Advertisement
ಹಿರಿಯ ಕಲಾವಿದರ ಜತೆಗೂಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಹೋರಾಟದ ಸನ್ನಿವೇಶಗಳನ್ನು ಕಲಾಕೃತಿಗಳ ಮೂಲಕ ಹಿಡಿದಿಡುವ ಕೆಲಸ ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಹುಟ್ಟೂರಿನಲ್ಲೆ ಅವರ ಸಾಧನೆ ಗಳನ್ನು ಪರಿಚಯಿಸುವ ಅಪರೂಪದ ಕಾರ್ಯಕ್ರಮ ಇದಾಗಿರಲಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಆಜಾದಿಕಾ ಅಮೃತ್ ಮಹೋತ್ಸವಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ ಅಕಾಡೆಮಿಗಳು ಮತ್ತು ಪ್ರಾಧಿಕಾರಿಗಳು ಹಲವು ರೀತಿಯ ಕಾರ್ಯಕ್ರಮ ಗಳನ್ನು ರೂಪಿಸುವಲ್ಲಿ ನಿರತವಾಗಿವೆ.
Related Articles
Advertisement
ಆ ಸ್ಥಳ ಮಹಿಮೆ ಬಗ್ಗೆ ಆ ಭಾಗದ ಜನರಿಗೆ ಐತಿ ಹಾಸಿಕ ಮಾಹಿತಿ ಸರಿಯಾಗಿಲ್ಲ.ಆ ಹಿನ್ನೆಲೆಯಲ್ಲಿ ಹಿರಿಯ ಕಲಾವಿದರು ಸ್ಥಳದಲ್ಲೇ ಚಿತ್ರ ಬಿಡಿಸುವ ಮೂಲಕ ಹೋರಾಟ ಸನ್ನಿವೇಶಗಳನ್ನು ಜನರಿಗೆ ಕಟ್ಟಿ ಕೊಡಲಿದ್ದಾರೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಹೇಳಿದ್ದಾರೆ.ಈ ಕಾರ್ಯಕ್ಕೆ ಹಿರಿಯ ಕಲಾವಿದರುಗಳನ್ನು ಬಳಸಿಕೊಳ್ಳಲು ಆಲೋಚನೆ ನಡೆಸಲಾಗಿದೆ. ಸುಮಾರು 50 ಜನ ಕಲಾವಿದರ ಜತೆಗೆ ಕಿರಿಯ ಕಲಾವಿದರನ್ನು ಕೂಡ ಬಳಕೆ ಮಾಡಿಕೊಳ್ಳಲಾಗುವುದು. ಕಾರ್ಯಕ್ರಮದ ರೂಪುರೇಷೆ ಗಳು ಕೂಡ ಸಿದ್ಧವಾಗುತ್ತಿವೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿ ತಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಅನುಮತಿ ಪಡೆಯಬೇಕಾಗಿದೆ. ಸರ್ಕಾರ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ ತಕ್ಷಣ ಜಿಲ್ಲಾವಾರು ಪ್ರವಾಸ ಆರಂಭವಾಗಲಿದೆ ಎಂದು ಅಕಾಡೆಮಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಜಾದಿಕಾ ಅಮೃತ್ ಮಹೋತ್ಸವ’ದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವಂತಹ ವಿಶಿಷ್ಟಕಾರ್ಯಕ್ರಮ ರೂಪಿಸುತ್ತಿದೆ. ಸ್ವಾತಂತ್ರ್ಯ ಸಂಗ್ರಾಮವನ್ನು ಜನರಿಗೆ ಚಿತ್ರಗಳ ಮೂಲಕ ಕಟ್ಟಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.– ಡಿ.ಮಹೇಂದ್ರ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ
–ದೇವೇಶ ಸೂರಗುಪ್ಪ