Advertisement
ಭಾರತ ಲೀಗ್‌ನ ಮೊದಲ ಪಂದ್ಯದಲ್ಲಿ ಏಶ್ಯಾಡ್ ಚಾಂಪಿಯನ್ ಬಲಿಷ್ಠ ಜಪಾನ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಎರಡನೇ ಪಂದ್ಯದಲ್ಲಿ ಭಾರತೀಯರು ಕೊರಿಯ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿತ್ತು. ಬುಧವಾರ ನಡೆಯಲಿರುವ ತನ್ನ ಲೀಗ್‌ನ 4ನೇ ಪಂದ್ಯದಲ್ಲಿ ಭಾರತವು ಕೆನಡ ತಂಡವನ್ನು ಎದುರಿಸಲಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಇಳಿಯಿತು. 17ನೇ ನಿಮಿಷದಲ್ಲಿ ಸುಮಿತ್ ಭಾರತದ ಗೋಲಿನ ಖಾತೆಯನ್ನು ತೆರೆದರು. ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಆದರೆ ಮಲೇಷ್ಯಾ ಅಷ್ಟಕ್ಕೆ ಸುಮ್ಮನಾಗಿ ಕೂರಲಿಲ್ಲ. 21ನೇ ನಿಮಿಷದಲ್ಲಿ ರಝಿ ಮೂಲಕ ಗೋಲಿನ ಖಾತೆ ತೆರೆಯಿತು. 1-1 ಗೋಲುಗಳಿಂದ ಸಮ ಸಾಧಿಸಿಕೊಂಡಿತು. ಅನಂತರ ಹಂತದಲ್ಲಿ ಭಾರತದ ಆಟ ಮತ್ತಷ್ಟು ತೀವ್ರವಾಯಿತು. 27ನೇ ನಿಮಿಷದಲ್ಲಿ ಸುಮಿತ್ ಕುಮಾರ್ ಹಾಗೂ 36ನೇ ನಿಮಿಷದಲ್ಲಿ ವರುಣ್ ಗೋಲು ಸಿಡಿಸುವ ಮೂಲಕ ತಂಡದ ಒಟ್ಟಾರೆ ಗೋಲಿನ ಸಂಖ್ಯೆಯನ್ನು 3-1ಕ್ಕೆ ಏರಿಸಿತು. ಪಂದ್ಯದ 57ನೇ ನಿಮಿಷದಲ್ಲಿ ಮಲೇಷ್ಯಾ ಪರ ಫರ್ಹಾನ್ ಗೋಲು ಸಿಡಿಸಿದರು. ತಂಡದ ಹಿನ್ನಡೆ ಅಂತರವನ್ನು 2-3ಕ್ಕೆ ತಗ್ಗಿಸಿದರು. ಆದರೆ 58ನೇ ನಿಮಿಷದಲ್ಲಿ ಮಂದೀಪ್ ಗೋಲು ಬಾರಿಸಿದ್ದರಿಂದ ಭಾರತ 4-2ಕ್ಕೆ ಗೋಲು ಹೆಚ್ಚಿಸಿಕೊಂಡಿತ್ತಲ್ಲದೆ ಗೆಲುವನ್ನೂ ಖಾತ್ರಿಗೊಳಿಸಿತು.