Advertisement

ಪಾಕ್‌ ಎದುರಿನ ಟಿ20 ಸರಣಿಗೆ ಅಜರ್‌ ಮಹಮೂದ್‌ ಕೋಚ್‌

09:49 PM Aug 20, 2020 | mahesh |

ಲಂಡನ್‌: ಮುಂಬರುವ ಪಾಕ್‌ಎದುರಿನ 3 ಪಂದ್ಯಗಳ ಟಿ20 ಸರಣಿಗೆ ಪಾಕಿಸ್ಥಾನದ ಮಾಜಿ ಆಲ್‌ರೌಂಡರ್‌ ಅಜರ್‌ ಮಹಮೂದ್‌ ಇಂಗ್ಲೆಂಡ್‌ ತಂಡದ ಸಹಾಯಕ ಬೌಲಿಂಗ್‌ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದಾರೆ. 45 ವರ್ಷದ ಅಜರ್‌ ಪ್ರಧಾನ ಕೋಚ್‌ ಜಾನ್‌ ಲೂಯಿಸ್‌ ಅವರಿಗೆ ಸಹಕರಿಸಲಿದ್ದಾರೆ ಎಂದು ಇಂಗ್ಲೆಂಡ್‌ ಇಸಿಬಿ ಪ್ರಕಟಿಸಿದೆ.

Advertisement

ಅಜರ್‌ ಮಹಮೂದ್‌ ಈಗ ಬ್ರಿಟನ್‌ ಪೌರತ್ವ ಪಡೆದಿದ್ದು, ಕಳೆದ ವರ್ಷ ಮಿಕ್ಕಿ ಆರ್ಥರ್‌ ಅವರೊಂದಿಗೆ ಪಾಕಿಸ್ಥಾನ ಕೋಚಿಂಗ್‌ ತಂಡದ ಸದಸ್ಯರಾಗಿದ್ದರು. ಮಾರ್ಕಸ್‌ ಟ್ರೆಸ್ಕೋಥಿಕ್‌ ಇಂಗ್ಲೆಂಡ ತಂಡದ ಬ್ಯಾಟಿಂಗ್‌ ಕೋಚ್‌, ಜೇಮ್ಸ್‌ ಫಾಸ್ಟರ್‌ ವಿಕೆಟ್‌ ಕೀಪಿಂಗ್‌ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದಾರೆ. ಇದೇ ವೇಳೆ ಇಂಗ್ಲೆಂಡ್‌ ತಂಡವನ್ನೂ ಪ್ರಕಟಿಸಲಾಗಿದ್ದು, ಮಾರ್ಗನ್‌ ನಾಯಕ ರಾಗಿರುತ್ತಾರೆ. ಜೇಮ್ಸ್‌ ವಿನ್ಸ್‌ ಬದಲು ಡೇವಿಡ್‌ ಮಾಲನ್‌ ಅವರನ್ನು ಸೇರಿಸಿಕೊಳ್ಳ ಲಾಗಿದೆ. ಸರಣಿಯ 3 ಪಂದ್ಯಗಳು ಆ. 28, ಆ. 30 ಮತ್ತು ಸೆ. ಒಂದರಂದು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next