Advertisement

ಆಜಾನ್ ವಿವಾದ; ಸುಪ್ರೀಂ ಆದೇಶ ಎಲ್ಲರೂ ಪಾಲನೆ ಮಾಡಬೇಕು: ಸಿಎಂ

02:50 PM May 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆಜಾನ್ ವಿವಾದ ತೀವ್ರಗೊಂಡಿರುವ ವೇಳೆ, ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಇದೆ. ಆ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು. ಈ ವಿಷಯ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ಏನೇನು ಆಗುತ್ತಿದೆ, ಬೇರೆ ಬೇರೆ ರಾಜ್ಯಗಳಲ್ಲಿ ಏನು ಆಗುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ ಎಂದರು.

ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಈ ಸಂಬಂಧ ಸಂಜೆಯ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಡಿಸಿ, ಸಿಇಒ ಗಳ ಜತೆ ಸಭೆ

ಸುಮಾರು ನಾಲ್ಕು ತಾಸು ನಿನ್ನೆ ಡಿಸಿಗಳ ಜತೆಗೆ ಸಭೆ ಮಾಡಿದ್ದೇನೆ. ಇವತ್ತು ಸಿಇಒಗಳ ಜೊತೆಗೆ ಸಭೆ ಮಾಡಿದ್ದೇನೆ. ಯಾವ ರೀತಿ ರಾಜ್ಯದ ಆಡಳಿತ ಚುರುಕು, ಜನಪರ ಆಗಿರಬೇಕು ಅಂತ ಹೇಳಿದ್ದೇನೆ. ಯೋಜನೆಗಳನ್ನು ದಕ್ಷತೆಯಿಂದ ಸಮಯಬದ್ದವಾಗಿ ಜನರಿಗೆ ಮುಟ್ಟಿಸಬೇಕು ಅಂತ ಹೇಳಿದ್ದೇನೆ ಎಂದರು.

Advertisement

ಗೃಹ, ಆಹಾರ, ರೇಷನ್ ಹಂಚಿಕೆ, ರಸ್ತೆಗಳ ನಿರ್ಮಾಣ, ಶಾಲೆ, ಆಸ್ಪತ್ರೆ ನಿರ್ಮಾಣ, ಮಹಿಳಾ ಅಭಿವೃದ್ಧಿ ಯೋಜನೆಗಳ ರಿವ್ಯೂ ಮಾಡಿದ್ದೇನೆ. ದಕ್ಷತೆಯಿಂದ ಸಮಯ ಬದ್ದ ವಾಗಿ ಕೆಲಸ ಮಾಡಿ, ಪೌಷ್ಟಿಕಾಹಾರ ನೀಡಲು, ಮಾನವ ಅಭಿವೃದ್ಧಿ ಒತ್ತು ಕೊಡಬೇಕು ಎಂದಿದ್ದೇನೆ. ಬಜೆಟ್ ನಲ್ಲಿ ವಿಶೇಷ ಕಾರ್ಯಕ್ರಮ ಮಾಡಿದ್ದೇವೆ. ಅವುಗಳ ಜಾರಿಗೆ ಕುರಿತು ಸೂಚನೆ ನೀಡಲಾಗಿದೆ ಎಂದರು.

7000 ಶಾಲಾ ಕಟ್ಟಡ, 4000 ಅಂಗನವಾಡಿ, ಮನೆಗಳು ನಿರ್ಮಾಣ ಕುರಿತು ಸೂಚನೆ ನೀಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next