Advertisement

ರಬಕವಿ-ಬನಹಟ್ಟಿಯಲ್ಲಿ ಮೊಳಗಿದ ಭಾರತ ಮಾತಾಕೀ ಜೈ ಘೋಷಣೆ: ಬೃಹತ್ ಬೈಕ್ ಜಾಥಾ

06:35 PM Aug 14, 2022 | Team Udayavani |

ರಬಕವಿ-ಬನಹಟ್ಟಿ: ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ನಿಮಿತ್ತವಾಗಿ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಭಾರತ ಮಾತಾಕೀ ಜೈ ಘೋಷಣೆ ಮುಗಿಲು ಮುಟ್ಟಿತು. ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ದ್ವಿಚಕ್ರ ವಾಹನಗಳದ್ದೇ ಸದ್ದು ಕಂಡು ಬಂತು.

Advertisement

ಭಾನುವಾರ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರಬಕವಿ-ಬನಹಟ್ಟಿ ತೇರದಾಳಗಳಲ್ಲಿ ಬೃಹತ್ ಬೈಕ್ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು, ಅಮೃತ ಮಹೋತ್ಸವವನ್ನು ಪ್ರತಿಯೊಬ್ಬರು ಮನೆಯಲ್ಲಿ ಆಚರಿಸಿ ಸಂಭ್ರಮ ಪಟ್ಟಿದ್ದಾರೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರತಿಯೊಬ್ಬರಲ್ಲಿ ಉತ್ಸಾಹ ತುಂಬಿದೆ.  ಲಕ್ಷಾಂತರ ಜನ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ‍್ಯ ಬಂದಿದೆ. ಈ ಸ್ವಾತಂತ್ರ‍್ಯದ ಮಹತ್ವ ಮತ್ತು ಅರಿವನ್ನು ನಾವು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಬೇಕಾಗಿದೆ. ಭಾರತ ವಿಶ್ವದ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವ ಗುರುವಾಗಲಿದೆ ಎಂದರು.

ಇಷ್ಟೊಂದು ಭಾರತದ ಧ್ವಜಗಳನ್ನು ಒಂದೇ ಬಾರಿ ನೋಡುವುದು ಕೂಡಾ ಒಂದು ಸೌಭಾಗ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಬನಹಟ್ಟಿಯ ನಿರೀಕ್ಷಣಾ ಮಂದಿರದಿಂದ ಆರಂಭಗೊಂಡ ಬೈಕ ಜಾಥಾ ರಾಮಪುರ, ರಬಕವಿ ಹಾಗೂ ತೇರದಾಳ ನಗರದ ಪ್ರಮುಖ ನಗರಗಳಲ್ಲಿ ಸಂಚರಿಸಿತು.

Advertisement

ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ರಾಜು ಅಂಬಲಿ, ಧರೆಪ್ಪ ಉಳ್ಳಾಗಡ್ಡಿ, ಬಾಬಾಗೌಡ ಪಾಟೀಲ, ವರ್ಧಮಾನ ಕೋರಿ, ಪ್ರಭಾಕರ ಮುಳೇದ, ಮಾಹಾವೀರ ಕೊಕಟನೂರ, ಪುಂಡಲೀಕ ಪಾಲಭಾವಿ, ಆನಂದ ಕಂಪು, ಸುರೇಶ ಅಕ್ಕಿವಾಟ, ಶಿವಾನಂದ ಗಾಯಕವಾಡ, ಶಿವಾನಂದ ಕಾಗಿ, ಕುಮಾರ ಕದಮ, ಮೀನಾಕ್ಷಿ ಸವದಿ, ಪವಿತ್ರಾ ತುಕ್ಕನವರ, ಸುನೀತಾ ನಂದಗೊಂಡ, ವೈಷ್ಣವಿ ಬಾಗೇವಾಡಿ, ಮಾಲಾ ಬಾವಲತ್ತಿ, ಸಂಗೀತಾ ಖಾನಾಪುರ, ಜಯಶ್ರೀ ಬಾಗೇವಾಡಿ ಸೇರಿದಂತೆ ಸಾವಿರಾರು ಜನರು ಇದ್ದರು.

ಸ್ಥಳೀಯ ಸಿಪಿಐ ಐ.ಎಂ.ಮಠಪತಿ, ಪಿಎಸ್‌ಐ ರಾಖೇಶ ಬಗಲಿ, ತೇರದಾಳ ಪಿಎಸ್‌ಐ ರವಿ ಪವಾರ, ಮಹಾಲಿಂಗಪುರ ಪಿಎಸ್‌ಐ ವಿಜಯ ಕಾಂಬಳೆ ಸೂಕ್ತ ಬಂದೊಬಸ್ತಿಯನ್ನು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next