Advertisement

ಉಗ್ರ ಪಟ್ಟಿಗೆ ಅಜರ್‌: ಚೀನಾ ಮತ್ತೆ ಅಡ್ಡಿ

12:30 AM Mar 14, 2019 | |

ವಿಶ್ವಸಂಸ್ಥೆ: ಪುಲ್ವಾಮಾ ದಾಳಿಯ ರೂವಾರಿ, ಜೈಶ್‌ ಎ ಮೊಹಮ್ಮದ್‌ ಭಯೋತ್ಪಾದನಾ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಸತತ ನಾಲ್ಕನೇ ಬಾರಿಗೆ ಚೀನಾ ತಡೆಯೊಡ್ಡಿದೆ. 

Advertisement

ಈ ಮೂಲಕ ತನ್ನ ಪರಮಾಪ್ತ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡುವ ತನ್ನ ಕಳ್ಳಾಟವನ್ನು ಮುಂದುವರಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬುಧವಾರ ತಡರಾತ್ರಿ ನಡೆದ ಮತದಾನದ ವೇಳೆ, ಚೀನಾ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ವಿರೋಧ ವ್ಯಕ್ತಪಡಿಸಿತು. ನಿಷೇಧಿಸಲು ಇನ್ನಷ್ಟು ಸಾಕ್ಷ್ಯ, ಸಮಯಾವಕಾಶ ಬೇಕು ಎಂದು ಹೇಳಿತು.

ಈಗಾಗಲೇ ಭಾರತ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿರುವ ಅಮೆರಿಕ, ಯು.ಕೆ., ಫ್ರಾನ್ಸ್‌, ರಷ್ಯಾದ ಬೆಂಬಲ ಪಡೆದಿತ್ತು. ಅಲ್ಲದೆ ಬುಧವಾರ ಫ್ರಾನ್ಸ್‌, ಅಮೆರಿಕ ಮತ್ತು ಇಂಗ್ಲೆಂಡ್‌ ದೇಶಗಳೇ ಮಸೂದ್‌ನನ್ನು ನಿಷೇಧಿಸುವ ಪ್ರಸ್ತಾಪ ಮಂಡಿಸಿದ್ದವು. ಈ ಬೆಳವಣಿಗೆ ನಂತರ ಮಾತನಾಡಿರುವ ಭಾರತ ವಿದೇಶಾಂಗ ಇಲಾಖೆ, ಚೀನಾದ ನಡೆ ಅಸಮಾಧಾನ ತಂದಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next