Advertisement

ಐಕಾನಿಕ್‌ ವೀಕ್‌ ಉದ್ಘಾಟನೆ; “ಜನಸಮರ್ಥ ಪೋರ್ಟಲ್‌ಗೆ ಅರ್ಜಿ ಸಲ್ಲಿಸಿ’

02:10 AM Jun 07, 2022 | Team Udayavani |

ಮಣಿಪಾಲ: ಆಜಾದಿ ಕಾ ಅಮೃತ್‌ ಮಹೋತ್ಸವದ ಹಿನ್ನೆಲೆಯಲ್ಲಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ವಿತ್ತ ಸವಾಲಯದಿಂದ ಹಮ್ಮಿಕೊಂಡಿದ್ದ ಐಕಾನಿಕ್‌ ವೀಕ್‌ ಆಚರಣೆಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದ್ದು ಅದರ ನೇರ ಪ್ರಸಾರ ಮಣಿಪಾಲದ ಕೆನರಾ ಬ್ಯಾಂಕ್‌ನ ಸಿಂಡಿಕೇಟ್‌ ಗೋಲ್ಡನ್‌ ಜ್ಯೂಬಿಲಿ ಹಾಲ್‌ನಲ್ಲಿ ಸೋಮವಾರ ನಡೆಯಿತು.

Advertisement

ಜಿಲ್ಲೆಯ ವಿವಿಧ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ನೇರ ಪ್ರಸಾರವನ್ನು ವೀಕ್ಷಿಸಿದರು.

ಎಲ್ಲ ಬ್ಯಾಂಕ್‌ಗಳು, ಸಾರ್ವಜನಿಕ ವಿಮಾ ಕಂಪೆನಿಗಳು ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಯ ಸಿಬಂದಿ ಮತ್ತು ಗ್ರಾಹಕರನ್ನು ಒಳಗೊಂಡು ಉದ್ಘಾಟನ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವವನ್ನು ಆಚರಿಸುತ್ತಿರುವ 75 ನಗರಗಳಲ್ಲಿ ಉಡುಪಿಯೂ ಒಂದಾಗಿದೆ. ಇದೇ ವೇಳೆ ಮೋದಿಯವರು “ಜನಸಮರ್ಥ ಪೋರ್ಟಲ್‌’ ಅನಾವರಣಗೊಳಿಸಿದರು.

ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ ವೃತ್ತ ಕಚೇರಿಯ ಮಹಾ ಪ್ರ ಬಂಧಕ ರಾಮ ನಾಯ್ಕ ಮಾತನಾಡಿ, ಜಿಲ್ಲೆಯ ಎಲ್ಲ ಅರ್ಹ ನಾಗರಿಕರನ್ನು ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ, ಮುದ್ರಾ, ಪಿಎಂಎಫ್‌ಎಂಇ, ಸ್ಟಾಂಡಪ್‌ ಮತ್ತು ಸ್ಟಾರ್ಟ್‌ಅಪ್‌ ಮೊದಲಾದ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅಡಿಯಲ್ಲಿ ಸಾಲಸೌಲಭ್ಯ ಪಡೆಯಲು ಏಕ ಗವಾಕ್ಷಿ ಮಾದರಿಯಲ್ಲಿ ಜನಸಮರ್ಥ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸಲ್ಲಿಸಿದ ಅರ್ಜಿಗಳನ್ನು ವಲಯ ಕಚೇರಿಯಿಂದಲೇ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು.

ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್‌ಎಲ್‌ಬಿಸಿ ಪರವಾಗಿ ಟಿ.ಎಸ್‌. ವಾಸುದೇವ ತಾತಾಚಾರ್‌ ಇದ್ದರು.

Advertisement

ಅಪರ ಜಿಲ್ಲಾಧಿಕಾರಿ ವೀಣಾ, ಬ್ಯಾಂಕ್‌ ಆಫ್ ಬರೋಡದ ರೀಜನಲ್‌ ಮ್ಯಾನೇಜರ್‌ ರವಿ ಬಿ., ಕೆನರಾ ಬ್ಯಾಂಕ್‌ ವಲಯ ಕಚೇರಿ-2ರ ರೀಜ ನ ಲ್‌ ಮ್ಯಾನೇಜರ್‌ ಶ್ರೀಜಿತ್‌ ಕೆ., ಯುನಿಯನ್‌ ಬ್ಯಾಂಕ್‌ನ ರೀಜನಲ್‌ ಮ್ಯಾನೇಜರ್‌ ಡಾ| ವಾಸಪ್ಪ, ಎಸ್‌ಬಿಐ ಉಡುಪಿ ಶಾಖೆಯ ಪರಾಂಜಪೆ, ಕರ್ನಾಟಕ ಬ್ಯಾಂಕ್‌ ರೀಜನಲ್‌ ಮ್ಯಾನೇಜರ್‌ ರಾಜ್‌ಗೊàಪಾಲ್‌, ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ನಿತ್ಯಾನಂದ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದ ಹುಬ್ಬಳ್ಳಿಯ ರಮೇಶ್‌, ಕೆನರಾ ಬ್ಯಾಂಕ್‌ ಡಿಜಿಎಂ ಸತ್ಯನಾರಾಯಣ, ಮಣಿಪಾಲ ವೃತ್ತ ಕಚೇರಿಯ ಡಿಜಿಎಂ ಪದ್ಮಾವತಿ ಉಪಸ್ಥಿತರಿದ್ದರು.ಜಿಲ್ಲಾ ಲೀಡ್‌ ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಎಂ.ಪಿಂಜಾರ ಅವರು ಸ್ವಾಗತಿಸಿ ಕೆನರಾ ಬ್ಯಾಂಕ್‌ ವಲಯ ಕಚೇರಿ-1ರ ಡಿಜಿಎಂ ಲೀನಾ ಪಿಂಟೋ ವಂದಿಸಿದರು. ಕರುಣಾಕರ ಕಾರ್ಯಕ್ರಮ ನಿರೂಪಿಸಿದರು.

ಸಾಧನೆಗಳು ಇನ್ನಷ್ಟು ಉತ್ತುಂಗಕ್ಕೆ ‘
ಮಂಗಳೂರು: ಸ್ವಾತಂತ್ರ್ಯದ ಬಳಿಕದ 75 ವರ್ಷಗಳಲ್ಲಿ ದೇಶ ಸಾಧಿಸಿರುವ ಮಹತ್ತರ ಸಾಧನೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಸಿಜಿಎಸ್‌ಟಿ ಹಾಗೂ ಕಸ್ಟಮ್ಸ್‌ ಆಯಕ್ತ ಇಮಾಮುದ್ದೀನ್‌ ಆಹ್ಮದ್‌ ಅವರು ಹೇಳಿದರು.

ಅಜಾದ್‌ ಕಾ ಅಮೃತ ಮಹೋತ್ಸವದ ಅಂಗವಾಗಿ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೆಟ್‌ ವ್ಯವಹಾರಗಳ ಸಚಿವಾಲಯ ಸೋಮವಾರ ಆಯೋಜಿಸಿರುವ ಐಕಾನ್‌ ಸಪ್ತಾಹವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸುವ ಸಮಾರಂಭದ ಅಂಗವಾಗಿ ಮಂಗಳೂರಿನಲ್ಲಿ ಆದಾಯ ತೆರಿಗೆ(ಸಿಬಿಡಿಟಿ) ಇಲಾಖೆಯು ಪಡೀಲ್‌ ಐಸಿಎಐ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ದೇಶ ಕಳೆದ 75 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದೆ. ಹಣಕಾಸು ಮತ್ತು ಕಾರ್ಪೊರೆಟ್‌ ವ್ಯವಹಾರಗಳ ಕ್ಷೇತ್ರದಲ್ಲೂ ಅಸಾಧಾರಣ ಪ್ರಗತಿ ಆಗಿದೆ. ಐಕಾನ್‌ ಸಪ್ತಾಹ ಆಚರಣೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದಾರೆ. ನಾವು ಸಾಧನೆಗಳನ್ನು ಸಂಭ್ರಮಿಸುವ ಜತೆಗೆ ಹೆಚ್ಚಿನ ಸಾಧನೆಯನ್ನು ಮಾಡುವ ಗುರಿಯನ್ನು ಇರಿಸಿಕೊಂಡು ಮುನ್ನಡೆಬೇಕಾಗಿದೆ ಎಂದರು.

ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ದೀಪಿಕಾ ಆರೋರಾ, ಚಂದ್ರ ಕುಮಾರ್‌ ಕೆ.ಎ., ಸುರೇಶ್‌ ರಾವ್‌, ಜಂಟಿ ಆಯಕ್ತ ಎಸ್‌. ಮಣಿಕಂಠನ್‌, ಸಿಜಿಎಸ್‌ಟಿ ಹೆಚ್ಚುವರಿ ಆಯುಕ್ತ ಜಾನ್‌ ಜಾರ್ಜ್‌, ರೀನಾ ಶೆಟ್ಟಿ, ಐಸಿಎಐ ಮಂಗಳೂರು ಅಧ್ಯಕ್ಷ ಪ್ರಸನ್ನ ಶೆಣೈ, ಕಾರ್ಯದರ್ಶಿ ಗೌತಮ್‌ ಪೈ ಉಪಸ್ಥಿತರಿದ್ದರು. ಆದಾಯ ತೆರಿಗೆ ಉಪ ಆಯುಕ್ತ ಮಂಜುನಾಥ್‌ ಸ್ವಾಗತಿಸಿ ನಿರೂಪಿಸಿದರು. ಆದಾಯ ತೆರಿಗೆ, ಜಿಎಸ್‌ಟಿ ಇಲಾಖೆಗಳು, ಐಸಿಎಐ ಸದಸ್ಯರು ಭಾಗವಹಿಸಿದ್ದರು. ಮಂಗಳೂರು ಸೇರಿದಂತೆ ದೇಶದ 75 ನಗರಗಳಲ್ಲಿ ಐಕಾನ್‌ ಸಪ್ತಾಹ ಉದ್ಘಾಟನ ಸಮಾರಂಭದ ಪ್ರಸರಣ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next