್ರಹ್ಮಸ್ಥಾನವನ್ನು ಫಲ, ಪುಷ್ಪಗಳ, ಎಲೆ, ತಾವರೆಗಳ, ತೆಂಗಿನ ಗರಿಗಳಿಂದ ಅಲಂಕರಿಸಿ ಸುಂದರ ಬನವಾಗಿ ಮರು ಸೃಷ್ಟಿಸಲಾಗುತ್ತದೆ. ಆಳಕ್ಕಿಳಿದಂತೆಲ್ಲಾ ಇಲ್ಲಿನ ರಹಸ್ಯಗಳೂ ಒಂದೊಂದಾಗಿ ತೆರೆದುಕೊಂಡರೂ ಅವು ಮತ್ತಷ್ಟು ನಿಗೂಢವಾಗುತ್ತಿರುತ್ತದೆ.
ಢಕ್ಕೆಬಲಿ – ಪ್ರವಾಸೋದ್ಯಮಕ್ಕೂ ಉತ್ತೇಜನಮುಂಜಾವದ ಪಂಚಾಮೃತಾಭಿಷೇಕದೊಂದಿಗೆ ಆರಂಭಗೊಳ್ಳುವ ವಿಶೇಷ ಢಕ್ಕೆಬಲಿ ಸೇವೆ ಮುಂದೆ ಬ್ರಾಹ್ಮಣಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆಗಳ ಬಳಿಕ ಸಂಜೆ ಹೊತ್ತಿಗೆ ವಿಜೃಂಭಣೆಯ ಹೊರೆ ಕಾಣಕೆ ಮೆರವಣಿಗೆಯೊಂದಿಗೆ ವೇಗೋತ್ಕರ್ಷವನ್ನು ಪಡೆದುಕೊಳ್ಳುತ್ತದೆ. ವಿವಿಧ ಫಲಪುಷ್ಪ, ಅಡಕೆ, ಹಿಂಗಾರ, ತೆಂಗಿನಕಾಯಿ, ತೆಂಗಿನಗರಿ, ಸೀಯಾಳಗಳ ಬಲು ರಾಶಿ ರಾಶಿಯೇ ಬಯಲು ಆಲಯ “ಬ್ರಹ್ಮಸ್ಥಾನ’ದೊಳಕ್ಕೆ ಬಂದು ಸೇರಿಕೊಳ್ಳುತ್ತದೆ. ಮುಂದೆ ಇದನ್ನೆಲ್ಲಾ ಬ್ರಾಹ್ಮಣ ಯುವಕರು ಅಲಂಕರಿಸಿ ಕಾನನವನ್ನು ಸಿರಿಸಿಂಗಾರಗೊಳಿಸುತ್ತಾರೆ. ನೋಡುಗರ ಕಣ್ಣಿಗೇ ರಮ್ಯವಾಗಿ ಕಾಣಿಸಿಕೊಳ್ಳುವ ಈ ಪುಷ್ಪಾಲಂಕಾರಗಳಿಂದಲೇ ಪಡುಬಿದ್ರಿಯ ತರುಣರಿಗೆ ಇಂದಿಗೂ ಹೊರ ಜಿಲ್ಲೆ, ರಾಜ್ಯಗಳಲ್ಲಿ ವಿಶಿಷ್ಟ ಹೆಸರಿದೆ.
ಪಡುಬಿದ್ರಿಯ ಶ್ರೀ ಖಡೆYàಶ್ವರೀ ಬ್ರಹ್ಮಸ್ಥಾನವನ್ನು ಈ ಸುಂದರ ಪುಷ್ಪಾಲಂಕಾರಗಳಿಗಾಗಿಯೇ ಹೊರ ರಾಜ್ಯ, ಜಿಲ್ಲೆ ಸೇರಿದಂತೆ ದೇಶ, ವಿದೇಶಗಳ ಮಂದಿಯೂ ಬಂದು ವೀಕ್ಷಿಸಿ ಪುಳಕಿತರಾಗುತ್ತಾರೆ. ಪ್ರವಾಸೋದ್ಯಮಕ್ಕೂ ಈ ಢಕ್ಕೆಬಲಿ ಪರ್ವವು ಉತ್ತೇಜನವನ್ನೀಯುತ್ತದೆ.
ಈ ಅಲಂಕಾರಗಳೆಲ್ಲಾ ಮುಗಿದು ರಾತ್ರಿಯ ವೇಳೆ ತಂಬಿಲ ಸೇವೆ, ಢಕ್ಕೆಬಲಿಗಳು ಅಲ್ಲಿನ ಪುರೋಹಿತರು, ಕೊರಡುಗಳು, ವೈದ್ಯರು, ಗುರಿಕಾರರು, ಮಾನ್ಯರು ಹಾಗೂ ಸ್ಥಳವಂದಿಗರ ಕೂಡುವಿಕೆಯಿಂದ ನಡುರಾತ್ರಿಯ ಒಂದಿಷ್ಟು ವಿರಾಮದ ಹೊರತಾಗಿ ಮುಂಜಾವದವರೆಗೂ ಮುಂದುವರಿಯುತ್ತವೆ. ಬೆಳಗ್ಗೆ ಪ್ರಸಾದ ವಿತರಣೆಯೊಂದಿಗೆ ಈ ಸೇವೆಗಳು ಕೊನೆಗೊಳ್ಳುತ್ತವೆ. ಪ್ರಸಾದವಾಗಿ ಅಲಂಕರಿಸಿದ ಬಾಳೆಹಣ್ಣು. ಹೂ, ಸೀಯಾಳಗಳು ವಿತರಿಸಲ್ಪಡುವುದಲ್ಲದೇ ಈ ಕಾನನದೊಳಗಿನ ಮರಳಿನ ಕಣಗಳೇ ಭಕ್ತರ ಹಣೆ ಸೇರುತ್ತದೆ. ಮರುದಿನದ ಸೇವೆ ಮತ್ತೆ ಅಲ್ಲಿ ನಡೆಯುವ ಪಂಚಾಮೃತಾಭಿಷೇಕದೊಂದಿಗೆ ಆರಂಭಗೊಳ್ಳುವುದು. ಈ ಬಾರಿಯ ಢಕ್ಕೆಬಲಿ ಸೇವೆಗಳು