Advertisement

ಅಜಂ ಖಾನ್‌ ವಿರುದ್ಧ ಸಿಡಿದೆದ್ದ ಸಂಸದೆಯರು

01:01 AM Jul 27, 2019 | mahesh |

ಹೊಸದಿಲ್ಲಿ: ಬಿಜೆಪಿ ಸದಸ್ಯೆ ರಮಾದೇವಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌ ವಿರುದ್ಧ ಲೋಕಸಭೆಯಲ್ಲಿ ಮಹಿಳಾ ಸಂಸದರು ಸಿಡಿದೆದ್ದಿದ್ದಾರೆ. ಪಕ್ಷಭೇದ ಮರೆತು ಖಾನ್‌ ಹೇಳಿಕೆಯನ್ನು ಖಂಡಿಸಿರುವ ಸಂಸದೆಯರು, ಅಜಂ ಖಾನ್‌ ಕೂಡಲೇ ಕ್ಷಮೆ ಯಾಚಿಸಬೇಕು ಅಥವಾ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

Advertisement

ಕೊನೆಗೆ, ಕ್ಷಮೆ ಕೇಳುವಂತೆ ಸ್ಪೀಕರ್‌ ಅವರೇ ಅಜಂ ಖಾನ್‌ಗೆ ಸೂಚಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ನುಡಿದಿದ್ದು, ವಿವಾದವನ್ನು ತಣ್ಣಗಾಗಿಸಿದ್ದಾರೆ. ಗುರುವಾರ ತ್ರಿವಳಿ ತಲಾಖ್‌ ಮಸೂದೆ ಕುರಿತ ಚರ್ಚೆ ವೇಳೆ ಸ್ಪೀಕರ್‌ ಪೀಠದಲ್ಲಿದ್ದ ರಮಾದೇವಿ ಅವರನ್ನು ಉದ್ದೇಶಿಸಿ ಅಜಂ ಖಾನ್‌ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಶುಕ್ರವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ಸಂಘಮಿತ್ರ ಮೌರ್ಯ ಅವರು ಈ ವಿಚಾರವನ್ನೆತ್ತಿದ್ದು, ಇದಕ್ಕೆ ಕಾಂಗ್ರೆಸ್‌, ಎನ್‌ಸಿಪಿ, ಟಿಎಂಸಿ, ಡಿಎಂಕೆ, ಬಿಜೆಡಿ ಸಂಸದೆಯರು ಕೂಡ ಧ್ವನಿಗೂಡಿಸಿ, ಖಾನ್‌ಗೆ ಕಠಿನ ಸಂದೇಶ ಕಳುಹಿಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು. ಸಚಿವರಾದ ಸ್ಮತಿ ಇರಾನಿ, ನಿರ್ಮಲಾ ಸೀತಾರಾಮನ್‌ ಕೂಡ ಖಾನ್‌ ವಿರುದ್ಧ ಕಿಡಿಕಾರಿದರು. ಬಿಎಸ್ಪಿ ನಾಯಕಿ ಮಾಯಾವತಿ ಅವರೂ ಖಾನ್‌ ಹೇಳಿಕೆ ಖಂಡಿಸಿದ್ದು, ಅವರು ಸದನದಲ್ಲಷ್ಟೇ ಅಲ್ಲ, ಇಡೀ ಮಹಿಳಾ ಲೋಕಕ್ಕೇ ಕ್ಷಮೆ ಕೇಳಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next