ಲಂಡನ್: ಮಾಜಿ ನಂಬರ್ ವನ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ವಿಂಬಲ್ಡನ್ ಟೆನಿಸ್ ಕೂಟದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಚೆಕ್‌ನ ಪ್ರಬಲ ಆಟಗಾರ್ತಿ ಬಾಬೊìರಾ ಸ್ಟ್ರೈಕೊವಾ ಸೋತು ಕೂಟದಿಂದ ಹೊರಬಿದ್ದಿದ್ದಾರೆ. ಇದು ವಿಂಬಲ್ಡನ್‌ನ ಮಹಿಳಾ ಸುತ್ತಿನಲ್ಲಿ ದಾಖಲಾದ ಮೊದಲ ಆಘಾತಕಾರಿ ಫಲಿತಾಂಶ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ಅಜರೆಂಕಾ 6-3, 6-3ರಿಂದ ರಶ್ಯದ ಎಲಿನಾ ವೆಸ್ನಿನಾ ವಿರುದ್ಧ ಜಯ ಸಾಧಿಸಿದರು. ಪ್ರಬಲ ಸರ್ವ್‌ಗಳ ಮೂಲಕ ಅಂಕಗಳನ್ನು ಕಲೆಹಾಕುತ್ತಾ ಹೋದ ಅಜರೆಂಕಾ ಯಾವುದೇ ಹಂತದಲ್ಲಿಯೂ ಎದುರಾಳಿ ಆಟಗಾರ್ತಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
ಮತ್ತೂಂದು ಪಂದ್ಯದಲ್ಲಿ ವಿಶ್ವದ 20ನೇ ರ್‍ಯಾಂಕಿನ ಸ್ಟ್ರೈಕೊವಾ 1-6, 6-0, 4-6ರಿಂದ ಜಪಾನ್‌ನ ನವೋಮಿ ಒಸಾಕಾ ವಿರುದ್ಧ ಆಘಾತಕಾರಿ ಸೋಲನ್ನು ಅನುಭವಿಸಿದ್ದಾರೆ. ಮೊದಲ ಸೆಟ್ ಕಳೆದುಕೊಂಡ ಸ್ಟ್ರೈಕೊವಾ 2ನೇ ಸೆಟ್‌ನಲ್ಲಿ ಭರ್ಜರಿ ಜಯ ಸಾಧಿಸಿದ್ದರು. ಆದರೆ ನಿರ್ಣಾಯಕವಾಗಿದ್ದ 3ನೇ ಸೆಟ್‌ನಲ್ಲಿ ಜಪಾನ್ ಆಟಗಾರ್ತಿ ವಶಪಡಿಸಿಕೊಂಡು 3ನೇ ಸುತ್ತಿಗೆ ಪ್ರವೇಶಿಸಿದರು. ಉಳಿದಂತೆ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಸ್ಲೊವೇಕಿಯಾದ ಡೊಮೆನಿಕಾ ಸಿಬುಲ್ಕೋವಾ, ಇಂಗ್ಲೆಂಡ್‌ನ ಹೆದರ್ ವಾಟ್ಸನ್, ಗ್ರೀಸ್‌ನ ಮಾರಿಯಾ ಸಕಾರಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಕೆರ್ರಿ, ಸೋಂಗ 3ನೇ ಸುತ್ತಿಗೆ: ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಅಮೆರಿಕದ ಸ್ಯಾಮ್ ಕೆರ್ರಿ, ಫ್ರಾನ್ಸ್‌ನ ಜೋ ವಿಲ್ಫೆ†ಡ್ ಸೋಂಗ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಸ್ಯಾಮ್ ಕೆರ್ರಿ 6-4, 4-6, 6-3, 6-3ರಿಂದ ಜಾರ್ಜಿಯಾದ ನಿಕಲೋಜ್ ಬಸಿಲ್‌ಸಿಲ್Ì ವಿರುದ್ಧ ವಿಜಯ ದಾಖಲಿಸಿದರು. ಇಬ್ಬರು ಆಟಗಾರರ ನಡುವೆ ಭರ್ಜರಿ ಹೋರಾಟ ನಡೆಯಿತು. ಅಂತಿಮವಾಗಿ ಕೆರ್ರಿ ಪಂದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪುರುಷರ ಮತ್ತೂಂದು ಸಿಂಗಲ್ಸ್ ಪಂದ್ಯದಲ್ಲಿ ಫ್ರಾನ್ಸ್‌ನ ಜೋ ವಿಲ್ಫೆ†ಡ್ ಸೋಂಗ 6-1, 7-5, 6-2ರಿಂದ ಇಟಲಿಯ ಸೈಮನ್ ಬಾಯ್ಲ ವಿರುದ್ಧ ಗೆಲುವು ಪಡೆದರು.