Advertisement

ಕತಾರ್‌ನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ

06:08 PM Apr 07, 2021 | Team Udayavani |

ಕತಾರ್ : ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ 75 ವಾರಗಳ ಸುದೀರ್ಘ‌ ಅವಧಿಯ ವಿವಿಧ ಕಾರ್ಯಕ್ರಮಗಳನ್ನು ಕತಾರ್‌ನಲ್ಲಿ ಆಯೋಜಿಸಲಾಗಿದೆ. ಈ ಆಚರಣೆಗೆ ಭಾರತ ಸರಕಾರ ಅಧಿಕೃತವಾಗಿ ಆಜಾದಿ ಕಾ ಅಮೃತ ಮಹೋತ್ಸವ ಎಂದು ಹೆಸರಿಸಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ  ಕತಾರ್‌ನ ಭಾರತದ ರಾಯಭಾರ ಕಚೇರಿಯಲ್ಲಿ ಮಾ. 26ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

Advertisement

ಕೋವಿಡ್‌ ನಿಯಮಾವಳಿಯನ್ನು ಪಾಲಿಸುವ ಹಿನ್ನೆಲೆಯಲ್ಲಿ ಈ ಸಮಾರಂಭವು ರಾಯಭಾರ ಕಚೇರಿಯ ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ಐಸಿಸಿ ನಿರ್ವಹಣಾ ಸಮಿತಿಯ ಸದಸ್ಯರಿಗೆ ಮಾತ್ರ ಸೀಮಿತವಾಗಿತ್ತು.

ಮುಖ್ಯ ಅತಿಥಿ, ಭಾರತದ ರಾಯಭಾರಿ ಡಾ| ದೀಪಕ್‌ ಮಿತ್ತಲ್‌ ಅವರು ದೀಪ ಬೆಳಗಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಭ್ರಮಾಚರಣೆಯ ಅಂಗವಾಗಿ 75  ಜನರಿಗೆ ಉಚಿತ ಐಸಿಬಿಎಫ್ ಜೀವ ವಿಮೆ  ಮತ್ತು ಐಸಿಸಿಎಫ್ ಅಧಿಕಾರಿಗಳಿಗೆ ಐಸಿಸಿಯಿಂದ ನೀಡಿದ ನಿಧಿಯನ್ನು ಹಸ್ತಾಂತರಿಸಲಾಯಿತು.

ಸಮಾರಂಭದ ಅನಂತರ ವರ್ಚುವಲ್‌ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಎಚ್‌.ಇ. ಖಾಲಿದ್‌ ಬಿನ್‌ ಇಬ್ರಾಹಿಂ ಅಲ್‌- ಹಮರ್‌, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರ್ದೇಶಕ, ಕತಾರ್‌ ಮತ್ತು ಭಾರತದ ರಾಯಭಾರಿಗಳು ಸಭೆಯಲ್ಲಿ ಮಾತನಾಡಿದರು.

Advertisement

ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಐಸಿಸಿ ಅಂಗಸಂಸ್ಥೆಗಳೊಂದಿಗೆ ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಉತ್ಸವಗಳನ್ನು ಚಿತ್ರಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಪ್ರಸಾರ ಮಾಡಲಾಯಿತು.

ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (75)ದ ಉದ್ಘಾಟನೆ ಕಾರ್ಯಕ್ರಮದಲ್ಲಿ ತುಳುಕೂಟ ಕತಾರ್‌ನ ಪ್ರತಿಭಾನ್ವಿತ ಸದಸ್ಯರಿಂದ ತುಳು ನೃತ್ಯ ರೂಪಕವನ್ನು ಪ್ರಸ್ತುತ

ಪಡಿಸಿದರು. ಈ ರೂಪಕದಲ್ಲಿ  ಚೇತನಾ ಅಡಪ, ಅಪರ್ಣಾ ಶರತ್‌, ಲಾವಣ್ಯಾ ಆಚಾರ್‌, ದಿವ್ಯಶ್ರೀ, ಸೌಮ್ಯಾ ಕೆ.ಟಿ., ಸೀಮಾ ಉಮೇಶ್‌ ಪೂಜಾರಿ, ಅನುಷ್ಕಾ ಉಮೇಶ್‌ ಪೂಜಾರಿ, ಸುಬೋಧ್‌ ಶೆಟ್ಟಿ, ಸುಹಾಸ್‌ ಶೆಟ್ಟಿ, ಗಿರೀಶ್‌ ಪುರಾಣಿಕ್‌, ಸುರೇಶ್‌ ಭಟ್‌, ಪುನೀತ್‌ ಸಾಗರ್‌, ಅಮಿತ್‌ ಪೂಜಾರಿ, ಮಂಜು ಕಗೇìರ್‌, ಅನುಷ್ಕಾ ಉಮೇಶ್‌ ಪೂಜಾರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next